ಇಲ್ಲೊಂದು ಕಡೆ ವಧು ಮದುವೆಗೆ ಮೊದಲೇ ಹೈಕೋರ್ಟ್ ಕದ ತಟ್ಟಿ ಭಾರಿ ಭದ್ರತೆಯ ಮಧ್ಯೆ ಮದ್ವೆಯಾಗಿದ್ದಾರೆ. ಈ ಮದುವೆಯಲ್ಲಿ ನೆಂಟರು ಬಂಧುಗಳಿಗಿಂತ ಹೆಚ್ಚು ಪೊಲೀಸರೇ ಇದ್ದರಂತೆ. ಅದು ಏಕೆ ಅಂತ ಇಲ್ಲಿದೆ ನೋಡಿ ಸ್ಟೋರಿ..
ಜೈಸಲ್ಮೇರ್: ಸಾಮಾನ್ಯವಾಗಿ ಮದುವೆಗೆ ಪೊಲೀಸರು ಭದ್ರತೆ ನೀಡಿದಂತಹ ಪ್ರಕರಣಗಳು ತೀರಾ ಕಡಿಮೆ ಮದುವೆಯಾದ ಪ್ರೇಮಿಗಳು ನಂತರದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಪೋಷಕರಿಂದ ರಕ್ಷಣೆ ನೀಡುವಂತೆ ಕೇಳುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ವಧು ಮದುವೆಗೆ ಮೊದಲೇ ಹೈಕೋರ್ಟ್ ಕದ ತಟ್ಟಿ ಭಾರಿ ಭದ್ರತೆಯ ಮಧ್ಯೆ ಮದ್ವೆಯಾಗಿದ್ದಾರೆ. ಈ ಮದುವೆಯಲ್ಲಿ ನೆಂಟರು ಬಂಧುಗಳಿಗಿಂತ ಹೆಚ್ಚು ಪೊಲೀಸರೇ ಇದ್ದರಂತೆ. ಅದು ಏಕೆ ಅಂತ ಇಲ್ಲಿದೆ ನೋಡಿ ಸ್ಟೋರಿ..
ಹೈಕೋರ್ಟ್ ಆದೇಶದಂತೆ ಭಾರಿ ಭದ್ರತೆ
ಇತ್ತೀಚೆಗೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಖೇತೋಲೈ ಗ್ರಾಮದಲ್ಲಿ ನಡೆದ ಮದುವೆ ಈಗ ಭಾರಿ ಚರ್ಚೆಯ ವಿಷಯವಾಗಿದೆ. ಯಾಕಂದ್ರೆ ಮದುವೆ ನಡೀಬೇಕಾದ್ರೆ ಇಡೀ ಊರೇ ಪೊಲೀಸ್ ಠಾಣೆ ತರ ಆಗೋಗಿತ್ತು. ಅಷ್ಟೇ ಅಲ್ಲ, RPS ಆಫೀಸರ್ ಒಬ್ಬರು ಸ್ವತಃ ಈ ಮದುವೆ ಸಮಾರಂಭದ ಉಸ್ತುವಾರಿ ವಹಿಸಿಕೊಂಡಿದ್ರು. ಈ ಮದುವೆ ಬಗ್ಗೆ ವಧುವಿಗೆ ಬೆದರಿಕೆಗಳು ಬಂದಿದ್ದವು. ಅದಕ್ಕೆ ಹೈಕೋರ್ಟ್ (Rajasthan High Court) ಆದೇಶದ ಮೇರೆಗೆ ಭದ್ರತೆ ನೀಡಲಾಗಿತ್ತು.
ವಧುವಿಗೆ ಬೆದರಿಕ ಏಕೆ?
