ಹಿಂದೂ ಸಂಪ್ರದಾಯದ ವಿವಾಹಕ್ಕೆ ಕಲ್ಯಾಣ ಮಂಟಪವಾದ ಮಸೀದಿ

By Suvarna NewsFirst Published Jan 19, 2020, 9:00 PM IST
Highlights

ಹಿಂದೂ ಮಹಿಳೆಯರು ದೇವಸ್ಥಾನಕ್ಕೆ ಹೋದಂತೆ, ಮುಸ್ಲಿಮ್ ಹೆಣ್ಣು ಮಕ್ಕಳು ಮಸೀದಿಗೆ ಹೋಗುವುದಿಲ್ಲ. ಇಸ್ಲಾಂ ಧರ್ಮದಲ್ಲಿ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ  ಇಲ್ಲ. ಮಹಿಳೆರಿಗೂ ಮಸೀದಿ ಪ್ರವೇಶಕ್ಕೆಂಬ  ಪರ-ವಿರೋಧಗಳ ಚರ್ಚೆಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲೂ ಸಹ ವಿಚಾರಣೆ ನಡೆಯುತ್ತಿದೆ. ಇತಂಹ ಸಂದರ್ಭದಲ್ಲಿ ಕೇರಳದಲ್ಲಿ ಯುವತಿಗೆ ಮಸೀದಿಯೊಳಗೆ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದಲ್ಲದೇ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟು ಸೌಹಾರ್ದ ಮೆರೆದಿದ್ದಾರೆ.  

ತಿರುವನಂತಪುರಂ, [ಜ.19]: ಒಂದು ಕಡೆ ಮುಸ್ಲಿಂ ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶಿಸಲು ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಲು ಅನುಮತಿ ಇಲ್ಲ. ಮತ್ತೊಂದೆಡೆ  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ತಮ್ಮ ಸಮುದಾಯದ ವಿರುದ್ಧವಾಗಿದೆ ಎಂದು ಮುಸ್ಲಿಮರು ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಓರ್ವ ಯುವತಿಯನ್ನು ಮಸೀದಿಯೊಳಗೆ ಪ್ರವೇಶಕ್ಕೆ ಅನುಮತಿ ಕಲ್ಪಿಸಿಕೊಟ್ಟಿದ್ದಲ್ಲದೇ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿ ಕೊಟ್ಟಿದ್ದಾರೆ. ಇಂತಹದೊಂದು ಅಪರೂಪದ ಹಿಂದೂ ಸಂಪ್ರದಾಯದ ಮದುವೆಗೆ ಕೇರಳದ ಮಸೀದಿಯೊಂದು ಸಾಕ್ಷಿಯಾಗಿದೆ.

ಮುಸ್ಲಿಂ ಯುವತಿ ಕೈ ಹಿಡಿದ ಹಿಂದೂ ಯುವಕ : ಸೌಹಾರ್ದತೆಯ ವಿವಾಹ 

 ಹೌದು... ಇದು ಅಚ್ಚರಿ ಅನ್ನಿಸಿದರೂ ನಿಜವೇ.  ಕೇರಳದ ಚೇರಾವಲ್ಲಿ ಎಂಬಲ್ಲಿ ಆಶಾ ಹಾಗೂ ಶರತ್ ಎನ್ನುವರ ಹಿಂದೂ ಸಂಪ್ರದಾಯದ ವಿವಾಹಕ್ಕೆ ಮಸೀದಿ ಸಾಕ್ಷಿಯಾಗಿದೆ. ಈ ಸೌಹಾರ್ದ ವಿವಾಹ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. 

ಯಾಕಂದ್ರೆ ಮುಸ್ಲಿಂ ಸಮುದಾಯದಲ್ಲಿ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ  ಇಲ್ಲ. ಆದರೂ ಓರ್ವ ಹಿಂದೂ ಯುವತಿಗೆ ಮಸೀದಿಯೊಳಗೆ ಪ್ರವೇಶ ಕಲ್ಪಿಸಿಕೊಟ್ಟಿದ್ದಲ್ಲದೇ ಹಿಂದೂ ಸಂಪ್ರದಾಯದಂತೆ ಮದುವೆಯನ್ನೂ ಸಹ ಮಾಡಿ ಕೊಟ್ಟಿರುವುದು ವಿಶೇಷ.

ಇದು ಭಾವೈಕ್ಯತೆಯ ಗಣಪ: ಕೇಸರಿ ಶಾಲು ಹೊದ್ದ ಮುಸ್ಲಿಂ ಭಾಂದವರನ್ನು ನೋಡಪ್ಪ!

ಚೇರಾವಲ್ಲಿ ಮೂಲದ ಹಿಂದೂ ಧರ್ಮದ ಆಶಾ ಎಂಬುವವರ ತಂದೆ ಅನಾರೋಗ್ಯದಿಂದ ನಿಧನರಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಹಣಕಾಸು ಸಮಸ್ಯೆ ಎದುರಾಗಿತ್ತು.

ಈ ಸಂದರ್ಭದಲ್ಲಿ ಆಶಾ ಕುಟುಂಬಕ್ಕೆ ಸ್ಥಳೀಯ ಮುಸ್ಲಿಂ ಸಮುದಾಯದ ಸಹಾಯಕ್ಕೆ ಮುಂದೆ ಬಂದಿದ್ದು, ಮದುವೆಗೆ ಅಗತ್ಯವಾದ ಎಲ್ಲಾ ರೀತಿಯ ಆರ್ಥಿಕ ಸಹಕಾರವನ್ನು ನೀಡಿದ್ದಲ್ಲದೆ ಹಿಂದೂ ಪುರೋಹಿತರಿಂದ ಮಂತ್ರಗಳೊಂದಿಗೆ ಮಸೀದಿಯಲ್ಲಿ ಮದುವೆ ಮಾಡಿಕೊಟ್ಟಿದ್ದಾರೆ.

ಧರ್ಮಕ್ಕಿಂತ ಪ್ರೀತಿ ದೊಡ್ಡದು: ಓದಲೇಬೇಕು ಹಿಂದು-ಮುಸ್ಲಿಂ ಮ್ಯಾರೇಜ್ ಕಹಾನಿ!

100 ವರ್ಷದ ಇತಿಹಾಸವಿರುವ ಮಸೀದಿಯಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಆಶಾ ಹಾಗೂ ಶರತ್ ನವ ಜೋಡಿಗೆ ಮೌಲ್ವಿಗಳು ಅಕ್ಕಿಕಾಳು ಹಾಕಿ ಶುಭ ಹಾರೈಸಿದರು. ದಂಪತಿಗಳ ಕುಟುಂಬಸ್ಥರಲ್ಲದೆ ಎರಡೂ ಧರ್ಮದ ಸ್ನೇಹಿತರು ಹಾಗೂ ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಇನ್ನು ಇದಕ್ಕೆ ಟ್ವೀಟ್‌ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಈ ವಿವಾಹ ಕೇರಳದ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ. ಅಲ್ಲದೆ ವಧು ವರ ಹಾಗೂ ಮದುವೆಯಲ್ಲಿ ಭಾಗಿಯಾದ ಎರಡು ಧರ್ಮದ ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದ್ದಾರೆ.

An example of unity from Kerala.

The Cheravally Muslim Jamat Mosque hosted a Hindu wedding of Asha & Sharath. The Mosque came to their help after Asha's mother sought help from them.

Congratulations to the newlyweds, families, Mosque authorities & the people of Cheravally. pic.twitter.com/nTX7QuBl2a

— Pinarayi Vijayan (@vijayanpinarayi)
click me!