ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್, ₹20 ಕೋಟಿ ಖರ್ಚು

Published : Feb 17, 2026, 04:15 PM IST
Hilite Group Gifts

ಸಾರಾಂಶ

ಹೈಕ್ ಮಾತ್ರವಲ್ಲ ಈ ಕಂಪನಿ ಉದ್ಯೋಗಿಗಳಿಗೆ ಡಿಫೆಂಡರ್ ಸೇರಿ 47 ಲಕ್ಷುರಿ ಕಾರು ಗಿಫ್ಟ್,, ಕಂಪನಿಯಲ್ಲಿ ಸುದೀರ್ಘ ಕಾಲದಿಂದ ಕೆಲಸ ಮಾಡುತ್ತಾ ಕಂಪನಿ ಬೆಳವಣಿಗೆಯಲ್ಲಿ ಪ್ರಮುಥ ಪಾತ್ರ ನಿರ್ವಹಿಸಿದ 47 ಉದ್ಯೋಗಿಗಳಿಗೆ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಲಾಗಿದೆ.

ಕೋಝಿಕ್ಕೋಡ್ (ಫೆ.17) ಖಾಸಗಿ ಕಂಪನಿಗಳಲ್ಲಿ ವರ್ಷಕ್ಕೆ ಒಂದು ಬಾರಿ ವೇತನ ಹೆಚ್ಚಳವನ್ನು ಎಲ್ಲರು ನಿರೀಕ್ಷಿಸುತ್ತಾರೆ. ಹಾಗಂತ ಎಲ್ಲಾ ಕಂಪನಿಯಲ್ಲಿ ಹೈಕ್ ಇರುತ್ತೆ ಎಂದಲ್ಲ. ಇದ್ದರೂ ನೀವು ನಿರೀಕ್ಷಿದಷ್ಟು ಸಿಗುತ್ತೆ ಎಂದಲ್ಲ. ಕಂಪನಿ ಆಯವ್ಯಯಗಳನ್ನು ನೋಡಿಕೊಂಡು ತಕ್ಕಮಟ್ಟನಿ ವೇತನ ಹೆಚ್ಚಳ ಮಾಡಲಾಗುತ್ತದೆ. ಇನ್ನು ಬೋನಸ್, ಹಬ್ಬದ ಗಿಫ್ಟ್, ಇವೆಲ್ಲ ಬಹುತೇಕ ದಂಪನಿಗಳಲ್ಲಿ ಕೇಳದ ಮಾತು. ಆದರೆ ನಮ್ಮ ಪಕ್ಕದ ರಾಜ್ಯದಲ್ಲಿರುವ ಈ ಕಂಪನಿ ತನ್ನ ಉದ್ಯೋಗಿಳಿಗೆ ಭರ್ಜರಿ ಹೈಕ್ ಮಾತ್ರವಲ್ಲ, 30ನೇ ವರ್ಷಾಚರಣೆ ಸಂಭ್ರಮದಲ್ಲಿ 47 ಉದ್ಯೋಗಗಳಿಗೆ ರೇಂಜ್ ರೋವರ್ ಡಿಫೆಂಡರ್ ಸೇರಿದಂತೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಇದಕ್ಕಾಗಿ ಕಂಪನಿ ಬರೋಬ್ಬರಿ 20 ಕೋಟಿ ರೂಪಾಯಿ ಖರ್ಚು ಮಾಡಿದೆ.

ಕೇರಳದ ಹೈಲೈಟ್ ಗ್ರೂಪ್ ತನ್ನ ಉದ್ಯೋಗಿಗಳಿಗೆ ಈ ಉಡುಗೊರೆ ನೀಡಿದೆ. ಹೈಲೈಟ್ ಗ್ರೂಪ್ ಆಫ್ ಕಂಪನಿ ಕೇರಳದಲ್ಲಿ ಮಾಲ್, ವರ್ಲ್ಡ್ ಟ್ರೇಟ್ ಸೆಂಟರ್ ಸೇರಿದಂತೆ ವಾಣಿಜ್ಯ ಕಟ್ಟಡಗಳ ನಿರ್ಮಾಣ, ಟೌನ್ ಶಿಪ್ ಅಭಿದ್ಧಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇದೀಗ 30ನೇ ವರ್ಷಾಚರಣೆ ಮಾಡುತ್ತಿರುವ ಸಂಭ್ರಮದಲ್ಲಿ ಕಂಪನಿ ಉದ್ಯೋಗಿಳಿಗೆ ಭರ್ಜರಿ ಉಡುಗೊರೆ ನೀಡಿ ಇತರ ಕಂಪನಿಗಳ ಉದ್ಯೋಗಿಗಳು ರೆಸ್ಯೂಮ್ ಕಳುಹಿಸುವಂತೆ ಮಾಡಿದ್ದಾರೆ.

