ಲಡಾಖ್ ಬಿಕ್ಕಟ್ಟು ಪರಿಹಾರಕ್ಕೆ ಉನ್ನತ ಮಟ್ಟದ ಮಾತುಕತೆ, ಲೆ.ಜ.ಪಿಜಿಕೆ ಮೆನನ್‌ಗೆ ಜವಾಬ್ದಾರಿ!

Published : Sep 21, 2020, 05:10 PM IST
ಲಡಾಖ್ ಬಿಕ್ಕಟ್ಟು ಪರಿಹಾರಕ್ಕೆ ಉನ್ನತ ಮಟ್ಟದ ಮಾತುಕತೆ, ಲೆ.ಜ.ಪಿಜಿಕೆ ಮೆನನ್‌ಗೆ ಜವಾಬ್ದಾರಿ!

ಸಾರಾಂಶ

ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷವನ್ನು ಮಾತುಕತೆ ಮೂಲಕ ಬಗೆ ಹರಿಸಲು ಮಾಡಿದ ಭಾರತದ ಪ್ರಯತ್ನಗಳು ಫಲಕಾರಿಯಾಗಿಲ್ಲ. ಉನ್ನತ ಮಟ್ಟದ ಮಾತುಕತೆಯಲ್ಲಿ ಭಾರತ ಸೇನಾ ಪ್ರತಿನಿಧಿಯಾಗಿ ಪಾಲ್ಗೊಂಡ ಕಮಾಂಡರ್ ಲೆ.ಜ.ಹರೀಂದ್ರ ಸಿಂಗ್ ಉತ್ತರಾಧಿಕಾರಿಯಾಗಿ ಇದೀಗ ಲೆ.ಜ.ಪಿಜಿಕೆ ಮೆನನ್‌ಗೆ ಜವಾಬ್ದಾರಿ ನೀಡಲಾಗಿದೆ.

ನವದೆಹಲಿ(ಸೆ.21): ಲಡಾಖ್ ಗಡಿಯಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಭಾರತೀಯ ಸೇನೆ ಹಲವು ಸುತ್ತಿನ ಮಾತುಕತೆ ನಡೆಸಿದೆ.  ಆದರೆ ಚೀನಾ ಯಥಾ ಸ್ಥಿತಿ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಇಂದು ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಉನ್ನತ ಮಟ್ಟದ ಮಾತುಕತೆ ನಡೆಸಲಿದೆ. ಈ ಹಿಂದಿನ ಮಾತುಕತೆಗಳಲ್ಲಿ ಭಾರತೀಯ ಸೇನಾ ಪ್ರತಿನಿಧಿಯಾಗಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಪಾಲ್ಗೊಂಡಿದ್ದರು . ಇದೀಗ ಭಾರತೀಯ ಸೇನಾ ಪ್ರತಿನಿಧಿಯಾಗಿ  ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ..

ತಂಟೆಗೆ ಬಂದ್ರೆ ಹುಷಾರ್, ಚೀನಾಕ್ಕೆ ಗಡಿಯಲ್ಲಿ ಭಾರತದ 'ಡಬಲ್' ಶಾಕ್

ಕಳೆದ 5 ಉನ್ನತ ಮಟ್ಟದ ಸೇನಾ ಮಾತುಕತೆಗಳಲ್ಲಿ ಲಡಾಖ್ ಗಡಿ ಸಂಘರ್ಷ ಅಂತ್ಯಗೊಳಿಸಲು ಪ್ರಯತ್ನ ಮಾಡಲಾಗಿದೆ. ಆದರೆ ಮಾತುಕತೆ ಫಲಪ್ರದವಾಗಿಲ್ಲ. ಆರ್ಮಿ ಹೆಡ್‌ಕ್ವಾರ್ಟರ್‌ನಲ್ಲಿ CABನ ಅಡೀಶನಲ್ ಡೈರೆಕ್ಟರ್ ಜನರಲ್ ಆಗಿ ಪಿಜಿಕೆ ಮೆನನ್ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸೇನೆಯ ಸೇವಾ ಪರಿಹಾರ ಕಾರ್ಯವಿಧಾನದ ಉಸ್ತುವಾರಿ  ಹೊಣೆ ಹೊತ್ತಿರುವ ಮೆನನ್, ನೇರವಾಗಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾನೆ ಅವರಿಗೆ ವರದಿ ಸಲ್ಲಿಸುತ್ತಾರೆ.

ಭಾರತ ಸೇನೆ ಸಿದ್ಧತೆ ಮಾಹಿತಿ ಕೇಳಿ ಬೆಚ್ಚಿದ ಚೀನಾ! ನಮ್ಮ ಶಕ್ತಿ ಎಷ್ಟು? ಅವರದ್ದೆಷ್ಟು?

ಅಕ್ಟೋಬರ್ ತಿಂಗಳಿನಿಂದ ಮೆನನ್ ಜವಾಬ್ದಾರಿ ವಹಿಸಲಿದ್ದಾರೆ. ಅಡೀಶನಲ್ ಡೈರೆಕ್ಟರ್ ಜನರಲ್ ಆಫ್ ಇಂಡಿಯನ್ ಆರ್ಮಿ ಜವಾಬ್ದಾರಿ ಜೊತೆಗೆ ಸಿಖ್ ರೆಜಿಮೆಂಟ್‌ನ ಕರ್ನಲ್ ಆಫ್ ರೆಜಿಮೆಂಟ್ (ಹಿರಿಯ-ಹೆಚ್ಚುವರಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ) ಆಗಿದ್ದಾರೆ. 

  ಶಾಂತಿ ಸ್ಥಾಪನೆ, ಯಥಾ ಸ್ಥಿತಿ ಕಾಪಾಡುವಿಕೆ ಕುರಿತು ಚೀನಾ ಜೊತೆಗಿನ ಹಲವು ಮಾತುಕತೆಗಳಲ್ಲಿ ಈಗಾಗಲೇ ಮೆನನ್ ಪಾಲ್ಗೊಂಡಿದ್ದಾರೆ.  2018 ರ ನವೆಂಬರ್‌ನಲ್ಲಿ ಮೆನನ್ ಅರುಣಾಚಲ ಪ್ರದೇಶ- ಟಿಬೆಟ್ ಗಡಿಯಲ್ಲಿರುವ ಬಮ್ ಲಾದಲ್ಲಿ ಭಾರತ ಮತ್ತು ಚೀನಾ ನಡುವಿನ ಜನರಲ್ ಮಟ್ಟದ ಮಾತುಕತೆಗಳನ್ನು ಮೆನನ್ ಮುನ್ನಡೆಸಿದ್ದಾರೆ. ಈ ವೇಳೆ  ಮೆನನ್ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸುತ್ತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