
ದೆಹಲಿ(ಮಾ.10): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲಿನ ಕಿರುಕುಳ ಪ್ರಕರಣ ಪ್ರತಿ ದಿನ ವರದಿಯಾಗುತ್ತಲೇ ಇದೆ. ಇದೀಗ ಹೋಳಿ ಹಬ್ಬದ ಸಂದರ್ಭದಲ್ಲೂ ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಹೋಳಿ ಹಬ್ಬದ ಸಂಭ್ರಮದ ನಡುವೆ ಯುವಕರ ಗುಂಪು ಜಪಾನ್ ಮಹಿಳೆಗೆ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಯವಕರ ಗುಂಪು ಮಹಿಳೆಯನ್ನು ಹಿಡಿದು ಎಳೆದಾಡಿದ್ದಾರೆ. ಆಕೆಯ ತಲೆಗೆ ಮೊಟ್ಟೆ ಒಡೆದಿದ್ದಾರೆ. ಬಣ್ಣ ಎರಚಿದ್ದು ಮಾತ್ರವಲ್ಲ, ಅನುಚಿತವಾಗಿ ವರ್ತಿಸಿದ್ದಾರೆ. ಜಪಾನ್ ಮಹಿಳೆಗೆ ಕಿರುಕಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.
ಭಾರತದ ಬಹುತೇಕ ನಗರದ ಬೀದಿ ಬೀದಿಗಳಲ್ಲಿ ಹೋಳಿ ಹಬ್ಬ ಆಚರಿಸಲಾಗಿದೆ. ಹಲವು ಸಂಘಟನೆಗಳು, ಯುವಕ, ಯುವತಿರ ಗುಂಪು, ಕಚೇರಿಗಳು ಸೇರಿದಂತೆ ಹಲವರು ಹೋಳಿ ಹಬ್ಬ ಆಯೋಜಿಸಿ ಸಂಭ್ರಮದಿಂದ ಆಚರಿಸಿದ್ದಾರೆ. ಹೀಗೆ ದೆಹಲಿಯಲ್ಲೂ ಹಲವೆಡೆ ಹೋಳಿ ಆಚರಿಸಲಾಗಿದೆ. ಈ ಹೋಳಿ ಆಚರಣೆ ನಡುವೆ ಸಿಲುಕಿದ ಜಪಾನ್ ಮಹಿಳೆ ಆರಂಭದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಿದ್ದಾರೆ.
ಹಿಂದೂಗಳ ಭಾವನಗೆ ಧಕ್ಕೆ: ಭಾರತ್ ಮ್ಯಾಟ್ರಿಮೋನಿ ಹೋಳಿ ವಿಡಿಯೋಗೆ ತೀವ್ರ ಆಕ್ರೋಶ
ಜಪಾನ್ ಮಹಿಳೆಯನ್ನು ಕಂಡ ಕೆಲ ಕಿಡೇಗೇಡಿಗಳು ಅತಿರೇಖದಿಂದ ವರ್ತಿಸಲು ಆರಂಭಿಸಿದ್ದಾರೆ. ಆಕೆಯನ್ನು ಹಿಡಿದು ಬಣ್ಣ ಎರಚಿದ್ದಾರೆ. ಯುವಕರ ಕೈಯಿಂದ ತಪ್ಪಿಸಿಕೊಳ್ಳಲು ಬಯಸಿದಿ ಜಪಾನ್ ಮಹಿಳೆ ತಲೆ ಮೇಲೆ ಮೊಟ್ಟೆ ಒಡೆದಿದ್ದಾರೆ. ಬಳಿಕ ಆಕೆಯನ್ನು ಹಿಡಿದು ಎಳೆದಾಡಿದ್ದಾರೆ. ಆಕೆಯ ಮೈಮುಟ್ಟಿ ಅನುಚಿತವಾಗಿ ವರ್ತಿಸಿದ್ದಾರೆ. ತೀವ್ರ ಕಿರುಕುಳ ತಾಳಲಾರದ ಜಪಾನ್ ಮಹಿಳೆ ಯುವಕನೊಬ್ಬನ ಕಪಾಳಕ್ಕೆ ಬಾರಿಸಿದ್ದಾರೆ.
ಇದು ಯುುವಕರ ಗುಂಪನ್ನು ಮತ್ತಷ್ಟು ಕೆರಳಿಸಿದೆ. ಆದರೆ ವಿಡಿಯೋ ಅಲ್ಲಿಗೆ ಕೊನೆಗೊಂಡಿದೆ. ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವಿಡಿಯೋ ಚಿತ್ರೀಕರಿಸಿದ ಸ್ಥಳ ದೆಹಲಿಯ ಪಹರಗಂಜ್ ಎಂದು ಅಂದಾಜಿಸಲಾಗಿದೆ. ಕಿರುಕುಳ ಕುರಿತು ವಿದೇಶಿ ಮಹಿಳೆಯರಿಂದ ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಈ ವಿಡಿಯೋ ಈ ಬಾರಿಯ ಹೋಳಿ ಹಬ್ಬ ಆಚರಣೆಯಂದು ಚಿತ್ರೀಕರಿಸಿದ ಘಟನೆಯೇ ಅಥವಾ ಹಳೇ ಘಟನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೋಳಿ ಬಣ್ಣ ಹಚ್ಚಿದ್ದಕ್ಕೆ ಹಿಂದು ಸ್ನೇಹಿತನಿಗೆ ಬೆಂಕಿ ಇಟ್ಟ ಮುಸ್ಲಿಂ ವ್ಯಕ್ತಿ!
ಇತ್ತ ಜಪಾನ್ ರಾಯಭಾರ ಕಚೇರಿಗೆ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಜಪಾನ್ ಮಹಿಳೆಯನ್ನು ಗುರುತಿಸಲು ಸೂಚಿಸಿದೆ. ವಿಡಿಯೋದಲ್ಲಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಭಾರತ ಪ್ರವಾಸ ಮಾಡುವ ವಿದೇಶಿ ಮಹಿಳೆಯರ ಮೇಲೆ ಪದೆ ಪದೇ ಈ ರೀತಿಯ ಕಿರುಕುಳಗಳು ವರದಿಯಾಗುತ್ತಿದೆ. ಇದು ಭಾರತದ ಮಾನ ಹರಾಜು ಹಾಕುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