Morbi Accident: 'ಜಾಸ್ತಿ ಜಾಣತನ ತೋರಿಸ್ಬೇಡಿ..' ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ಛೀಮಾರಿ!

By Santosh Naik  |  First Published Nov 15, 2022, 2:59 PM IST

ಮೊರ್ಬಿ ತೂಗುಸೇತುವೆ ದುರಂತ ಪ್ರಕರಣದ ವಿಚಾರಣೆ ಗುಜರಾತ್‌ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಸೋಮವಾರ ನಡೆದ ವಿಚಾರಣೆಯ ವೇಳೆ ಗುಜರಾತ್‌ ಸರ್ಕಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದೆ. 'ಕೇಳಿದ ಪ್ರಶ್ನೆಗಷ್ಟೇ ಉತ್ತರ ನೀಡಿ, ಜಾಸ್ತಿ ಜಾಣತನ ತೋರಿಡ್ಬೇಡಿ..' ಎಂದು ಹೇಳಿದೆ.


ಅಹಮದಾಬಾದ್‌ (ನ.15): ಕಳೆದ ತಿಂಗಳು ಸಂಭವಿಸಿದ ಮೊರ್ಬಿ ದುರಂತದ ಘಟನೆಯ ವಿಚಾರಣೆ ಗುಜರಾತ್‌ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಸೋಮವಾರ ನಡೆದ ವಿಚಾರಣೆಯ ವೇಳೆ ಹೈಕೋರ್ಟ್‌ ಕಟು ಶಬ್ದಗಳಲ್ಲಿ ಗುಜರಾತ್‌ ಸರ್ಕಾರಕ್ಕೆ ಛೀಮಾರಿ ಹಾಕಿದೆ. ತೂಗುಸೇತುವೆ ರಿಪೇರಿ ಮಾಡುವ ಕುರಿತಾಗಿ ಗುತ್ತಿಗೆ ನೀಡಿದ ರೀತಿಯ ಬಗ್ಗೆಯೂ ಕೋರ್ಟ್‌ ಪ್ರಶ್ನೆಗಳನ್ನು ಎತ್ತಿದೆ. ತೂಗುಸೇತುವೆಯಂಥ ಮಹತ್ವದ ಕಾಮಗಾರಿಗೆ ಟೆಂಡರ್‌ ಯಾಕೆ ಕರೆದಿರಲಿಲ್ಲ ಎಂದು ಪ್ರಶ್ನಿಸಿ ನ್ಯಾಯಾಲಯ ಮುಖ್ಯ ಕಾರ್ಯದರ್ಶಿಗೆ ಸಮಮ್ಸ್‌ ನೀಡಿದೆ. ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಪೀಠ, ಈ ಮಹತ್ವದ ಕಾಮಗಾರಿಯ ಒಪ್ಪಂದವನ್ನು ಕೇವಲ ಒಂದೂವರೆ ಪುಟಗಳಲ್ಲಿ ಹೇಗೆ ಪೂರ್ಣಗೊಳಿಸಲಾಯಿತು ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದೆ. ಅಕ್ಟೋಬರ್‌ 30 ರಂದು ನಡೆದ ಮೊರ್ಬಿ ತೂಗುಸೇತುವೆ ದುರಂತದಲ್ಲಿ 135 ಜನ ಮೃತಪಟ್ಟಿದ್ದರು. ಸಾಕಷ್ಟು ಜನ ಗಾಯಾಳು ಕೂಡ ಆಗಿದ್ದಾರೆ. ಆ ಬಳಿಕ ಪ್ರಕರಣದ ಗಂಭೀರತೆಯನ್ನು ಅರಿತು ವಿಚಾರಣೆ ಆರಂಭಿಸಿದ ಗುಜರಾತ್‌ ಹೈಕೋರ್ಟ್‌, ಆರು ಇಲಾಖೆಗಳಿಂದ ಉತ್ತರಗಳನ್ನು ಕೇಳಿ ಸಮನ್ಸ್‌ ಜಾರಿ ಮಾಡಿತ್ತು.

"ಸರ್ಕಾರಿ ಸಂಸ್ಥೆಯಾದ ಪಾಲಿಕೆಯು ಮಾಡಿದ ತಪ್ಪು ಇದು. ಅಂತಿಮವಾಗಿ 135 ಜನರ ಸಾವಿಗೆ ಕಾರಣವಾಗಿದೆ" ಎಂದು ನ್ಯಾಯಾಲಯವು ಪ್ರಾಥಮಿಕ ಅವಲೋಕನವಾಗಿ ಹೇಳಿದೆ. ನೋಟಿಸ್ ನೀಡಿದರೂ ಪಾಲಿಕೆಯ ಯಾವುದೇ ಅಧಿಕಾರಿಗಳು ಕೋರ್ಟ್‌ಗೆ ಬಂದಿಲ್ಲ. ಈ ವಿಚಾರದಲ್ಲಿ ಜಾಸ್ತಿ ಜಾಣತನ ತೋರಿಸಬೇಡಿ ಎಂದು ಪೀಠ ಟೀಕಿಸಿತು. ಸೇತುವೆಯನ್ನು ಪುನಃ ತೆರೆಯುವ ಮೊದಲು ಫಿಟ್‌ನೆಸ್‌ ಪ್ರಮಾಣೀಕರಣ ಮಾಡುವ ಅಗತ್ಯವಿಲ್ಲ ಎನ್ನುವ ಷರತ್ತು ಒಪ್ಪಂದದ ಭಾಗವಾಗಿತ್ತೇ ಹಾಗೂ ಇದರ ಜವಾಬ್ದಾರರು ಯಾರು ಎನ್ನುವ ವಿವರಗಳೊಂದಿಗೆ ಕೋರ್ಟ್‌ಗೆ ಮರಳಬೇಕು ಎಂದು ಪುರಸಭೆಗೆ ಸೂಚಿಸಿದೆ. ಪ್ರಕರಣದಲ್ಲಿ ಪಾಲಿಕೆಯ ಮುಖ್ಯ ಅಧಿಕಾರಿಯ ವಿರುದ್ಧ ಯಾಕೆ ಯಾವುದೇ ಶಿಸ್ತು ಕ್ರಮ ದಾಖಲು ಮಾಡಿಲ್ಲ ಎನ್ನುವುದಕ್ಕೆ ಸರ್ಕಾರ ಕೂಡ ಕಾರಣಗಳನ್ನು ನೀಡಬೇಕು ಎಂದು ಕೋರ್ಟ್‌ ಹೇಳಿದೆ.

