ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾತ ಮಹಿಳೆಗೆ ಸರ್ಜರಿ ಮಾಡಿದ ಘಟನೆ ನಡೆದಿದೆ. ಮಹಿಳೆಯ ಅರೆ ನಗ್ನಗೊಲಿಸಿ ಈ ಸರ್ಜರಿ ಮಾಡಲಾಗಿದೆ. ಬಳಿಕ ಈ ವಿಡಿಯೋವನ್ನು ವ್ಯಾಟ್ಸಾಪ್ ಮೂಲಕ ಹಂಚಿಕೊಂಡಿದ್ದಾನೆ. ಈ ವಿಡಿಯೋದಿಂದ ಇದೀಗ ಪ್ರಕರಣ ಬೆಳಕಿಗೆ ಬಂದಿದೆ.
ಲಖನೌ(ಆ.16) ಶಸ್ತ್ರಚಿಕಿತ್ಸೆಯನ್ನು ನುರಿತ ವೈದ್ಯರೇ ಮಾಡುತ್ತಾರೆ. ಅದರಲ್ಲೂ ಟ್ರೈನಿ, ತರಬೇತಿ ಮುಗಿಸಿ ಬಂದ ವೈದ್ಯರಿಗೂ ಅವಕಾಶವಿಲ್ಲ. ಹೀಗಿರುವಾಗ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಮಹಿಳೆಗೆ ಸರ್ಜರಿ ಮಾಡಿ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಮಹಿಳೆಯನ್ನು ಅರೆ ನಗ್ನಗೊಳಿಸಿ ಈ ಸರ್ಜರಿ ಮಾಡಲಾಗಿದೆ. ಈ ವಿಡಿಯೋವನ್ನು ಈತ ರೆಕಾರ್ಡ್ ಮಾಡಿ ವ್ಯಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ. ವ್ಯಾಟ್ಸಾಪ್‌ನಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಾಗಿದೆ.
ಬಸ್ತಿ ಕೇರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಣ್ಣಿನ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಕೆಲ ದಿನಗಳ ಮೊದಲು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಹಿಳೆಯ ಸರ್ಜರಿಯನ್ನು ವಾರ್ಡ್ ಬಾಯ್ ಮಾಡಿದ್ದಾನೆ. ಮಹಿಳೆಯ ಅರೆ ನಗ್ನಗೊಳಿಸಿ ಸರ್ಜರಿ ಮಾಡಿ ಈ ವಿಡಿಯೋವನ್ನು ವ್ಯಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದಾನೆ. ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಇತರ ಸಿಬ್ಬಂದಿಗಳು ಈ ವಿಡಿಯೋ ನೋಡಿ ಗಾಬರಿಗೊಂಡಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸ್ತನ ಕಸಿ ಶಸ್ತ್ರಚಿಕಿತ್ಸೆ ವೀಡಿಯೋ ವೈರಲ್: ವೈದ್ಯರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆ
ಜಿಲ್ಲಾ ಆರೋಗ್ಯ ಅಧಿಕಾರಿಗೂ ಮಾಹಿತಿ ಸಿಕ್ಕಿದೆ. ಈ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಸರ್ಜರಿ ಮಾಡಿದ ವಾರ್ಡ್ ಬಾಯ್, ವೈದ್ಯರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆಪರೇಶನ್ ಥೀಯಟರ್‌ಗಳಲ್ಲಿ ವೈದ್ಯರ ಸಲಕರಣೆ, ಔಷದಿ ಸೇರಿದಂತೆ ಇನ್ನಿತರ ವಸ್ತುಗಳ ಪೂರೈಕೆ ಮಾಡುತ್ತಾ ವೈದ್ಯರಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ವಾರ್ಡ್ ಬಾಯ್ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾನೆ. ಆಸ್ಪತ್ರೆ ನಿರ್ದೇಶಕ ಡಾ.ಸಂಜಯ್ ಕುಮಾರ್ ಸೂಚನೆ ಮೇರೆಗೆ ಸರ್ಜರಿ ನಡೆಸಿರುವುದಾಗಿ ಹೇಳಿದ್ದಾನೆ.
ಆದರೆ ಸಂಜಯ್ ಕುಮಾರ್ ಈ ಘಟನೆ ನನ್ನ ಅರಿವಿನಲ್ಲಿ ನಡೆದಿಲ್ಲ ಎಂದಿದ್ದಾರೆ. ತದ್ವಿರುದ್ಧ ಹೇಳಿಕೆಗಳು ಇದೀಗ ಅನುಮಾನ ಹೆಚ್ಚಿಸಿದೆ. ವೈದ್ಯರ ಸೂಚನೆ ಮೇರೆಗೆ ಸರ್ಜರಿ ನಡೆಸಿರುವ ಸಾಧ್ಯತೆ ಇದೆ ಅನ್ನೋ ಅನುಮಾನಗಳು ಹೆಚ್ಚಾಗುತ್ತಿದೆ. ಇದೇ ವೇಳೆ ಇದೇ ರೀತಿ ಹಲವು ರೋಗಿಗಳಿಗೆ ಇದೇ ವಾರ್ಡ್ ಬಾಯ್ ಸರ್ಜರಿ ಮಾಡಿರುವ ಸಾಧ್ಯತೆಯನ್ನು ತನಿಖಾ ತಂಡ ವ್ಯಕ್ತಪಡಿಸಿದೆ.
ಆಸ್ಪತ್ರೆ ಆಡಳಿತ ಮಂಡಳಿ ತನಿಖಾ ತಂಡ ರಚನೆ ಮಾಡಿ ತನಿಖೆಗೆ ಆದೇಶಿಸಿದೆ. ಆದರೆ ಈ ಘಟನೆ ಇದೀಗ ಬಾರಿ ಆಕ್ರೋಶಕ್ಕೆ ಕಾರಣವಾಗಿದೆ. ರೋಹಿಗಳ ಜೀವದ ಮೇಲೆ ವೈದ್ಯರು ಹಾಗೂ ಸಿಬ್ಬಂದಿಗಳು ಆಟವಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕಣ್ಣಿಗೆ ಲೆನ್ಸ್ ಧರಿಸುವವರೇ ಎಚ್ಚರ, ಕಾರ್ನಿಯಾ ಗಾಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ!