Hijab Case: ಜಾತ್ಯಾತೀತತೆ ಒಂದೇ ಧರ್ಮಕ್ಕೆ ಸೀಮಿತವೇ?: ತೀರ್ಪಿನಲ್ಲಿ ಪ್ರಶ್ನಿಸಿದ ನ್ಯಾ.ಹೇಮಂತ್‌ ಗುಪ್ತಾ

By Santosh Naik  |  First Published Oct 13, 2022, 5:40 PM IST

ಹಿಜಾಬ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ನೀಡಿದ ಅಭಿಪ್ರಾಯಗಳ ಪೂರ್ಣಪಾಠ ಲಭ್ಯವಾಗಿದೆ. ನ್ಯಾ.ಹೇಮಂತ್‌ ಗುಪ್ತಾ, ಜಾತ್ಯಾತೀತತೆ ಅನ್ನೋದು ದೇಶದ ಎಲ್ಲಾ ನಾಗರಿಕರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದರೆ, ಸುಧಾಂಶು ಧುಲಿಯಾ, ಶಾಲಾ ಗೇಟ್​ನಲ್ಲಿ ವಿದ್ಯಾರ್ಥಿನಿಯನ್ನು ನಿಲ್ಲಿಸಿ ಹಿಜಾಬ್ ತೆಗೆಸುವುದು ಆಕೆಯ ಖಾಸಗಿತನ ಮತ್ತು ಘನತೆಯ ಮೇಲಿನ ದಾಳಿ ಎಂದು ಹೇಳಿದ್ದಾರೆ.
 


ನವದೆಹಲಿ (ಅ.13): ಹಿಜಾಬ್‌ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತಾ ಹಾಗೂ ಸುಧಾಂಶು ಧುಲಿಯಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ತೀರ್ಪಿನ ಪೂರ್ಣ ಪಾಠ ಲಭ್ಯವಾಗಿದ್ದು, ಈ ವಾರಿ ನಿವೃತ್ತಿಯಾಗಲಿರುವ ಹೇಮಂತ್‌ ಗುಪ್ತಾ ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜಾತ್ಯಾತೀತತೆ ಅನ್ನೋದು ದೇಶದ ಎಲ್ಲಾ ನಾಗರಿಕರಿಗೂ ಅನ್ವಯವಾಗುತ್ತದೆ. ಕೇವಲ ಒಂದು ಧರ್ಮದವರಿಗೆ ಇದು ಅನ್ವಯವಾಗೋದಿಲ್ಲ ಎಂದು ಹೇಳಿದ್ದರೆ, ಸುಧಾಂಶು ಧುಲಿಯಾ ಮಾತ್ರ ಶಾಲಾ ಗೇಟ್​ನಲ್ಲಿ ವಿದ್ಯಾರ್ಥಿನಿಯನ್ನು ನಿಲ್ಲಿಸಿ ಹಿಜಾಬ್ ತೆಗೆಸುವುದು ಆಕೆಯ ಖಾಸಗಿತನ ಮತ್ತು ಘನತೆಯ ಮೇಲಿನ ದಾಳಿ ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಹಿಜಾಬ್‌ ಧರಿಸೋದು, ಬಿಡೋದು ಆಕೆಯ ಆಯ್ಕೆಯ ಸ್ವಾತಂತ್ರ್ಯ ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಇನ್ನು ಸಿಜಿಐ ಮುಂದೆ ಪ್ರಕರಣ ಹೋಗಿದ್ದು, ವಿಸ್ತ್ರತ ಪೀಠದಲ್ಲಿ ಯಾರೆಲ್ಲಾ ನ್ಯಾಯಮೂರ್ತಿಗಳಾಗಿ ಇರಲಿದ್ದಾರೆ ಎಂದು ಸ್ವತಃ ಸಿಜೆಐ ಯುಯು ಲಲಿತ್‌ ಅವರು ತೀರ್ಮಾನ ಮಾಡಲಿದ್ದಾರೆ. ಸುಪ್ರೀಂ ಕೋರ್ಟ್‌ನ ವಿಸ್ತ್ರತ ಪೀಠ ಹಿಜಾಬ್‌ ಕುರಿತಾದ ವಿಚಾರಣೆ ಪೂರ್ಣ ಮಾಡುವವರೆಗೂ, ರಾಜ್ಯದಲ್ಲಿ ಹಿಜಾಬ್‌ ಬ್ಯಾನ್‌ ಮುಂದುವರಿಯಲಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.

