ಹಿಂದುಗಳ ಮೇಲಿನ ದಾಳಿ ರೂವಾರಿ ಬಂಧನ, ತಂಡ ಪ್ರಕಟಿಸಿದ ಪಾಕಿಸ್ತಾನ; ಅ.23ರ ಟಾಪ್ 10 ಸುದ್ದಿ!

Published : Oct 23, 2021, 04:34 PM ISTUpdated : Oct 23, 2021, 04:44 PM IST
ಹಿಂದುಗಳ ಮೇಲಿನ ದಾಳಿ ರೂವಾರಿ ಬಂಧನ, ತಂಡ ಪ್ರಕಟಿಸಿದ ಪಾಕಿಸ್ತಾನ; ಅ.23ರ ಟಾಪ್ 10 ಸುದ್ದಿ!

ಸಾರಾಂಶ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ರೂವಾರಿಯ ಬಂಧನವಾಗಿದೆ. ಇತ್ತ ಜಮ್ಮು ಕಾಶ್ಮೀರದಲ್ಲಿ ಅಮಿತ್ ಶಾ ಭದ್ರತಾ ಪರಿಸ್ಥಿತಿ ಕುರಿತು ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶ ಗೆಲ್ಲಲು ಪ್ರಿಯಾಂಕಾ ಗಾಂಧಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಡಿಸೆಂಬರ್‌ನೊಳಗೆ 90% ಜನರಿಗೆ ಲಸಿಕೆ ಹಾಕಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ. ಭಾರತ ವಿರುದ್ಧ ಪಂದ್ಯಕ್ಕೆ ಪಾಕ್ ತಂಡ ಪ್ರಕಟ, ಡಿಸೆಂಬರ್ ಅಂತ್ಯಕ್ಕೆ ಚಾರ್ಲಿ ಬಿಡುಗಡೆ ಸೇರಿದಂತೆ ಅಕ್ಟೋಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಜಮ್ಮು ಕಾಶ್ಮೀರ ಹುತಾತ್ಮ ಇನ್ಸ್‌ಪೆಕ್ಟರ್ ಪರ್ವೇಜ್ ಮನೆಗೆ ಅಮಿತ್ ಶಾ ಭೇಟಿ, ಪತ್ನಿಗೆ ಸರ್ಕಾರಿ ಉದ್ಯೋಗ!

ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Sha) 3 ದಿನಗಳ ಜಮ್ಮು ಮತ್ತು ಕಾಶ್ಮೀರ(Jammu and Kashmir) ಪ್ರವಾಸ ಕೈಗೊಂಡಿದ್ದಾರೆ. ಕಣಿವೆ ರಾಜ್ಯದಲ್ಲಿ ಆರ್ಟಿಕಲ್ 370(Article 370) ರದ್ದು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಅಮಿತ್ ಶಾ, ರಾಜ್ಯದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. 

ಉ. ಪ್ರದೇಶ ಪಡೆಯಲು ಕಾಂಗ್ರೆಸ್‌ನ ಸಪ್ತ ಪ್ರತಿಜ್ಞೆ: ಇದು ಪ್ರಿಯಾಂಕಾ ಮಾಸ್ಟರ್ ಪ್ಲಾನ್!

ಮುಂದಿನ ವರ್ಷ ಅಂದರೆ ಮೂರು ತಿಂಗಳ ನಂತರ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಚುನಾವಣಾ ರಣಕಹಳೆ ಮೊಳಗಿಸಿದ್ದು, ರಾಜ್ಯಾದ್ಯಂತ ಪ್ರತಿಜ್ಞಾ ಯಾತ್ರೆಯನ್ನು ಆರಂಭಿಸಿದ್ದಾರೆ. 

ಬಾಂಗ್ಲಾ ಹಿಂದುಗಳ ಮೇಲಿನ ದಾಳಿ ರೂವಾರಿ ಬಂಧನ!

ಬಾಂಗ್ಲಾದೇಶದಲ್ಲಿ(Bangladesh) ದಸರಾ ಪ್ರಯುಕ್ತ ನಡೆಯುತ್ತಿರುವ ದುರ್ಗಾ ಪೂಜೆ(Durga Pooja) ಪೆಂಡಾಲ್‌ಗಳು, ದೇವಸ್ಥಾನಗಳು(Temple) ಮತ್ತು ಅಲ್ಪಸಂಖ್ಯಾತ ಹಿಂದುಗಳ(Hindus) ಮೇಲೆ ನಡೆಯುತ್ತಿರುವ ಸರಣಿ ಹಿಂಸಾಚಾರ ದಾಳಿಗಳ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಶಂಕಿತನನ್ನು ಇಕ್ಬಾಲ್‌ ಹುಸೇನ್‌ ಎಂದು ಗುರುತಿಸಲಾಗಿದೆ.

ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಶೂಟಿಂಗ್ ಮುಕ್ತಾಯ: ಡಿಸೆಂಬರ್ 31ರಂದು ತೆರೆಗೆ

ಚಾರ್ಲಿ ಚಿತ್ರೀಕರಣದ ಅದ್ಭುತವಾದ ಪಯಣವನ್ನು ನಿನ್ನೆ ಕುಂಬಳಕಾಯಿ ಒಡೆಯುವುದರ ಮೂಲಕ ಮುಗಿಸಿದ್ದೇವೆ. ಡಿಸೆಂಬರ್ 31ರಂದು ಚಿತ್ರಮಂದಿರದಲ್ಲಿ ಭೇಟಿಯಾಗೋಣ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

ಡಿಸೆಂಬರ್‌ನೊಳಗೆ 90% ಜನರಿಗೆ ಲಸಿಕೆ: ಸಿಎಂ ಬೊಮ್ಮಾಯಿ

ದೇಶದಲ್ಲಿ(India) 10 ತಿಂಗಳ ಅವಧಿಯಲ್ಲಿ 100 ಕೋಟಿ ಕೋವಿಡ್‌ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಹೆಮ್ಮೆ ಪಡೋಣ. ಆದರೆ ವಿಶ್ರಮಿಸುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ಜತೆಗೆ, ಡಿಸೆಂಬರ್‌ ಅಂತ್ಯದೊಳಗೆ ರಾಜ್ಯದ ಅರ್ಹರೆಲ್ಲರಿಗೂ ಲಸಿಕೆ ನೀಡುವ ಮೂಲಕ ಮೊದಲ ಡೋಸ್‌ ನೀಡಿಕೆಯಲ್ಲಿ ಶೇ.90ರಷ್ಟು ಗುರಿ ಸಾಧನೆ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

Swiggyಯಿಂದ ಮಹಿಳೆಯರಿಗೆ ತಿಂಗಳಲ್ಲಿ 2 ದಿನ ಮುಟ್ಟಿನ ರಜೆ, ಹಲವು ಸೌಲಭ್ಯ!

ಆನ್‌ಲೈನ್ ಫುಡ್‌ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ (Swiggy) ತನ್ನ ಮಹಿಳಾ ಡೆಲಿವರಿ ಸಿಬ್ಬಂದಿಗಳಿಗೆ (Women delivery partner) ಋತುಸ್ರಾವ ಸಮಯದಲ್ಲಿ 2 ದಿನ ರಜೆ ನೀಡುವುದಾಗಿ ತಿಳಿಸಿದೆ. 

ಮಾರುತಿಯಿಂದ ಬಲೆನೋ ಆಧರಿತ SUV: ಇದು ಪಂಚ್‌ನ ಪ್ರತಿಸ್ಪರ್ಧಿ

ಮಾರುತಿ ಸುಜುಕಿ (Maruti Suzuki) ಕಂಪನಿಯು ಬಲೆನೋ (Baleno) ವಿನ್ಯಾಸದ ಆಧರಿತ ಸಬ್ ಕಾಂಪಾಕ್ಟ್ ಎಸ್‌ಯುವಿ ಅಭಿವೃದ್ಧಿಪಡಿಸುತ್ತಿದ್ದು, ಇದು ಟಾಟಾ ಕಂಪನಿಯ ಪಂಚ್‌(PUNCH)ಗೆ ತೀವ್ರ ಸ್ಪರ್ಧೆಯೊಡ್ಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಈ ಕಂಪನಿಯು ವೈಟಿಬಿ ಎಂಬ ಕೋಡ್ ನೇಮ್ ಹೆಸರಿನಲ್ಲಿ ಈ SUVಯನ್ನು ಉತ್ಪಾದಿಸುತ್ತಿದೆ.

T20 World Cup: ಭಾರತ ವಿರುದ್ದದ ಪಂದ್ಯಕ್ಕೆ 12 ಆಟಗಾರರನ್ನೊಳಗೊಂಡ ಪಾಕಿಸ್ತಾನ ತಂಡ ಪ್ರಕಟ

 7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಹೈವೋಲ್ಟೇಜ್‌ ಪಂದ್ಯಗಳಲ್ಲಿ ಒಂದು ಎನಿಸಿರುವ ಭಾರತ (Indian Cricket Team) ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 24ರಂದು ಆರಂಭವಾಗಲಿರುವ ಭಾರತ ವಿರುದ್ದ ಪಂದ್ಯಕ್ಕೆ ಶನಿವಾರ 12 ಆಟಗಾರರನ್ನೊಳಗೊಂಡ ಪಾಕಿಸ್ತಾನ ತಂಡ ಪ್ರಕಟವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?