CAPF ಸಿಬ್ಬಂದಿಗೂ ಆಯುಷ್ಮಾನ್‌ ವಿಮಾ ಯೋಜನೆ ಜಾರಿ

Kannadaprabha News   | Asianet News
Published : Nov 04, 2021, 10:17 AM ISTUpdated : Nov 04, 2021, 10:39 AM IST
CAPF ಸಿಬ್ಬಂದಿಗೂ ಆಯುಷ್ಮಾನ್‌ ವಿಮಾ ಯೋಜನೆ ಜಾರಿ

ಸಾರಾಂಶ

 ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌)ಯ ಎಲ್ಲಾ 35 ಲಕ್ಷ ಸಿಬ್ಬಂದಿಗೆ ವಿಮಾ ಸೌಲಭ್ಯ  ‘ಆಯುಷ್ಮಾನ್‌ ಸಿಎಪಿಎಫ್‌’ ಯೋಜನೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಚಾಲನೆ 

ನವದೆಹಲಿ (ನ.04): ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ (CAPF)ಯ ಎಲ್ಲಾ 35 ಲಕ್ಷ ಸಿಬ್ಬಂದಿಗೆ ವಿಮಾ ಸೌಲಭ್ಯ ಕಲ್ಪಿಸುವ ‘ಆಯುಷ್ಮಾನ್‌ ಸಿಎಪಿಎಫ್‌’ ಯೋಜನೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಬುಧವಾರ ಇಲ್ಲಿ ಚಾಲನೆ ನೀಡಿದರು. ಆಯ್ದ ಎನ್‌ಸಿಜಿ (NCG) ಸಿಬ್ಬಂದಿ ಮತ್ತು ಎನ್‌ಸಿಜಿಯ ಪ್ರಧಾನ ನಿರ್ದೇಶಕರಿಗೆ ವಿಮಾ ಕಾರ್ಡ್‌ (Policy card) ವಿತರಿಸುವ ಮೂಲಕ ಅವರು ಯೋಜನೆಗೆ ಚಾಲನೆ ನೀಡಿದರು.

ಈ ಯೋಜನೆ ಜಾರಿಯಿಂದಾಗಿ ಎಲ್ಲಾ ಸಿಎಪಿಎಫ್‌ನ 35 ಲಕ್ಷ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರು, ಆಯುಷ್ಮಾನ್‌ ಯೋಜನೆ (Ayushman Yojana) ವ್ಯಾಪ್ತಿಗೆ ಒಳಪಟ್ಟದೇಶದ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.

ಕಾರ್ಡ್‌ ವಿತರಿಸಿ ಮಾತನಾಡಿದ ಅಮಿತ್‌ ಶಾ ‘ಔಷಧಗಳ ಪಿತಾಮಹ ಎನ್ನಿಸಿಕೊಂಡ ಧನ್ವಂತರಿಯ ಗೌರವಾರ್ಥವಾಗಿ ಆಚರಿಸುವ ಧನ್ವಂತರಿ ಪೂಜೆಯ (Dhanvantari Pooja) ಈ ಪವಿತ್ರ ದಿನದಂದು ವಿಮಾ ಕಾರ್ಡ್‌ ವಿತರಣೆಗೆ ಚಾಲನೆ ನೀಡಲಾಗುತ್ತಿದೆ. 

ಸಿಎಪಿಎಫ್‌ ಸಿಬ್ಬಂದಿ (CAPF Employees) ದೇಶದ ಭದ್ರತೆಯ ಹೊಣೆ ವಹಿಸಿಕೊಂಡಿದ್ದಾರೆ, ಮೋದಿ ಸರ್ಕಾರ (Modi Govt) ಈ ಸಿಬ್ಬಂದಿಗಳ ಹೊಣೆ ವಹಿಸಿಕೊಳ್ಳಲಿದೆ. ಕೇಂದ್ರೀಯ ಸಶಸ್ತ್ರ ಪಡೆಗಳ ವ್ಯಾಪ್ತಿಗೆ ಬರುವ ಅಸ್ಸಾಂ ರೈಫಲ್ಸ್‌ (Assam Rifals), ಬಿಎಸ್‌ಎಫ್‌ (BSF), ಸಿಐಎಸ್‌ಎಫ್‌ (CISF), ಸಿಆರ್‌ಪಿಎಫ್‌ (CRPF), ಐಟಿಬಿಪಿ (ITBP), ಎನ್‌ಎಸ್‌ಜಿ (NSG) ಮತ್ತು ಎಸ್‌ಎಸ್‌ಬಿಯ (SSB) ಎಲ್ಲಾ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗಕ್ಕೆ ಯೋಜನೆ ಅನ್ವಯವಾಗಲಿದೆ. 2021ರ ಡಿಸೆಂಬರ್‌ ಅಂತ್ಯದೊಳಗೆ ಎಲ್ಲಾ 35 ಲಕ್ಷ ಸಿಬ್ಬಂದಿಗೆ ಕಾರ್ಡ್‌ ವಿತರಿಸಲಾಗುವುದು’ ಎಂದು ಹೇಳಿದರು.

