ಬೆಂಗಳೂರು-ಮೈಸೂರು-ಚೆನ್ನೈ ವಂದೇ ಭಾರತ್ ರೈಲಿಗೆ ಚಾಲನೆ, ಕೆಂಪೇಗೌಡ ಪ್ರತಿಮೆ ಅನಾವಣರಣೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಉದ್ಘಾಟನೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೋದಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬೆಂಗಳೂರು (ನ.11): ಸಿಲಿಕಾಟನ್ ಸಿಟಿಯ ಅಭಿವೃದ್ಧಿಗೆ ಮೂಲ ಕಾರಣರಾದ ನಾಡಪ್ರಭು ಕೆಂಪೇಗೌಡ ಅವರ ಸ್ಮರಣಾರ್ಥವಾಗಿ ವಿಮಾನ ನಿಲ್ದಾಣದ ಸಮೀಪ ಸ್ಥಾಪಿಸಲಾದ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಸೇರಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿಳಿದಿದ್ದು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಸ್ವಾಗತಿಸಿದ್ದಾರೆ.
PM landed in Bengaluru a short while ago, where he was received by Governor , CM , Minister and other dignitaries as well as officials. pic.twitter.com/om0JZyEl4w
— PMO India (@PMOIndia)ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು ಟ್ವೀಟ್‌ನ ಮೂಲಕ ತಿಳಿಸಿದರು. 'ಕೆಲ ಸಮಯದ ಹಿಂದೆ ಬೆಂಗಳೂರಿಗೆ ಆಗಮಿಸಿದೆ. ರಾಜ್ಯಪಾಲ ಥಾವರ್ ಚಂದ್ ಗ್ಲೆಹೊಟ್ ನನ್ನನ್ನು ಸ್ವಾಗತಿಸಿದರು. ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಇತರ ಅಧಿಕಾರಿಗಳು ಕೂಡ ಹಾಜರಿದ್ದರು' ಎಂದು ಬರೆದುಕೊಂಡಿದ್ದಾರೆ. ಎಚ್‌ಎಎಲ್ ಏರ್‌ಪೋರ್ಟ್‌ನಿಂದ ಮೇಖ್ರಿ ಸರ್ಕಲ್‌ನಲ್ಲಿರುವ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿದ್ದಾರೆ. ಅಲ್ಲಿಂದ, ರಸ್ತೆ ಮಾರ್ಗವಾಗಿ ವಿಧಾನಸೌಧಕ್ಕೆ ಪ್ರಯಾಣ ಮಾಡಲಿದ್ದಾರೆ.
undefined
ಮಳೆ ಕಡಿಮೆ ಇರುವ ಹಿನ್ನಲೆಯಲ್ಲಿ ಹೆಲಿಕಾಪ್ಟರ್ ಮೂಲಕ ಪ್ರಯಾಣ: ಎಚ್‌ಎಎಲ್ ಏರ್‌ಪೋರ್ಟ್‌ಗೆ ಬಂದ ಪ್ರಧಾನಿ ನರೇಂದ್ರ ಮೋದಿಗೆ ಮಳೆಯ ಸ್ವಾಗತ ಸಿಕ್ಕಿತು. ಆದರೆ, ಮಳೆ ಕಡಿಮೆ ಇದ್ದ ಹಿನ್ನಲೆಯಲ್ಲಿ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿದರು. ಮಳೆ ಹೆಚ್ಚಿದ್ದಲ್ಲಿ ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡುವ ಯೋಚನೆಯಲ್ಲಿದ್ದರು. ಯಲಹಂಕ ವಾಯುನೆಲೆಯಿಂದ ರಸ್ತೆ ಮಾರ್ಗವಾಗಿ ಪ್ರಧಾನಿ ಮೋದಿ ವಿಧಾನ ಸೌಧ ತಲುಪಲಿದ್ದು, ಬೆಳಗ್ಗೆ 9.45ಕ್ಕೆ ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾಶಿಯಾತ್ರೆ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ, ಸೀಟುಗಳು ಭರ್ತಿ
ಪ್ರಧಾನಿ ಮೋದಿ ಬೆಂಗಳೂರಿಗೆ ಬಂದ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. ಜನರು ಕೂಡ ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ಮೋದಿ ಅವರಿಗೆ ಹರ್ಷೋದ್ಘಾರ ಹಾಕಿದ್ದಾರೆ. ಎಚ್‌ಎಎಲ್‌ಗೆ ಮೋದಿ ಬಂದ ಬಳಿಕ, ಯಾವ ಮಾರ್ಗದಲ್ಲಿ ಮೋದಿ ತೆರಳಲಿದ್ದಾರೆ ಎನ್ನುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದರು. ಕೊನೆಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಅನುಮತಿ ಸಿಕ್ಕ ಕಾರಣ, ಅದರಲ್ಲಿಯೇ ಮೋದಿ ಪ್ರಯಾಣ ಮಾಡಿದರು.
ವಿಧಾನಸೌಧದತ್ತ ಪ್ರಧಾನಿ ಮೋದಿ: ಹೆಬ್ಬಾಳದಿಂದ ರಸ್ತೆ ಮಾರ್ಗದಲ್ಲಿ ವಿಧಾನಸೌಧಕ್ಕೆ ಸಕಲ ಭದ್ರತೆಯೊಂದಿಗೆ ವಿಧಾನಸೌಧಕ್ಕೆ ಆಗಮಿಸಿದರು. ಈ ವೇಳೆ ಅಕ್ಕ ಪಕ್ಕ ನಿಂತ ಜನರಿಗೆ ಮೋದಿ ಕೈಬೀಸಿದ್ದಾರೆ. ಮೋದಿ ತೆರಳುವ ಮಾರ್ಗದುದ್ದಕ್ಕೂ ಜನಸಾಗರವೇ ಸೇರಿತ್ತು. ವಿಧಾನಸೌಧಕ್ಕೆ ಬರುವ ಮುನ್ನವೇ ಶಾಸಕರ ಭವನದತ್ತ ತೆರಳಿದ ಪ್ರಧಾನಿ ಮೋದಿ ಅಲ್ಲಿದ್ದ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಆ ಬಳಿಕ ವಾಲ್ಮೀಕಿ ಪ್ರತಿಮೆಗೂ ಕೂಡ ಮಾಲಾರ್ಪಣೆ ಮಾಡಲಿದ್ದಾರೆ.
ಕನಕದಾಸ, ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ: ಹೆಬ್ಬಾಳದಿಂದ ರಸ್ತೆಮಾರ್ಗವಾಗಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ವಿಧಾನಸೌಧಕ್ಕೂ ತೆರಳುವ ಮುನ್ನ ಶಾಸಕದ ಭವನಕ್ಕೆ ಆಗಮಿಸಿ ಅಲ್ಲಿದ್ದ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕುರುಬ ಸಮುದಾಯದ ನಿರಂಜನಾನಂದ ಪುರಿ, ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಪುರಿ ಸ್ವಾಮಿಗಳು ಜೊತೆಯಲ್ಲಿದ್ದರು. ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ವೇಳೆ ಪ್ರಧಾನಿ ಹೆಗಲ ಮೇಲೆ ಕಂಬಳಿ ಹೊದ್ದುಕೊಂಡಿದ್ದರು. ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ, ವಾಲ್ಮೀಕಿ ಪ್ರತಿಮೆಗೂ ಪುಷ್ಪಾರ್ಚನೆ ಮಾಡಿದರು.