ನ್ಯಾಯಮೂರ್ತಿಗಳಾದ (Supreme Court) ಹೇಮಂತ್‌ ಗುಪ್ತಾ-ಸುಧಾಂಶು ಧುಲಿಯಾ ಅವರ ತೀರ್ಪಿನ ಪೂರ್ಣ ಪಾಠ

ನ್ಯಾ.ಹೇಮಂತ್‌ ಗುಪ್ತಾ (Justice Hemant Gupta) ಅವರ ತೀರ್ಪಿನ ಪೂರ್ಣ ಪಾಠ: ಜಾತ್ಯಾತೀತತೆ (secularism) ಅನ್ನೋದು ದೇಶದ ಎಲ್ಲಾ ನಾಗರಿಕರಿಗೂ ಅನ್ವಯಿಸುತ್ತದೆ. ಒಂದು ಧಾರ್ಮಿಕ ಸಮುದಾಯಕ್ಕೆ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಅನುಮತಿ ನೀಡುವುದು ಜಾತ್ಯತೀತತೆಯ ವಿರೋಧಿ ತೀರ್ಪು ಎಂದು ಭಾವಿಸುತ್ತೇನೆ. ಸರ್ಕಾರ ಮಾಡಿರುವ ಆದೇಶವು ಜಾತ್ಯಾತೀತಗೆ ವಿರುದ್ಧವಾಗಿದೆ ಅಥವಾ ಶಿಕ್ಷಣ ಕಾಯಿದೆಯ ವಿರುದ್ಧವಾಗಿದೆ ಎಂದು ಹೇಳಲು ಸಾಧ್ಯವಿಲ್ಲ.  ವಿದ್ಯಾರ್ಥಿಗಳಿಗೆ ಆರ್ಟಿಕಲ್ 21 ರ ಅಡಿಯಲ್ಲಿ ಶಿಕ್ಷಣ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಆದರೆ ತಮ್ಮ ಧರ್ಮದ ಭಾಗವಾಗಿ, ಜಾತ್ಯತೀತ ಶಾಲೆಯಲ್ಲಿ, ಸಮವಸ್ತ್ರಕ್ಕೆ ಹೆಚ್ಚುವರಿ ಏನನ್ನಾದರೂ ಧರಿಸುವ ಹಕ್ಕು ಇದಲ್ಲ. ಸರ್ಕಾರ ನಿಗದಿ ಮಾಡಿದ ಸಮವಸ್ತ್ರವನ್ನೇ ಧರಿಸಿಕೊಂಡು ಶಾಲೆಗೆ ಹೋಗಬೇಕು. ಅದನ್ನೇ ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ. ಇಂತಹ ಆದೇಶದ ಮೂಲಕ ರಾಜ್ಯವು ವಿದ್ಯಾರ್ಥಿನಿಯರಿಗೆ ಶಿಕ್ಷಣದ ಪ್ರವೇಶವನ್ನು ನಿರ್ಬಂಧಿಸುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಮೇಲ್ಮನವಿಯನ್ನು ವಜಾ ಮಾಡಿದ್ದಾರೆ.

Tap to resize

Latest Videos

Hijab Case: ಮುಸ್ಲಿಂ ಪುರುಷ ಪ್ರಧಾನ ವ್ಯವಸ್ಥೆಯ ಮಾನಸಿಕತೆ ಬದಲಾಯಿಸುವ ಅವಕಾಶವಿತ್ತು!