ವಿಮಾ ಲಾಭ ಪಡೆವ ಸಿಬ್ಬಂದಿ

ಪಡೆಗಳು ಸಿಬ್ಬಂದಿ ಸಂಖ್ಯೆ

ಎನ್‌ಎಸ್‌ಜಿ 32972

ಅಸ್ಸಾಂ ರೈಫಲ್ಸ್‌ 235132

ಐಟಿಬಿಪಿ 333243

ಎಸ್‌ಎಸ್‌ಬಿ 254573

ಸಿಐಎಸ್‌ಎಫ್‌ 466927

ಬಿಎಸ್‌ಎಫ್‌ 1048928

ಸಿಆರ್‌ಪಿಎಫ್‌ 1186998

ಒಟ್ಟು 3558773

ನಿಮ್ಮ ಆರೋಗ್ಯದ ಐಡಿ ಹೀಗೆ ಪಡೆಯಿರಿ

 

ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ(health) ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್‌ ಕಾರ್ಡ್‌(Digital Card) ವಿತರಿಸುವ ‘ಪ್ರಧಾನಿ ಮಂತ್ರಿ ಡಿಜಿಟಲ್‌ ಹೆಲ್ತ್‌ ಮಿಷನ್‌’(Pradhan Mantri Jan Arogya Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಇದರೊಂದಿಗೆ ಪ್ರಾಯೋಗಿಕವಾಗಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದ್ದ ಯೋಜನೆ ಇದೀಗ ದೇಶವ್ಯಾಪಿ ವಿಸ್ತರಣೆಯಾಗಿದೆ. ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ, ಸುಲಲಿತ, ಸಮಗ್ರ, ಅಗ್ಗದ ಮತ್ತು ಸುರಕ್ಷಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಯೋಜನೆ?

ಪ್ರಧಾನಮಂತ್ರಿ ಡಿಜಿಟಲ್‌ ಆರೋಗ್ಯ ಮಿಷನ್‌ ಯೋಜನೆಯಡಿ (ಎನ್‌ಡಿಎಚ್‌ಎಂ) ದೇಶದ ಪ್ರತಿಯೊಬ್ಬರಿಗೂ ಆಧಾರ್‌(Aadhar) ಮತ್ತು ಮೊಬೈಲ್‌ ಸಂಖ್ಯೆ ರೀತಿ ವಿಶೇಷ ಗುರುತಿನ ಸಂಖ್ಯೆ ಮತ್ತು ಕಾರ್ಡ್‌ ವಿತರಿಸಲಾಗುತ್ತದೆ. ಈ ಗುರುತಿನ ಚೀಟಿಯು ವ್ಯಕ್ತಿಯೊಬ್ಬರ ಆರೋಗ್ಯ ಕುರಿತಾದ ಎಲ್ಲಾ ಮಾಹಿತಿಯನ್ನು ಒಳಗೊಂಡಿರಲಿದೆ. ಅಂದರೆ ಕಾರ್ಡ್‌ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿಷಯ, ಅವರು ಆತನಿಗೆ ನೀಡಿದ ಚಿಕಿತ್ಸೆ, ವೈದ್ಯಕೀಯ ವರದಿಗಳು, ಕಾಯಿಲೆಗಳು ಸೇರಿದಂತೆ ಆತನ ಎಲ್ಲಾ ಆರೋಗ್ಯದ ಮಾಹಿತಿ ಒಳಗೊಂಡಿರುತ್ತದೆ.

ಏನಿದರ ಉಪಯೋಗ?

ಡಿಜಿಟಲ್‌ ಆರೋಗ್ಯ ಕಾರ್ಡಲ್ಲಿ(Digital Health card) ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಹೀಗಾಗಿ ವ್ಯಕ್ತಿಯೊಬ್ಬ ಭವಿಷ್ಯದಲ್ಲಿ ಯಾವುದೇ ವೈದ್ಯರ ಭೇಟಿ ವೇಳೆ ಈ ಕಾರ್ಡ್‌ ತೋರಿಸಿದರೆ ಅವರಿಗೆ ರೋಗಿಯ ಎಲ್ಲಾ ಪೂರ್ವಾಪರ ತಿಳಿಯುತ್ತದೆ. ಇದರಿಂದ ತಮ್ಮ ಹಳೆಯ ಚಿಕಿತ್ಸೆಯ ಮಾಹಿತಿಯ ಕಡತಗಳನ್ನು ರೋಗಿ ಎಲ್ಲೆಡೆ ತೆಗೆದುಕೊಂಡು ಹೋಗಬೇಕಿಲ್ಲ. ರೋಗಿಯ ಈ ಆರೋಗ್ಯ ಗುರುತಿನ ಚೀಟಿಯನ್ನು ನೋಡಿದರೆ, ವೈದ್ಯರು ಆರೋಗ್ಯ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು. ಜೊತೆಗೆ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಈ ಕಾರ್ಡ್‌ ಮೂಲಕ ರೋಗಿಗಳು ಆಯುಷ್ಮಾನ್‌ ಭಾರತ್‌ ಯೋಜನೆಯಂತಹ ಸರ್ಕಾರಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲೂ ಸಾಧ್ಯವಾಗಲಿದೆ. ಸರ್ಕಾರಕ್ಕೆ ನಿರ್ದಿಷ್ಟಯೋಜನೆ ರೂಪಿಸಲು ಸಾಧ್ಯವಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana