ಗ್ಯಾನವಾಪಿ ಮಸೀದಿಯಲ್ಲಿ ಮೂರ್ತಿಗಳ ಅವಶೇಷ ಪತ್ತೆ, ಸರ್ವೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

By Suvarna News  |  First Published Aug 5, 2023, 8:16 PM IST

ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಸತತ 2ನೇ ದಿನ ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಿದೆ. 2ನೇ ದಿನದ ಸಮೀಕ್ಷೆ ಬಳಿಕ ಹಿಂದೂ ಪರ ವಕೀಲ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ.
 


ವಾರಣಾಸಿ(ಆ.05) ಕಾಶ್ಮೀ ವಿಶ್ವಾನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬಳಿಕ ಸತತ 2ನೇ ದಿನ ಸರ್ವೆ ಮಾಡಲಾಗಿದೆ. ಭಾರತೀಯ ಪುರಾತತ್ವ ಇಲಾಖೆ ಸತತ 2ನೇ ದಿನವೂ ಸಮೀಕ್ಷೆ ನಡೆಸಿ ಹಲವು ಮಾಹಿತಿ ಸಂಗ್ರಹಿಸಿದೆ. ಈ ಸರ್ವೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹಿಂದೂ ಪರ ವಕೀಲ ಸುಧೀರ್ ತ್ರಿಪಾಠಿ ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. 2ನೇ ದಿನದ ಸಮೀಕ್ಷೆಯಲ್ಲಿ ಗ್ಯಾನವಾಪಿ ಮಸೀದಿಯೊಳಗೆ ಹಿಂದೂ ಮೂರ್ತಿಗಳ ಅವಶೇಷ ಪತ್ತೆಯಾಗಿದೆ ಎಂದಿದ್ದಾರೆ.

ಮೊದಲ ದಿನದ ಸಮೀಕ್ಷೆಯಲ್ಲಿ ತ್ರಿಶೂಲ ಸೇರಿದಂತೆ ದೇವಸ್ಥಾನದ ಹಲವು ಕುರುಹುಗಳ ಪತ್ತೆಯಾಗಿತ್ತು. 2ನೇ ದಿನದ ಸಮೀಕ್ಷೆಯಲ್ಲಿ ಭಗ್ನಗೊಂಡಿರುವ ಮೂರ್ತಿಯ ಅವಶೇಷಗಳು ಪತ್ತೆಯಾಗಿದೆ.  ಸಮೀಕ್ಷೆಗೆ ಇಂತೆಜಾಮಿಯಾ ಮಸೀದಿ ಸಮಿತಿ ಸಹಕಾರ ನೀಡುತ್ತಿದೆ. ಕೆಲ ಬಾಗಿಲುಗಳನ್ನು ತೆರೆಯಲು ಕೀ ನೀಡಿದ್ದಾರೆ. ಮಸೀದಿಯ ಗುಮ್ಮಟ ಇರುವ ಮುಖ್ಯ ಪ್ರಾಂಗಣದ ಸರ್ವೆಯನ್ನು ಇಂದು ಮಾಡಲಾಗಿದೆ ಎಂದಿದ್ದಾರೆ. ಮಸೀದಿಯಲ್ಲಿ ಹಿಂದೂ ದೇವಾಲಯದ ಹಲವು ಕುರುಹುಗಳಿವೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಪುರಾತತ್ವ ಇಲಾಖೆ ವರದಿ ಒಪ್ಪಿಸಲಿದೆ ಎಂದು ವಕೀಲರು ಹೇಳಿದ್ದಾರೆ. 

Tap to resize

Latest Videos

Gyanvapi: 6 ಗಂಟೆಗಳ ಎಎಸ್‌ಐ ಸರ್ವೇ, ಇಂದು ಜ್ಞಾನವಾಪಿ ಸಮೀಕ್ಷೆಯಲ್ಲಿ ಆಗಿದ್ದೇನು?

ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಸಲ್ಲಿಸಲು ಪುರಾತತ್ವ ಇಲಾಖೆಗೆ ನೀಡಲಾಗಿದ್ದ ಕಾಲಾವಧಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ 4 ವಾರಗಳ ಕಾಲ ವಿಸ್ತರಿಸಿದೆ. ಪುರಾತತ್ವ ಇಲಾಖೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು, ಗಡುವನ್ನು ಆ.4ರಿಂದ ಸೆ.4ಕ್ಕೆ ವಿಸ್ತರಿಸಿದ್ದಾರೆ. ಪುರಾತತ್ವ ಇಲಾಖೆ ಕೈಗೊಂಡಿದ್ದ ಸಮೀಕ್ಷೆಗೆ ಜು.24ರಂದು ತಡೆ ನೀಡಲಾಗಿತ್ತು. ಇದೀಗ ಈ ಮುಂಚಿನ ಆದೇಶದಂತೆ ಆ.4ರೊಳಗೆ ಸಮೀಕ್ಷೆ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಅವಧಿ ವಿಸ್ತರಣೆ ಕೋರಿ ಪುರಾತತ್ವ ಇಲಾಖೆ ಅರ್ಜಿ ಸಲ್ಲಿಸಿತ್ತು.

ಕಾಶಿ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡೇ ಗ್ಯಾನವಾಪಿ ಮಸೀದಿ ಇದೆ. ದೇಗುಲ ಒಡೆದು ಮಸೀದಿ ನಿರ್ಮಿಸಲಾಗಿದೆ. ಇದಕ್ಕೆ ಮಸೀದಿಯ ಗೋಡೆಯ ಮೇಲೆ ಇರುವ ಹಿಂದೂ ದೇವರ ಮೂರ್ತಿಗಳೇ ಸಾಕ್ಷಿ. ಇದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಪುರಾತತ್ವ ಇಲಾಖೆ ಮೂಲ ಸಮೀಕ್ಷೆ ನಡೆಸಬೇಕೆಂದು ಹಿಂದೂಪರ ಸಂಘಟನೆಗಳು ಮನವಿ ಮಾಡಿದ್ದವು. ಇದನ್ನು ಮಾನ್ಯ ಮಾಡಿದ್ದ ಜಿಲ್ಲಾ ನ್ಯಾಯಾಲಯ ಸಮೀಕ್ಷೆಗೆ ಅನುಮತಿ ನೀಡಿತ್ತು. ಅದರಂತೆ ಸಮೀಕ್ಷೆ ಕೂಡಾ ಆರಂಭವಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಸಮಿತಿಗೆ ಹೈಕೋರ್ಟ್‌ಗೆ ಹೋಗುಂತೆ ಸೂಚಿಸಿತ್ತು. 

ಜ್ಞಾನವಾಪಿ ಕ್ಯಾಂಪಸ್‌ ಸಮೀಕ್ಷೆ; ಈ ಪ್ರಮುಖ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು?

ಅಲಹಾಬಾದ್ ಹೈಕೋರ್ಟ್ ವಾರಣಾಸಿ ಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಸಮೀಕ್ಷೆಗೆ ಅಸ್ತು ಎಂದಿತ್ತು. ಇದರಿಂದ ಆಕ್ರೋಶಗೊಂಡ ಮುಸ್ಲಿಂ ಸಮಿತಿ ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಗುರುವಾರ ಈ ಕುರಿತು ಸುಪ್ರೀಂ ಕೋರ್ಟ್ ಸಮೀಕ್ಷೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಭಾರತೀಯ ಪುರಾತ್ವ ಇಲಾಖೆ ಸತತ 2ನೇ ದಿನ ಸಮೀಕ್ಷೆ ಪೂರ್ಣಗೊಳಿಸಿದೆ.

click me!