ಮಂಗಳೂರಿನ ನಾಗುರಿ ಬಳಿ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣದ ಬಳಿಕ ಕುಕ್ಕರ್ ಬಾಂಬ್ ಬಗ್ಗೆ ಈಗ ಮತ್ತೆ ಚರ್ಚೆ ಮಾಡಲಾಗುತ್ತಿದೆ.
ಮಂಗಳೂರಿನಲ್ಲಿ ಚಲಿಸುತ್ತಿರುವ ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ದೇಶಾದ್ಯಂತ ಚರ್ಚೆ ಆಗುತ್ತಿದೆ. ಅಂದ ಹಾಗೆ, ಈ ಕುಕ್ಕರ್ ಬಾಂಬ್ ಅಂದ್ರೇನು ಎಂಬ ಬಗ್ಗೆ ನಿಮಗೆ ಗೊಂದಲಗಳಿದ್ಯಾ..? ಉಗ್ರರು ಕುಕ್ಕರ್ ಬಾಂಬ್ ಅನ್ನೇ ಏಕೆ ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ. ಕುಕ್ಕರ್ ಬಾಂಬ್ ಆವಿಷ್ಕಾರ ಎಲ್ಲಿ ಮತ್ತು ಯಾವಾಗ ಆಯಿತು..? ಇದರ ತೀವ್ರತೆ ಏನು ಎಂಬ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಅಕ್ಕಿ, ತರಕಾರಿ, ಬೇಳೆ - ಹೀಗೆ ಬಹುತೇಕ ವಸ್ತುಗಳನ್ನು ಕುಕ್ಕರ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಬೇಯಿಸಬಹುದು. ಗೃಹಿಣಿಯರ ಅಡುಗೆಯ ಸಮಯವನ್ನು ಇದು ಉಳಿಸುತ್ತದೆ ಹಾಗೂ ಸುಲಭವಾಗಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೇ ಕುಕ್ಕರ್ ಸಾಧನವನ್ನು ದುರ್ಬಳಕೆಗೆ ಬಳಸಿಕೊಳ್ಳುತ್ತಿದ್ದಾರೆ.
ಇದನ್ನು ಓದಿ: ಮಂಗಳೂರು ಬಾಂಬ್ ಸ್ಫೋಟ ಪ್ರಕರಣ: ಕೊಯಮತ್ತೂರಲ್ಲಿ ನಕಲಿ ಸಿಮ್ ಕಾರ್ಡ್ ಖರೀದಿ ಮಾಡಿದ್ನಾ ಉಗ್ರ?
ಮಂಗಳೂರಿನ ನಾಗುರಿ ಬಳಿ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣದ ಬಳಿಕ ಕುಕ್ಕರ್ ಬಾಂಬ್ ಬಗ್ಗೆ ಈಗ ಮತ್ತೆ ಚರ್ಚೆ ಮಾಡಲಾಗುತ್ತಿದೆ. ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಈ ಕುಕ್ಕರ್ ಬಾಂಬ್ ಟ್ರೆಂಡ್ ಸಾಮಾನ್ಯವಾಗಿಬಿಟ್ಟಿದೆ. 21ನೇ ಶತಮಾನದ ಆರಂಭದಲ್ಲಿ ಭಾರತಕ್ಕೂ ಇದು ಕಾಲಿಟ್ಟಿದ್ದು, ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಇದು ಪೊಲೀಸ್ ಸೇರಿ ಭದ್ರತಾ ಪಡೆಗಳಿಗೆ ತಲೆನೋವಾಗಿದೆ ಎಂದು ತಿಳಿದುಬಂದಿದೆ.
ಅಂದ ಹಾಗೆ, ಈ ಕುಕ್ಕರ್ ಬಾಂಬ್ ತಂತ್ರಜ್ಞಾನ ಮೊದಲು ಆರಂಭಿಸಿದ್ದು ಅಲ್‌ಖೈದಾ ಸಂಘಟನೆ ಎಂದು ಹೇಳಲಾಗಿದೆ. ಅಮೋನಿಯಂ ನೈಟ್ರೇಟ್‌ನಂತಹ ಸ್ಫೋಟಕ ವಸ್ತುಗಳಿಂದ ಕುಕ್ಕರ್ ಬಾಂಬ್ ತಯಾರಿಸುವುದು ಸುಲಭ ಎನ್ನಲಾಗಿದ್ದು, ಈ ತಯಾರಿಕೆ ಬಗ್ಗೆ ಸಾವಿರಾರು ಉಗ್ರರಿಗೆ ತರಬೇಟಿ ನೀಡಲಾಗಿದೆ ಎಂದೂ ತಿಳಿದುಬಂದಿದೆ. ಒಮ್ಮೆ ಬಾಂಬ್ ಸ್ಫೋಟವಾದರೆ 10 ಕ್ಕೂ ಜನರ ಜೀವವನ್ನಾದರೂ ತೆಗೆಯಬಹುದು ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಪೊಲೀಸರಿಂದ ಶಂಕಿತ ಉಗ್ರ ಶಾರೀಕ್ ಮನೆ ಸೇರಿ 4 ಮನೆಗಳ ತಪಾಸಣೆ
ದೇಶದ ಪ್ರಮುಖ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಗಳ ವಿವರ ಹೀಗಿದೆ..
ಇನ್ನು, ಕುಕ್ಕರ್ ಬಾಂಬ್‌ನಲ್ಲಿ ಯಾವ ವಸ್ತುಗಳಿರುತ್ತದೆ ಗೊತ್ತಾ..?
ಕುಕ್ಕರ್ ಬಾಂಬ್‌ನೊಳಗೆ ಕಬ್ಬಿಣದ ಮೊಳೆಗಳು, ಬಾಲ್ ಬೇರಿಂಗ್, ಡಿಜಿಟಲ್ ವಾಚ್, ಸ್ಮಾಲ್ ಕಂಡಕ್ಟರ್ ಚಿಪ್, ಗ್ಯಾರೇಜ್ ಡೋರ್ ಓಪನರ್, ಪೇಜರ್ ಅಥವಾ ಮೊಬೈಲ್ ಫೋನ್, ಕಾರ್ ಬಲ್ಬ್, ಸಾಕೆಟ್, ಅಲಾರಾಂ ಕ್ಲಾಕ್ ಮುಂತಾದ ವಸ್ತುಗಳನ್ನು ಈ ಬಾಂಬ್ ತಯಾರಿಕೆಗೆ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Mangaluru Blast: ವಾಟ್ಸಾಪ್ ಡಿಪಿಯಾಗಿ ಆದಿ ಯೋಗಿ ಫೋಟೋ ಬಳಸಿದ್ದ ಉಗ್ರ; ಸಿಮ್ ಕಾರ್ಡ್ ಕೊಡಿಸಿದ್ದ ಶಿಕ್ಷಕ..!
ಹಾಗಾದ್ರೆ, ಉಗ್ರರಿಗೆ ಅಮೋನಿಯಂ ನೈಟ್ರೇಟ್ ಹೇಗೆ ಸಿಗುತ್ತದೆ ಅಂತೀರಾ..?
ಅಮೋನಿಯ ನೈಟ್ರೇಟ್ ಸುಲಭವಾಗಿ ಸಿಗುತ್ತದೆ. ಇತರೆ ಸ್ಫೋಟಕಗಳನ್ನು ತೆಗೆದುಕೊಂಡು ಹೋಗುವಷ್ಟು ಕಷ್ಟಪಡಬೇಕಿಲ್ಲ. ಈ ಹಿನ್ನೆಲೆ ಇತ್ತೀಚೆಗೆ ಉಗ್ರರು ಇದರತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಹೇಳಲಾಗಿದೆ. ರಾಸಾಯನಿಕ ಗೊಬ್ಬರ ಸುಲಭವಾಗಿ ಸಿಗುತ್ತದೆ. ಇದರಲ್ಲಿ ಶೇ. 25 - 30 ರಷ್ಟು ಅಮೋನಿಯಂ ನೈಟ್ರೇಟ್ ಇರುತ್ತದೆ. ಇಂತಹ 4 - 5 ಚೀಲಗಳನ್ನು ಖರೀದಿಸಿದರೆ ಸಾಕು, ಅದನ್ನು ಚೆನ್ನಾಗಿ ಕಾಯಿಸಿ, ಮಣ್ಣು, ಇತರೆ ರಾಸಾಯನಿಕ ವಸ್ತುಗಳನ್ನು ಬೇರ್ಪಡಿಸುತ್ತಾರೆ.
ನಂತರ, ಮೇಲ್ಭಾಗದಲ್ಲಿ ಉಳಿಯುವ ನೀರನ್ನು ಮತ್ತೆ ಕಾಯಿಸಿದರೆ ಬಿಳಿಯ ಬಣ್ಣದ, ಹರಳಿನಂತಹ ವಸ್ತುವಿನ ಅಮೋನಿಯಂ ನೈಟ್ರೇಟ್ ಲಭ್ಯವಾಗುತ್ತದೆ. ಕಲ್ಲು ಕ್ವಾರಿಗಳಲ್ಲಿ ಸಹ ಇದೇ ರೀತಿಯ ಸ್ಫೋಟಕ ಬಳಸಲಾಗುತ್ತದೆ. ಹಾಗೆ, ಸರ್ಕೀಟ್ ಆಪರೇಟಿಂಗ್ ಬಗ್ಗೆ ತಿಳಿದುಕೊಂಡರೆ ಸಾಕು ಕುಕ್ಕರ್ ಬಾಂಬ್ ಅನ್ನು ತಯಾರಿಸಬಹುದು ಎಂದು ಉಗ್ರರು ಕುಕ್ಕರ್ ಬಾಂಬ್ ತಯಾರಿಕೆಗೆ ಹೆಚ್ಚು ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಂಗಳೂರು ಸ್ಫೋಟ: ಬಾಂಬ್ ಸರಿಯಾಗಿ ಫಿಟ್ ಆಗಿರಲಿಲ್ಲ, ಅರ್ಧಂಬರ್ಧ ಕಲಿತಿದ್ದ ಶಾರೀಕ್