ವಂದೇ ಮಾತರಂ ಹಾಡದವರು ಭಾರತದಲ್ಲಿ ಇರಬೇಡಿ: ಕೇಂದ್ರ ಸಚಿವ!

By Suvarna NewsFirst Published Jan 19, 2020, 2:52 PM IST
Highlights

'ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲ'| ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಗುಡುಗು| 'ಸಿಎಎ ಕುರಿತಂತೆ ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ'| ದೇಶಕ್ಕೆ ಬೆಂಕಿ ಹಚ್ಚುತ್ತಿರುವವರು ದೇಶಪ್ರೇಮಿಗಳಲ್ಲ ಎಂದ ಸಾರಂಗಿ|ಕಾಂಗ್ರೆಸ್ ಮಾಡಿದ್ದ ಪಾಪವನ್ನು ಬಿಜೆಪಿ ಸ್ವಚ್ಛ ಮಾಡುತ್ತಿದೆ ಎಂದ ಕೇಂದ್ರ ಸಚಿವ| 

ಸೂರತ್(ಜ.19): ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಹೇಳಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಭಾರತದ ಐಕ್ಯತೆಯನ್ನು ಒಪ್ಪಿಕೊಳ್ಳದವರು ಈ ದೇಶದಲ್ಲಿ ಇರಬಾರದು ಎಂದು ಸಾರಂಗಿ ಅಭಿಪ್ರಾಯಪಟ್ಟಿದ್ದಾರೆ.

Union Minister Pratap Sarangi in Surat, Gujarat: Those who do not accept Vande Mataram have no right to live in India. (18.01.2020) pic.twitter.com/zEr4R8Z7Op

— ANI (@ANI)

ದೇಶಕ್ಕೆ ಬೆಂಕಿ ಹಚ್ಚುತ್ತಿರುವವರು ದೇಶಪ್ರೇಮಿಗಳಲ್ಲ. ಭಾರತದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಒಪ್ಪಿಕೊಳ್ಳದವರು ಹಾಗೂ ವಂದೇ ಮಾತರಂ ಹೇಳದವರಿಗೆ ದೇಶದಲ್ಲಿರುವ ಹಕ್ಕಿಲ್ಲ ಎಂದು ಸಾರಂಗಿ ಹರಿಹಾಯ್ದಿದ್ದಾರೆ.

ಗುಡಿಸಲಲ್ಲಿ ವಾಸ ಮಾಡುವ ಸನ್ಯಾಸಿ ಈಗ ಬಿಜೆಪಿ ಎಂಪಿ

ಪೌರತ್ವ ಕಾಯ್ದೆ 70 ವರ್ಷಗಳ ಹಿಂದೆಯೇ ಜಾರಿಗೆ ಬರಬೇಕಿತ್ತು. ನಮ್ಮ ಪೂರ್ವಜರು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಅವಕಾಶ ಲಭಿಸಿದ್ದು, ಕಾಂಗ್ರೆಸ್ ಮಾಡಿದ್ದ ಪಾಪವನ್ನು ನಾವು ಸ್ವಚ್ಛಗೊಳಿಸುತ್ತಿದ್ದೇವೆ ಎಂದು ಸಾರಂಗಿ ನುಡಿದರು.

click me!