ಮೀರತ್‌ನ್ನು ನಾಥುರಾಮ್ ಗೋಡ್ಸೆ ನಗರವಾಗಿ ಮರುನಾಮಕರಣ, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ!

By Suvarna NewsFirst Published Nov 22, 2022, 8:33 PM IST
Highlights

ಈಗಾಗಲೇ ಹಲವು ನಗರಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಇದು ಪರ ವಿರೋಧಕ್ಕೆ ಕಾರಣವಾಗಿದೆ.  ಇದೀಗ ಮೀರತ್ ಮೇಯರ್ ಚುನಾವಣಾ ಪ್ರಣಾಳಿಕೆಯಲ್ಲಿ ಮೀರತ್ ನಗರದ ಹೆಸರು ಬದಲಾಯಿಸುವ ಘೋಷಣೆಯೊಂದು ಹೊರಬಿದ್ದಿದೆ. 

ಮೀರತ್(ನ.22): ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಈಗಾಗಲೇ ಕೆಲ ನಗರಗಳ ಹೆಸರನ್ನು ಮರುನಾಮಕರಣ ಮಾಡಿದೆ. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಹಿಂದೂಮಹಾಸಭಾ ಮಹತ್ವದ ಘೋಷಣೆ ಮಾಡಿದೆ. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ನಗರ ಸಂಸ್ಥೆಗಳ ಚುನಾವಣೆಗೆ ಹಿಂದೂಮಹಾ ಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮೀರತ್ ಮೇಯರ್ ಸ್ಥಾನಕ್ಕೆ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಮೀರತ್ ಹೆಸರನ್ನು ನಾಥುರಾಮ್ ಗೋಡ್ಸೆ ನಗರವಾಗಿ ಮರುನಾಮಕರಣ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಇಷ್ಟೇ ಅಲ್ಲ ಮೀರತ್ ವ್ಯಾಪ್ತಿಯಲ್ಲಿ ಬರವು ಹಲವು ಮುಸ್ಲಿಮ್ ವಲಯಗಳು, ಸರ್ಕಲ್ ಹೆಸರನ್ನು ಬದಲಾಯಿಸುವುದಾಗಿ ಘೋಷಿಸಿದ್ದಾರೆ.

ಮೀರತ್ ಮುನ್ಸಿಪಾಲಿಟಿ ಚುನಾವಣೆಗೆ ಹಿಂದೂ ಮಹಾಸಭಾ ಸ್ಪರ್ಧಿಸುತ್ತಿದೆ. ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿಂದೂಮಹಾ ಸಭಾ, ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಹೆಸರುಗಳನ್ನು ಬದಲಿಸಿ ಹಿಂದೂ ಹೆಸರಿಡುವುದಾಗಿ ಭರವಸೆ ನೀಡಿದೆ. ಇಷ್ಟೇ ಅಲ್ಲ ನಮ್ಮ ಮೊದಲ ಆದ್ಯೆತೆ ಹಿಂದೂ ರಾಷ್ಟ್ರ ಮಾಡುವುದು. ಬಳಿಕ ಗೋ ಮಾತೆ ರಕ್ಷಣೆ ಎಂದು ಪ್ರಣಾಳಿಕೆಯಲ್ಲಿ ಹಿಂದೂಮಹಾಸಭಾ ಹೇಳಿದೆ.

 

ಟಿಪ್ಪು ಎಕ್ಸ್‌ಪ್ರೆಸ್ ಇನ್ಮುಂದೆ ಒಡೆಯರ್ ಎಕ್ಸ್‌ಪ್ರೆಸ್ ರೈಲು, ಹೆಸರು ಬದಲಿಸಿ ಕೇಂದ್ರದ ಆದೇಶ!

ಹಿಂದೂಮಹಾ ಸಭಾದ ಕೌನ್ಸಿಲರ್ಸ್ ಗೆಲ್ಲಿಸಿಕೊಡಬೇಕು, ಮೇಯರ್ ಸ್ಥಾನಕ್ಕೆ ನಮ್ಮ ಅಭ್ಯರ್ಥಿಯೇ ಆಯ್ಕೆಯಾಗುವಂತೆ ಮಾಡಿದರೆ ಹಿಂದೂಗಳ ಕನಸು ನನಸು ಮಾಡುತ್ತೇವೆ ಎಂದು ಹಿಂದೂಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ ಹೇಳಿದ್ದಾರೆ. ಮತಾಂತರ ಎಗ್ಗಿಲ್ಲದೆ ನಡೆಯಿತ್ತಿದೆ. ಇದನ್ನು ಕೂಡ ತಡೆಯುತ್ತೇವೆ ಎಂದು ಅಶೋಕ್ ಶರ್ಮಾ ಹೇಳಿದ್ದಾರೆ. 

ಇದೇ ವೇಳೆ ಬಿಜೆಪಿ ಹಾಗೂ ಶಿವಸೇನೆ ವಿರುದ್ದ ಹಿಂದೂ ಮಹಾಸಭಾ ಕೆಂಡ ಕಾರಿದೆ. ಎರಡೂ ಪಕ್ಷಗಳು ತಮ್ಮ ಸಿದ್ದಾಂತದಿಂದ ದೂರ ಉಳಿದುಕೊಂಡಿದೆ. ಹೀಗಾಗಿ ಹಿಂದೂಗಳು ಇಟ್ಟ ಭರವಸೆ ಹುಸಿಯಾಗಿದೆ. ಹಿಂದೂಮಹಾಸಭಾಗೆ ರಾಜಕೀಯ ಮುಖ್ಯವಲ್ಲ. ನಮ್ಮದು ಹಿಂದೂ ಸಂಘಟನೆ. ಕೆಲ ನಿರ್ಧಾರ ತೆಗೆದುಕೊಳ್ಳಲು ಅಧಿಕಾರದ ಅವಶ್ಯಕತೆ ಇದೆ. ಇದರಲ್ಲಿ ಹಿಂದೂ ರಾಷ್ಟ್ರವನ್ನು ಕಟ್ಟಲು ಅಧಿಕಾರ ಬೇಕೆ ಬೇಕು. ಹೀಗಾಗಿ ನಾವು ರಾಜಕೀಯಕ್ಕೆ ಧುಮುಕಿದ್ದೇವೆ. ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಎಂದು ಅಶೋಕ್ ಶರ್ಮಾ ಹೇಳಿದ್ದಾರೆ.

ರಾಜೀನಾಮೆಗೂ ಮುನ್ನ ಮಹತ್ವದ ನಿರ್ಧಾರ, ಔರಂಗಬಾದ್ ನಗರ ಹೆಸರು ಬದಲಾಯಿಸಿದ ಠಾಕ್ರೆ!

ಡಿಸೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದ ನಗರ ಪಾಲಿಕೆ ಚುನಾವಣೆಗಳು ನಡೆಯಲಿದೆ. ಈಗಾಗಲೇ ಭರ್ಜರಿ ತಯಾರಿ ನಡಯುತ್ತಿದೆ. ಹೀಗಾಗಿ ಹಿಂದೂ ಮಹಾಸಭಾ ಪ್ರಣಾಳಿಕೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಸೇರಿದಂತೆ ಇತರ ಹಲವು ಪಕ್ಷಗಳು ಹಿಂದೂ ಮಹಾಸಭಾದ ಕನಸು ನನಸಾಗುವುದಿಲ್ಲ ಎಂದು ವ್ಯಂಗ್ಯವಾಡಿದೆ.
 

click me!