Gujarat Election 2022: ರವೀಂದ್ರ ಜಡೇಜಾ ಪತ್ನಿ, ಮೊರ್ಬಿ ದುರಂತದಲ್ಲಿ ಜನರ ಜೀವ ಉಳಿಸಿದ ವ್ಯಕ್ತಿಗೆ ಬಿಜೆಪಿ ಟಿಕೆಟ್‌!

ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆಗೆ ಸಮ್ಮತಿ:  ಮೊರ್ಬಿ ಸೇತುವೆ ಕುಸಿತದ ಘಟನೆಯ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಕೀಲ ವಿಶಾಲ್ ತಿವಾರಿ ಅವರು ಈ ವಿಷಯವನ್ನು ತುರ್ತು ವಿಚಾರಣೆಯ ಮಾಡುವ ಅಗತ್ಯವಿದೆ ಎಂದು ಹೇಳಿದೆ. ಆದರೆ, ಈ ಅರ್ಜಿಗಳು ತಮಗೆ ತಡವಾಗಿ ತಲುಪಿದ್ದು, ಇದನ್ನು ವಿಚಾರಣೆ ಮಾಡುತ್ತೇವೆ ಎಂದು ಕೇಳಿದೆ. ಇದೇ ವೇಳೆ ಇದರ ತುರ್ತು ವಿಚಾರಣೆಯ ಅಗತ್ಯವೇನು ಎಂದೂ ವಕೀಲರನ್ನು ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರಿಸಿದ ವಕೀಲರು, ದೇಶದಲ್ಲಿ ಇನ್ನೂ ಸಾಕಷ್ಟು ಹಳೆಯ ಕಾಲದ ಸೇತುವೆಗಳು ಹಾಗೂ ಕಟ್ಟಡಗಳಿವೆ . ಆ ಕಾರಣದಿಂದಾಗಿ ಇದನ್ನು ಆದ್ಯತೆಯನ್ನಾಗಿ ಪರಿಗಣಿಸಿದ ವಿಷಯವನ್ನು ಆಲಿಸಬೇಕು ಎಂದು ಹೇಳಿದ್ದಾರೆ.

Tap to resize

Latest Videos

ಮೊರ್ಬಿ ತೂಗು ಸೇತುವೆ ದುರಂತ ಪ್ರಕರಣ, ನವೀಕರಣಕ್ಕೆ 2 ಕೋಟಿ ರೂನಲ್ಲಿ ಬಳಸಿದ್ದು 12 ಲಕ್ಷ ಮಾತ್ರ!

ಅರ್ಜಿಯಲ್ಲಿ ಹೇಳಿದ್ದೇನು?: ಗುಜರಾತ್‌ನ ಮೊರ್ಬಿಯಲ್ಲಿ ಮಚ್ಛು ನದಿಗೆ ಬ್ರಿಟಿಷರ ಕಾಲದ ಸೇತುವೆ ಕುಸಿದು ಬಿದ್ದ ಪರಿಣಾಮ 135 ಜನರು ಸಾವು ಕಂಡಿದ್ದಾರೆ. ಅಪಘಾತವು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ ಎಂದು ತಿವಾರಿ ಅರ್ಜಿಯಲ್ಲಿ ಬರೆದಿದ್ದಾರೆ. ಕಳೆದ ಒಂದು ದಶಕದಲ್ಲಿ ನಮ್ಮ ದೇಶದಲ್ಲಿ ದುರಾಡಳಿತ, ಕರ್ತವ್ಯ ಲೋಪ ಮತ್ತು ನಿರ್ವಹಣೆಯ ನಿರ್ಲಕ್ಷ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವುಗಳು ಸಂಭವಿಸಿದ್ದು, ಅದನ್ನು ತಪ್ಪಿಸಬಹುದಾಗಿದ್ದ ಅನೇಕ ಘಟನೆಗಳು ನಡೆದಿವೆ ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ. ರಾಜ್ಯದ ರಾಜಧಾನಿ ಗಾಂಧಿನಗರದಿಂದ ಸುಮಾರು 300 ಕಿಮೀ ದೂರದಲ್ಲಿರುವ ಶತಮಾನದಷ್ಟು ಹಳೆಯದಾದ ಸೇತುವೆಯನ್ನು ವ್ಯಾಪಕ ದುರಸ್ತಿ ಮತ್ತು ನವೀಕರಣ ಮಾಡಲಾಗಿತ್ತು. ದುರಂತ ನಡೆಯುವ ಐದು ದಿನಗಳ ಮುಂಚೆಯಷ್ಟೇ ಇದನ್ನು ಜನ ಬಳಕೆಗೆ ತೆರೆಯಲಾಗಿತ್ತು. ಅಕ್ಟೋಬರ್‌ 30ರ ಸಂಜೆ 6.30ರ ಸುಮಾರಿಗೆ ಸೇತುವೆ ಕುಸಿದಿತ್ತು.

click me!