
ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬಿದ್ದಿದೆ. ನ.12ರಂದು ಒಂದೇ ಹಂತದಲ್ಲಿ ರಾಜ್ಯ ವಿಧಾನಸಭೆಯ 68 ಸ್ಥಾನಗಳಿಗೆ ಮತದಾನ ನಡೆಯಲಿದೆ. ಆದರೆ ಫಲಿತಾಂಶಕ್ಕಾಗಿ ರಾಜ್ಯದ ಜನತೆ ಬರೋಬ್ಬರಿ ಒಂದು ತಿಂಗಳು ಕಾಯಬೇಕು. ಕಾರಣ ಡಿ.1 ಮತ್ತು 5ರಂದು ಗುಜರಾತ್ ವಿಧಾನಸಭೆಗೆ ನಡೆಯುವ ಚುನಾವಣೆಯ ಫಲಿತಾಂಶ ಜೊತೆಗೇ ಡಿ.8ರಂದು ಹಿಮಾಚಲಪ್ರದೇಶದ ಫಲಿತಾಂಶವನ್ನೂ ಆಯೋಗ ಪ್ರಕಟಿಸಲಿದೆ. ಬಹಿರಂಗ ಪ್ರಚಾರದ ಕಡೆಯ ದಿನವಾದ ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge), ಪ್ರಿಯಾಂಕಾ ವಾದ್ರಾ(Priyanka Vadra), ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ (Amit Shah) ಮೊದಲಾದವರು ರಾಜ್ಯದ ಹಲವು ಕಡೆ ಪ್ರಚಾರ ನಡೆಸುವ ಮೂಲಕ ಅಂತಿಮ ಹಂತದಲ್ಲಿ ಜನರ ಗಮನ ಸೆಳೆಯುವ ಯತ್ನ ಮಾಡಿದರು.
ತ್ರಿಪಕ್ಷೀಯ ಕದನ:
ಹಿಮಾಚಲದಲ್ಲಿ (Himachal) ಹಾಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಇದುವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ಇಲ್ಲಿ ಸೆಣಸಾಡುತ್ತಿದ್ದವು. ಆದರೆ ದೆಹಲಿ, ಪಂಜಾಬ್ ಬಳಿಕ ಆಮ್‌ಆದ್ಮಿ ಪಕ್ಷ ತನ್ನ ಮುಂದಿನ ಪ್ರಮುಖ ಗಮನವನ್ನು ಹಿಮಾಚಲದ ಮೇಲಿಟ್ಟು ಇಲ್ಲಿಗೆ ಕಣಕ್ಕೆ ಇಳಿದಿರುವ ಕಾರಣ, ಈ ಬಾರಿ ಚುನಾವಣೆ ಸ್ವಲ್ಪ ಹೆಚ್ಚೇ ರಂಗೇರಿದೆ. ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ 68 ವಿಧಾನಸಭಾ ಕ್ಷೇತ್ರಗಳು ಇವೆ. 55 ಲಕ್ಷ ಮತದಾರರು 68 ಕ್ಷೇತ್ರಗಳ ನೂತನ ಶಾಸಕರನ್ನು ಆಯ್ಕೆ ಮಾಡಲಿದ್ದಾರೆ. 1.86 ಲಕ್ಷ ನವ ಮತದಾರರು, 1.22 ಲಕ್ಷ 80 ವರ್ಷದ ದಾಟಿದವರು ಹಾಗೂ 1184 ಮಂದಿ 100 ವರ್ಷ ಮೀರಿದ ಮತದಾರರು ಹಿಮಾಚಲದಲ್ಲಿದ್ದಾರೆ.
ಹಿಮಾಚಲದಲ್ಲಿ ಕಾಂಗ್ರೆಸ್ ನನ್ನನ್ನು ಸರಿಯಾಗಿ ಬಳಸಿಲ್ಲ: ಶರ್ಮಾ ಅಸಮಾಧಾನ
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಹಿರಿಯ ನಾಯಕರನ್ನು ಬಳಸಿಕೊಂಡು ಪಕ್ಷದ ಪ್ರಚಾರವನ್ನು ಇನ್ನಷ್ಟು ಶಿಸ್ತುಬದ್ಧವಾಗಿ ಮತ್ತು ಸಂಘಟಿತವಾಗಿ ಮಾಡಬಹುದಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ (Congress leader) ಆನಂದ್ ಶರ್ಮಾ (Anand Sharma) ಹೇಳಿದ್ದಾರೆ. ‘ಪಕ್ಷದ ಚುನಾವಣಾ ಪ್ರಚಾರಕ್ಕೆ ಕೇಂದ್ರೀಕೃತ ಯೋಜನೆ ಮಾಡಿಲ್ಲ. ಹೀಗಾಗಿ ನನ್ನನ್ನು ವೈಯಕ್ತಿಕವಾಗಿ ಯಾರು ಕರೆದಿದ್ದಾರೋ ಅಲ್ಲಿಗೆ ಹೋಗಿ ಪ್ರಚಾರ ಮಾಡಿ ಬಂದಿರುವೆ. ನನ್ನನ್ನು ಪಕ್ಷ ಸರಿಯಾಗಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಆದರೂ 2017ಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾಸ ಹೆಚ್ಚಿದೆ. ಏಕೆಂದರೆ ನಿರುದ್ಯೋಗ, ಹಣದುಬ್ಬರ, ಹಳೆ ಪಿಂಚಣಿ ಸೇರಿದಂತೆ ಜನ ಸಾಮಾನ್ಯರ ವಿಷಯಗಳನ್ನು ಪಕ್ಷ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದೆ’ ಎಂದು ಹೇಳಿದ್ದಾರೆ.
ಗುಜರಾತ್ ಹಿಮಾಚಲದಲ್ಲಿ ಮತ್ತೆ ಅರಳಲಿದೆ ಕಮಲ: ಚುನಾವಣಾ ಪೂರ್ವ ಸಮೀಕ್ಷೆ
ಚುನಾವಣೆಗೂ ಮುನ್ನ 26 ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