
ವಾರಾಣಸಿ(ಏ.04): ಕೊರೋನಾ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಕಡಿವಾಣ ಬಿದ್ದಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಉಳಿದುಕೊಂಡಿದ್ದಾರೆ. ರಸ್ತೆಗಳು, ಕಂಪನಿ, ಕಾರ್ಖಾನೆ ಹೀಗೆ ಎಲ್ಲಾ ಚಟುವಟಿಕೆಗಳು ಕಾರ್ಯ ಸ್ಥಗಿತಗೊಳಿಸಿವೆ. ಇನ್ನು ಈ ಲಾಕ್‌ಡೌನ್ ಮನುಷ್ಯರ ಓಡಾಟಕ್ಕೆ ಬ್ರೇಕ್ ಹಾಕಿದೆಯಾದರೂ, ಪ್ರಾಣಿ, ಪಕ್ಷಿಗಳು ಸ್ವಚ್ಛಂದವಾಗಿ ಓಡಾಟ ಹಾಗೂ ಹಾರಾಟ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಮೃಗಾಲಯದಲ್ಲಿ ಮಾತ್ರ ಕಂಡು ಬರುತ್ತಿದ್ದ ಕಾಡು ಪ್ರಾಣಿಗಳು ಕೂಡಾ ಕಾಣಲಾರಂಭಿಸಿವೆ. ವಾಯು ವಮಾಲಿನ್ಯಕ್ಕೂ ಕಡಿವಾಣ ಬಿದ್ದಿದೆ. ಮನುಷ್ಯರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿರುವುದರಿಂದ, ಪ್ರಕೃತಿ ಮಾತೆ ಉಸಿರಾಡಲಾರಂಬಿಸಿದ್ದಾಳೆ. ಹೀಗಿರುವಾಗ ಮಲಿನಗೊಂಡಿದ್ದ ಗಂಗಾ ನದಿ ಕೂಡಾ ಶೇ. 50ರಷ್ಟು ಸ್ವಚ್ಛಗೊಂಡಿದೆ.
ಹೌದು ಉತ್ತರ ಭಾರತೀಯರ ಜೀವನಾಡಿ ಗಂಗಾನದಿ ಕಾರ್ಖಾನೆಗಳು ಬಿಡುಗಡೆಗೊಳಿಸುತ್ತಿದ್ದ ಮಲಿನ, ಪೂಜೆ, ಪುನಸ್ಕಾರ ಎಂದು ದಿನೇ ದನೇ ಮಲಿನಗೊಳ್ಳುತ್ತಿತ್ತು. ಇದನ್ನು ಸ್ವಚ್ಛಗೊಳಿಸುವುದೇ ಸರ್ಕಾರಕ್ಕೆ ಬುದೊಡ್ಡ ಸವಾಲಾಗಿತ್ತು. ಆದರೀಗ ಇದೀಗ ಲಾಕ್‌ಡೌನ್‌ನಿಂದಾಗಿ ಕಾರ್ಖಾನೆಗಳು ಬಂದ್ ಆಗಿದ್ದಲ್ಲದೇ, ಜನರ ಓಡಾಟಕ್ಕೂ ಬ್ರೇಕ್ ಬಿದ್ದಿದೆ. ಹೀಗಾಗಿ ಗಂಗಾನದಿ ಸ್ವಚ್ಛವಾಗುತ್ತಿದೆ ಎಂದು ವಾರಣಾಸಿ ಐಐಟಿಯ(ಬಿಹೆಚ್‌ಯು)ಕೆಮಿಕಲ್ ಎಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ವಿಭಾಗದ ಪ್ರೊಫೆಸರ್ ಡಾ.ಪಿ.ಕೆ.ಮಿಶ್ರಾ ತಿಳಿಸಿದ್ದಾರೆ.
ಗಂಗಾನದಿ 1/10 ರಷ್ಟು ಭಾಗ ಕೈಗಾರಿಕೆಗಳಿಂದ ಮಲಿನವಾಗಿತ್ತು. ಆದರೀಗ ಎಲ್ಲಾ ಕೈಗಾರಿಕೆಗಳು, ಕಾರ್ಖಾನೆಗಳು ಬಂದ್ ಆಗಿರುವುದರಿಂದ ಗಂಗೆ ಸ್ವಚ್ಛವಾಗುತ್ತಿದ್ದಾಳೆ. ಗಂಗಾನದಿಯ ಮಾಲಿನ್ಯದ ಪ್ರಮಾಣ ಶೇಕಡಾ 40ರಿಂದ 50ರಷ್ಟು ತಗ್ಗಿದೆ. ಇದು ಬಹುದೊಡ್ಡ ಬೆಳವಣಿಗೆ ಎಂದು ಮಿಶ್ರಾ ಹೇಳಿದ್ದಾರೆ.
ದಶಕಗಳ ನಂತ್ರ ಜಲಂಧರ್ ನಿವಾಸಿಗಳಿಗೆ ಹಿಮಾಚಲ ಪರ್ವತ ಶ್ರೇಣಿ ದರ್ಶನ
ಇನ್ನು ವಾಯು ಮಾಲಿನ್ಯ ಪ್ರಮಾಣ ಕೂಡಾ ದಿನೇ ದಿನೇ ಕಡಿಮೆಯಾಗುತ್ತಿದೆ. ಪಂಜಾಬ್‌ನ ಜಲಂಧರ್‌ನಲ್ಲಿ ವಾಯುಮಾಲಿನ್ಯ ತಗ್ಗಿದ ಪರಿಣಾಮ 213 ಕಿ. ಮೀ ದೂರದ ಹಿಮಾಲಯದ ದೌಲಾಧರ್ ಪರ್ವತ ಶ್ರೇಣಿ ಕಳೆದ ನಾಲ್ಕೈದು ದಶಕಗಳಲ್ಲೇ ಮೊದಲ ಬಾರಿ ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ.
ನಗರದಲ್ಲಿ ವಾಯು ಮಾಲಿನ್ಯ ದಾಖಲೆ ಮಟ್ಟದಲ್ಲಿ ಕುಸಿತ!
ಇತ್ತ ಬೆಂಗಳೂರಿನಲ್ಲೂ ವಾಯುಗುಣ ಅಭಿವೃದ್ಧಿಸುತ್ತಿದ್ದು, ಜನರು ಸ್ವಚ್ಛವಾದ ಗಾಳಿ ಉಸಿರಾಡುವಂತಾಗಿದೆ. ಅತ್ತ ಟ್ರಾಫಿಕ್ ಹಾಗೂ ಹೊಗೆ ಸಮಸ್ಯೆಯಿಂದ ಬಳಲುತ್ತಿದ್ದ ದೆಹಲಿಯಲ್ಲೂ ವಾಯು ಮಾಲಿನ್ ತಗ್ಗಿದೆ ಎಂದು ವರದಿಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