ಜಮ್ಮು ಕಾಶ್ಮೀರ ಹುತಾತ್ಮ ಇನ್ಸ್‌ಪೆಕ್ಟರ್ ಪರ್ವೇಜ್ ಮನೆಗೆ ಅಮಿತ್ ಶಾ ಭೇಟಿ, ಪತ್ನಿಗೆ ಸರ್ಕಾರಿ ಉದ್ಯೋಗ!

By Suvarna NewsFirst Published Oct 23, 2021, 3:44 PM IST
Highlights
  • ಜಮ್ಮು ಕಾಶ್ಮೀರ ಪ್ರವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ
  • ಹುತಾತ್ಮ ಪರ್ವೇಜ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ
  • 3 ದಿನಗಳ ಕಣಿವೆ ರಾಜ್ಯ ಪ್ರವಾಸದಲ್ಲಿ ಅಮಿತ್ ಶಾ

ಶ್ರೀನಗರ(ಅ.23):  ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Sha) 3 ದಿನಗಳ ಜಮ್ಮು ಮತ್ತು ಕಾಶ್ಮೀರ(Jammu and Kashmir) ಪ್ರವಾಸ ಕೈಗೊಂಡಿದ್ದಾರೆ. ಕಣಿವೆ ರಾಜ್ಯದಲ್ಲಿ ಆರ್ಟಿಕಲ್ 370(Article 370) ರದ್ದು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಅಮಿತ್ ಶಾ, ರಾಜ್ಯದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಇದಕ್ಕೂ ಮೊದಲು ಅಮಿತ್ ಶಾ, ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ಪೊಲೀಸ್ ಇನ್ಸ್‌ಪೆಕ್ಟರ್ ಪರ್ವೇಜ್(Pervez) ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕಾಶ್ಮೀರ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಮಿತ್‌ ಶಾ ಮಾಸ್ಟರ್‌ ಪ್ಲಾನ್‌!

ಇಂದು(ಅ.23) ಬೆಳಗ್ಗೆ ಶ್ರೀಗನರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾರನ್ನು ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ಬರಮಾಡಿಕೊಂಡರು. ಬಳಿಕ ನೇರವಾಗಿ ,ಪರ್ವೇಜ್ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಪರ್ವೇಜ್ ಪತ್ನಿ ಫಾತಿಮಾ ಅಕ್ತರ್‌ಗೆ ಸರ್ಕಾರಿ ಉದ್ಯೋಗದ ದಾಖಲೆ ಪತ್ರಗಳನ್ನು ನೀಡಿದರು. 

 

. के शहीद जवान परवेज अहमद दार के घर जाकर उन्हें श्रद्धांजलि दी। मुझे व पूरे देश को उनकी बहादुरी पर गर्व है। उनके परिजनों से भेंट की और उनकी पत्नी को सरकारी नौकरी दी।

मोदी जी ने जो नए J&K की कल्पना की है, उसको साकार करने के लिए J&K पुलिस पूरी तन्मयता से प्रयासरत है। pic.twitter.com/Krv6CNfdJu

— Amit Shah (@AmitShah)

ಜೂನ್ 22 ರಂದು ಮನೆಗೆ ಹಿಂತಿರುಗುತ್ತಿದ್ದ ವೇಳೆ ಪರ್ವೇಜ್ ಮೇಲೆ ಭಯೋತ್ಪಾದಕರಿಂದ ದಾಳಿ ನಡೆದಿತ್ತು. ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪರ್ವೇಜ್ ಆಸ್ಪತ್ರೆ ದಾಖಲಿಸುವ ಮೊದಲೇ ಸಾವನ್ನಪ್ಪಿದ್ದರು. ಈ ದಾಳಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ವ್ಯವಸ್ಥೆಗೆ ಸವಾಲೆಸುವಂತಿತ್ತು. ಹೀಗಾಗಿ ಭಾರಿ ಸಂಚಲನ ಸೃಷ್ಟಿಸಿತ್ತು.

20 ವರ್ಷ ಮಾತ್ರವಲ್ಲ, 2024ರಲ್ಲೂ ಮೋದಿಗೆ ಗೆಲುವು; ಭವಿಷ್ಯ ನುಡಿದ ಅಮಿತ್ ಶಾ!

ಪರ್ವೇಜ್ ಕುಟಂಬಸ್ಥರನ್ನು ಭೇಟಿಯಾದ ಬಳಿಕ ನೇರವಾಗಿ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿ ಕುರಿತು ಸಭೆ ನಡೆಸಿದರು. ಶ್ರೀಗನರದಲ್ಲಿ ನಡೆದ ಸಭೆಯಲ್ಲಿ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಸತತ ದಾಳಿ ತಡೆಗಟ್ಟುವ ಕುರಿತು ಚರ್ಚೆ ನಡೆಸಲಾಗಿದೆ. ನಾಗರೀಕರನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ.

ಆರ್ಟಿಕಲ್ 370 ಮೂಲಕ ಭಯೋತ್ಪಾದನೆ ಬಿತ್ತಿದ್ದೇ ಕಾಂಗ್ರೆಸ್; 1952ರ ಘಟನೆ ನೆನೆಪಿಸಿದ ಯೋಗಿ!

ಜಮ್ಮು ಮತ್ತು ಕಾಶ್ಮಾರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಈ ರ್ಯಾಲಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ನಾಗರೀಕರ ಭದ್ರತೆ ಕುರಿತು ಮಾತನಾಡಲಿದ್ದಾರೆ. ಇನ್ನು 3 ದಿನಗಳ ಪ್ರವಾಸದಲ್ಲಿ ಅಮಿತ್ ಶಾ, ಶ್ರೀಗನರ ಹಾಗೂ ಶಾರ್ಜಾ ನಡುವಿನ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. 

ಪಾಕ್‌ ಟೂಲ್‌ಕಿಟ್‌ ಬೆಳಕಿಗೆ: ಕಾಶ್ಮೀರದಲ್ಲಿ ದಾಳಿಗೆ ಪಾಕ್‌ ಐಎಸ್‌ಐ ಸಂಚು!

ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಅಮಿತ್ ಶಾ ಮಾಡುತ್ತಿರುವ ಮೊದಲ ಪ್ರವಾಸ ಇದಾಗಿದೆ. ಕಳೆದ ಕೆಲ ದಿನಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳನ್ನು ಹತ್ತಿಕ್ಕಿಲು ಈ ಭೇಟಿ ಮಹತ್ವದ್ದಾಗಿದೆ.

click me!