
ನವದೆಹಲಿ: ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಪ್ರಮುಖ ಆರೋಪಿಯಾಗಿರುವ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಹ-ಆರೋಪಿ, ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಇದುವರೆಗೂ ಬಂಧಿಸದ ಜಾರಿ ನಿರ್ದೇಶನಾಲಯದ ಕ್ರಮವನ್ನು ಸ್ಥಳೀಯ ನ್ಯಾಯಾಲಯ ಪ್ರಶ್ನಿಸಿದೆ.
ಗುರುವಾರ ಜಾಕ್ವೆಲಿನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದಿಲ್ಲಿ ವಿಶೇಷ ನ್ಯಾಯಾಲಯ, ‘ಆಕೆ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇದೆ ಎಂದು ಆಕೆ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದೀರಿ. ಆದರೆ ಆಕೆಯನ್ನು ಇದುವರೆಗೆ ಒಮ್ಮೆಯೂ ಬಂಧಿಸಿಲ್ಲ. ಇದೇ ಪ್ರಕರಣದ ಇತರೆ ಆರೋಪಿಗಳು ಜೈಲಿನಲ್ಲಿದ್ದರೂ ಆಕೆಯನ್ನು ಮಾತ್ರ ಸುಮ್ಮನೆ ಬಿಡಲಾಗಿದೆ. ಆರೋಪಿಗಳ ಬಂಧನದ ವಿಷಯದಲ್ಲೂ ಹೀಗೆ ತಾರತಮ್ಯ ಏಕೆ?’ ಎಂದು ಇ.ಡಿ.(Enforcement Directorate)ಯನ್ನು ತರಾಟೆಗೆ ತೆಗೆದುಕೊಂಡಿತು.
ಸುಲಿಗೆ ಪ್ರಕರಣದ ಜಾಮೀನು ವಿಚಾರಣೆಗಾಗಿ ಕೋರ್ಟ್‌ಗೆ ಜಾಕ್ವೆಲಿನ್ ಫರ್ನಾಂಡೀಸ್
ಇದೇ ವೇಳೆ ಜಾಮೀನು ಕೋರಿ ಜಾಕ್ವೆಲಿನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ತೀರ್ಪನ್ನು ಕಾದಿರಿಸಿತು.
ಸುಕೇಶ್ (Sukesh Chandrasekhar) ತನ್ನ ವಂಚನೆ ಹಾಗೂ ಸುಲಿಗೆಯ ದುಡ್ಡಿನಲ್ಲಿ ಜಾಕ್ವೆಲಿನ್‌ಗೆ (Jacqueline) ಕೋಟ್ಯಂತರ ರು. ಮೌಲ್ಯದ ವಸ್ತುಗಳನ್ನು ಉಡುಗೊರೆ ನೀಡಿದ್ದ. ಆತ ವಂಚಕ (fraud) ಎಂದು ಗೊತ್ತಿದ್ದರೂ ಜಾಕ್ವೆಲಿನ್ ಈ ಕಾಣಿಕೆ ಸ್ವೀಕರಿಸಿದ್ದಳು ಎಂಬುದು ಆರೋಪವಾಗಿದೆ.
ಸಾಕ್ಷ್ಯವನ್ನು ಹಾಳು ಮಾಡಿ, ದೇಶದಿಂದ ಓಡಿಹೋಗಲು ಜಾಕ್ವೆಲಿನ್ ಫರ್ನಾಂಡಿಸ್ ಪ್ರಯತ್ನ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