ಈ ಮದುವೆ ಟೀಚರ್ ಶಿಲ್ಪಾ ಬಿಶ್ನೋಯ್ ಅವರದ್ದು. ಇವರ ಮದುವೆ ಆಗೋಕೆ ಮುಂಚೆ ರಣಿಸರ್ ಗ್ರಾಮದಲ್ಲಿ ಬೇರೆ ಕಡೆ ಎಂಗೇಜ್ಮೆಂಟ್ ಆಗಿತ್ತು. ಆದ್ರೆ ಹುಡುಗ ಸರಿ ಇಲ್ಲ ಅಂತ ಶಿಲ್ಪಾ ತಂದೆ ಸಂಬಂಧ ಮುರಿದಿದ್ರು. ಆಮೇಲೆ ಶಿಲ್ಪಾಳ ಎಂಗೇಜ್ಮೆಂಟ್ ಸುನೀಲ್ ಬಿಶ್ನೋಯ್ ಜೊತೆ ಫಿಕ್ಸ್ ಆಯ್ತು. ಈ ವಿಷಯ ಮೊದಲೇ ಎಂಗೇಜ್ ಆಗಿದ್ದ ಹುಡುಗನಿಗೆ ಗೊತ್ತಾಗಿ ಟೀಚರ್‌ನ ಕೊಲೆ ಮಾಡ್ತೀನಿ ಅಂತ ಬೆದರಿಸಿ 50 ಲಕ್ಷಕ್ಕೆ ಡಿಮ್ಯಾಂಡ್ ಮಾಡ್ತಿದ್ದ.
ಟೀಚರ್ ಹೈಕೋರ್ಟ್ ಬಾಗಿಲು ತಟ್ಟಿದಾಗ
ಈ ಘಟನೆಯಿಂದ ಬೆದರಿದ ಟೀಚರ್ ಹೈಕೋರ್ಟ್ ಬಾಗಿಲು ತಟ್ಟಿ ಪೊಲೀಸರಿಂದ ರಕ್ಷಣೆ ಕೇಳಿದ್ರು. ಆಮೇಲೆ ವರನ ದಿಬ್ಬಣ ಕೂಡ ವಧುವಿನ ಮನೆಗೆ ಭದ್ರತೆಯೊಂದಿಗೆ ಬಂತು. ಅಷ್ಟೇ ಅಲ್ಲ, ಇಡೀ ಮದುವೆ ಸಮಾರಂಭದಲ್ಲಿ ಪೊಲೀಸರು ಮತ್ತು RACಯೋಧರು ಕೂಡ ಇದ್ದರು. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಯಿತು. ಮದುವೆ ಆದ್ಮೇಲೆ ಮಧ್ಯಾಹ್ನ ದಿಬ್ಬಣ ಹೊರಟು ಹೋಯ್ತು ಮತ್ತು ವಧುವಿನ ಬೀಳ್ಕೊಡುಗೆ ಆಯ್ತು ಅಂತ RPS ಆಫೀಸರ್ ಡಿವೈಎಸ್ಪಿ ಭವಾನಿ ಸಿಂಗ್ ಹೇಳಿದ್ದಾರೆ.
ಜೈಸಲ್ಮೇರ್ ಮದುವೆ ರಾಜಸ್ಥಾನದಲ್ಲಿ ಸುದ್ದಿ
ದಿಬ್ಬಣವನ್ನು ವಧುವಿನ ಮನೆಯಿಂದ ವರನ ಮನೆಗೆ ಪೊಲೀಸ್ ಭದ್ರತೆಯೊಂದಿಗೆ ತಲುಪಿಸಲಾಯಿತು. ಒಟ್ಟಿನಲ್ಲಿ ರಾಜಸ್ಥಾನದಲ್ಲಿ ನಡೆದ ಈ ಮದುವೆ ಈಗ ರಾಜ್ಯದಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ಈ ಹಿಂದೆ ದಲಿತ ವರನ ದಿಬ್ಬಣವನ್ನು ಪೊಲೀಸ್ ಭದ್ರತೆಯಲ್ಲಿ ಕರೆದುಕೊಂಡು ಹೋದ ಹಲವು ಪ್ರಕರಣಗಳು ನಡೆದಿವೆ. ಆದ್ರೆ ವಧುವಿನ ಕೋರಿಕೆಯ ಮೇರೆಗೆ ಪೊಲೀಸ್ ಭದ್ರತೆ ನೀಡಿದ್ದು ಇದೇ ಮೊದಲು.