ನ್ಯಾ. ಸುಧಾಂಶು ಗುಪ್ತಾ (Justice Sudhanshu Dhulia) ಅವರ ತೀರ್ಪಿನ ಪೂರ್ಣ ಪಾಠ:  ಶಾಲಾ ಗೇಟ್​ನಲ್ಲಿ ವಿದ್ಯಾರ್ಥಿನಿಯನ್ನು ನಿಲ್ಲಿಸಿ ಹಿಜಾಬ್ (Hijab) ತೆಗೆಸುವುದು ಆಕೆಯ ಖಾಸಗಿತನ ಮತ್ತು ಘನತೆಯ ಮೇಲಿನ ದಾಳಿ. ಹಿಜಾಬ್ ನಿರ್ಬಂಧ ಅಂತಿಮವಾಗಿ ಆಕೆಗೆ ಜಾತ್ಯಾತೀತ ಶಿಕ್ಷಣವನ್ನ ನಿರಾಕರಿಸಿದಂತಾಗುತ್ತದೆ.. ಹಿಜಾಬ್ ನಿರ್ಬಂಧ ಸಂವಿಧಾನದ ವಿಧಿ 19 ಮತ್ತು 21ರ ಉಲ್ಲಂಘನೆ. ಖಾಸಗಿತನ ಮತ್ತು ಘನತೆಯ ಹಕ್ಕನ್ನು ಆಕೆ ಶಾಲಾ ಗೇಟ್ ಅಥವಾ ಶಾಲೆಯ ಒಳಗೆ ಎಲ್ಲಿದ್ದರೂ ಹೊಂದಿರುತ್ತಾಳೆ. ರಾಜ್ಯ ಸರ್ಕಾರ ಮತ್ತು ಶಾಲಾ ಆಡಳಿತಕ್ಕೆ ಯಾವುದು ಮುಖ್ಯ..? ಹೆಣ್ಣು ಮಕ್ಕಳ ಶಿಕ್ಷಣವೋ ಅಥವಾ ವಸ್ತ್ರ ಸಂಹಿತೆಯೋ..? ಅರ್ಜಿದಾರರು ಹಿಜಾಬ್ ಧರಿಸುವುದನ್ನು ಬಯಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹಕ್ಕು ಕೇಳುವುದೇ ಅತಿರೇಕವಾ..? ಹಿಜಾಬ್ ಧರಿಸುವುದು ಸರ್ಕಾರದ ನಿಯಮ, ನೈತಿಕತೆಯ, ಸಭ್ಯತೆಯ ವಿರುದ್ಧ ಹೇಗಾಗುತ್ತದೆ..? ಎಂದು ಹೇಳಿದ್ದಾರೆ.

Hijab Case: ಹಿಜಾಬ್‌ ಕುರಿತು ಬಾರದ ತೀರ್ಪು, ವಿಸ್ತ್ರತ ಪೀಠಕ್ಕೆ ಪ್ರಕರಣ

ಒಬ್ಬ ಹೆಣ್ಣು ಮಗಳು ಮನೆಯಲ್ಲಿ ಅಥವಾ ಮನೆಯ ಹೊರಗೆ ಹಿಜಾಬ್ ಧರಿಸುವ ಹಕ್ಕು ಹೊಂದಿದ್ದಾಳೆ. ಈ ಹಕ್ಕಿಗೆ ಶಾಲೆಯ ಗೇಟ್​ನಲ್ಲಿ ತಡೆ ಬರುವುದಿಲ್ಲ.ಒಬ್ಬ ಹೆಣ್ಣು ಮಗಳು ಶಾಲೆಯ ಗೇಟ್, ಶಾಲೆಯ ಒಳಗೂ ತನ್ನ ಖಾಸಗಿತನದ ಹಕ್ಕು ಮತ್ತು ಘನತೆಯನ್ನು ಹೊಂದಿರುತ್ತಾಳೆ ಎಂದು ಹೇಳುವ ಮೂಲಕ ಕರ್ನಾಟಕ ಹೈಕೋರ್ಟ್‌ (Karnataka High Court) ನೀಡಿದ್ದ ತೀರ್ಪು ತಪ್ಪು ಎಂದಿದ್ದಾರೆ. ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ.

click me!