ಡಿಫೆಂಡರ್, ಆಡಿ ಸೇರಿ ಐಷಾರಾಮಿ ಕಾರು ಉಡುಗೊರೆ

ಕಂಪನಿಯಲ್ಲಿ ಸುದೀರ್ಘ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಹೈಲೈಟ್ ಗ್ರೂಪ್ ಬೆಳವಣಿಗೆಯಲ್ಲಿ ಕಾರಣವಾಗಿರುವ ಉದ್ಯೋಗಿಳಿಗೆ ಕಾರು ಉಡುಗೊರೆ ನೀಡಲಾಗಿದೆ. ಕಂಪನಿಯಲ್ಲಿ ಹಲವು ಉದ್ಯೋಗಿಗಳಿದ್ದಾರೆ. 30ನೇ ವರ್ಷಾಚರಣೆ ಪ್ರಯುಕ್ತ 47 ಉದ್ಯೋಗಿಗಳನ್ನು ಆಯ್ಕೆ ಮಾಡಿ ಅವರಿಗೆ ರೇಂಜ್ ರೋವರ್ ಡಿಫೆಂಡರ್, ಆಡಿ ಸೇರಿದಂತೆ ಹಲವು ಬ್ರ್ಯಾಂಡ್ ಐಷಾರಾಮಿ ಕಾರುಗಳನ್ನು ಉದ್ಯೋಗಿಳಿಗೆ ಗಿಫ್ಟ್ ನೀಡಲಾಗಿದೆ. ಉಡುಗೊರೆ ನೀಡಿರುವ ಕಾರಿನ ಆರಂಭಿಕ ಬೆಲೆ 55 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

 

 

ಉದ್ಯೋಗಿಗಳಿಗಾಗಿ 20 ಕೋಟಿ ರೂಪಾಯಿ

ಉದ್ಯೋಗಿಗಳಿಗಾಗಿ ಹೈ ಲೈಟ್ ಗ್ರೂಪ್ ಬರೋಬ್ಬರಿ 20 ಕೋಟಿ ರೂಪಾಯಿ ಖರ್ಚು ಮಾಡಿದೆ. 47 ಉದ್ಯೋಗಿಗಳಿಗೆ ಕಾರು, ಇತರ ಉದ್ಯೋಗಿಗಳಿಗೆ ನಗದು ಗಿಫ್ಟ್, ವೋಚರ್ ಸೇರಿದಂತೆ ಹಲವು ಉಡುಗೊರೆ ನೀಡಲಾಗಿದೆ. ವಿಶೇಷ ಅಂದರೆ ಹೈಲೈಟ್ ಗ್ರೂಪ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ ವ್ಯಕ್ತಿ ಅಲ್ಲಿಂದ ರಾಜೀನಾಮೆ ನೀಡಿ ಮತ್ತೊಂದು ಸೇರಿಕೊಳ್ಳುವ ಉದಾಹರಣೆ ಕಡಿಮೆ. ಅಷ್ಟರಮಟ್ಟಿಗೆ ಹೈಲೈಟ್ ಕಂಪನಿ ಎಂಪ್ಲಾಯ್ ಫ್ರೆಂಡ್ಲಿ ಎಂದು ಹೇಲಾಗುತ್ತಿದೆ.

ನನಗೂ ಒಂದು ಕೆಲಸ ಬೇಕು

ಕಾರು ಉಡುಗೊರೆ ನೀಡಿದ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹಲವರು ಈ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ನಮ್ಮ ಕಂಪನಿಯಲ್ಲಿ ಸ್ಯಾಲರಿ ಬರುತ್ತೋ ಇಲ್ವೋ ಅಂತಾ ಕಾಯುತ್ತಿದ್ದೇವೆ, ಆದರೆ ಅಲ್ಲಿ ಕಾರು ಉಡುಗೊರೆ ನೀಡಿದ್ದಾರೆ ಎಂದು ಮೀಮ್ಸ್ ಮಾಡುತ್ತಿದ್ದಾರೆ. ಇತ್ತ ಹಲವರು ನನಗೂ ಒಂದು ಕೆಲಸ ಬೇಕು ಎಂದು ರೆಸ್ಯೂಮ್ ಕಳುಹಿಸುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್'ನಲ್ಲಿ ಭದ್ರತಾ ವೈಫಲ್ಯ: ಬೆಂಗಳೂರು ಸ್ಟಾರ್ಟಪ್‌ನ ಕೋಟಿ ಮೌಲ್ಯದ ಎಐ ಸಾಧನ ಕಳ್ಳತನ!
ಡಿನ್ನರ್ ಬಳಿಕ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಪತಿ ಪತ್ನಿ, ಲೈಟ್ ಆನ್ ಆದಾಗ ಹೆಂಡತಿ ಶವವಾಗಿ ಪತ್ತೆ