ಪತ್ನಿ ಹಾಗೂ ಮಗನನ್ನು ಬಸ್ ಹತ್ತಿಸಿದ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬರ ಪ್ರಯತ್ನ ಹಾಗೂ ಶೈಲಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಇಲ್ಲಿದೆ.
ಭಾರತದಲ್ಲಿ ಕಟುಂಬ ಸದಸ್ಯರನ್ನು ಅಥವಾ ಆಪ್ತರನ್ನು ಬಸ್ ನಿಲ್ದಾಣಕ್ಕೆ ತೆರಳಿ ಬಸ್ ಹತ್ತಿಸುವುದು, ರೈಲು, ವಿಮಾನ ನಿಲ್ದಾಣಕ್ಕೆ ತೆರಳಿ ಸುಖಕರ ಪ್ರಯಾಣಕ್ಕೆ ಶಭಕೋರುವುದು ಸಾಮಾನ್ಯ ಪ್ರಕ್ರಿಯೆ. ಇದೇ ರೀತಿ ಪತ್ನಿ ಹಾಗೂ ಮಗನನ್ನು ವ್ಯಕ್ತಿಯೊಬ್ಬರು ಬಸ್ ಹತ್ತಿಸಿದ್ದಾರೆ. ಬಸ್ ಹತ್ತಿಸಿದ ರೀತಿಗೆ ಜನರು ಫಿದಾ ಆಗಿದ್ದಾರೆ. ಹಳೇ ವಿಡಿಯೋ ಒಂದು ಇದೀಗ ಭಾರಿ ಸದ್ದು ಮಾಡುತ್ತಿದೆ. ಅಮೆರಿಕ ವಿಮಾನಗಳು ಈ ರೀತಿ ಲ್ಯಾಂಡ್ ಆಗುವುದಿಲ್ಲ, ಅಷ್ಟರ ಮಟ್ಟಿಗೆ ಈ ವ್ಯಕ್ತಿ ಅಚ್ಚುಕಟ್ಟಾಗಿ ಪತ್ನಿ ಹಾಗೂ ಮಗನನ್ನು ಬಸ್ ಹತ್ತಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಏನಿದೇ ವಿಡಿಯೋದಲ್ಲಿ?
ಫ್ರೊ ಸರಿತಾ ಸಿದ್ ಅನ್ನೋ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಬಸ್ ನೋಡಿದರೆ ತಮಿಳುನಾಡಿನಲ್ಲಿ ನಡೆದಿರುವ ಸಾಧ್ಯತೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರನ್ನು ಹತ್ತಿಸಿಕೊಂಡ ಬಸ್ ನಿಧಾನವಾಗಿ ಹೊರಟಿದೆ. ಆದರೆ ಇದೇ ವೇಳೆ ಪತ್ನಿ ಹಾಗೂ ಮಗನನ್ನು ಅದೇ ಬಸ್ ಮೂಲಕ ಯಾತ್ರೆಯಾಗಿಸಲು ವ್ಯಕ್ತಿಯೊಬ್ಬರು ಆಗಮಿಸಿದ್ದರೆ.ಈ ವಿಡಿಯೋ ಆರಂಭಗೊಳ್ಳುವುದೇ ಅತ್ಯಂತ ರೋಚಕವಾಗಿದೆ.
ಎಲಾನ್ ಮಸ್ಕ್ ಏಲಿಯನ್ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ, ಟ್ರಂಪ್ ಡಿನ್ನರ್ ಪಾರ್ಟಿ ವಿಡಿಯೋ ಸಂಚಲನ
ಸೈಕಲ್ ಮೂಲಕ ವ್ಯಕ್ತಿ ಆಗಮಿಸಿದ್ದಾರೆ. ಹಿಂಬದಿಯಲ್ಲಿ ಪತ್ನಿ ಕುಳಿತಿದ್ದರೆ, ವ್ಯಕ್ತಿಯ ಭುಜದ ಮೇಲೆ ಬಾಲಕ ಕುಳಿತಿದ್ದಾನೆ. ಯಾವುದೇ ಸಮಸ್ಯೆ ಇಲ್ಲದೆ ಈತ ಸೈಕಲ್ ಬ್ಯಾಲೆನ್ಸ್ ಮಾಡುತ್ತಾ ಸಾಗಿದ್ದಾನೆ. ಈತನ ಬ್ಯಾಲೆನ್ಸ್ ನೋಡಿದರೆ ಪ್ರತಿ ದಿನ ಈ ರೀತಿ ಸಾಹಸ ಮಾಡಿದ್ದಾನೆ ಅನ್ನೋಷ್ಟು ಸುಲಭವಾಗಿ ಸಾಗಿದ್ದಾನೆ. ವ್ಯಕ್ತಿ ಆಗಮಿಸುತ್ತಿದ್ದಂತೆ ಬಸ್ ಹೊರಟಿದೆ. ಹೀಗಾಗಿ ಈತ ಇಬ್ಬರನ್ನು ಸೈಕಲ್‌ನಲ್ಲಿ ಕುಳ್ಳಿರಿಸಿದ್ದರೂ ಕೈ ಮೂಲಕ ಬಸ್ ಚಾಲನಕನಿಗೆ ನಿಲ್ಲಿಸುವಂತೆ ಸನ್ನೆ ಮಾಡಿದ್ದಾನೆ.
इतनी सही लेंडीग तो अमेरीका की फ्लाईट भी नही कर सकती, ऐसे पायलेट भारत में है! pic.twitter.com/DUwxrUQmv3
— Prof. Sarita Sidh (@profsaritasidh)
ಸೈಕಲ್ ಮೂಲಕ ಈತ ಬಸ್ ಸನಿಹಕ್ಕೆ ಹೋಗುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸಿದ್ದಾನೆ. ಇಲ್ಲೇ ಇರೋದು ಮತ್ತಷ್ಟು ಮಜಾ. ಅಮೆರಿಕ ವಿಮಾನ ಕೂಡ ಈ ರೀತಿ ಲ್ಯಾಂಡ್ ಆಗಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಕಾರಣ ಈತ ನೇರವಾಗಿ ಸೈಕಲ್‌ನ್ನು ಬಸ್‌ನ ಮುಂಭಾಗ ಡೋರ್ ಬಳಿ ನಿಲ್ಲಿಸಿದ್ದಾನೆ. ಹಾಗಂತ ಕಾಲು ನೆಲಕ್ಕೆ ಇಟ್ಟಿಲ್ಲ. ಬಸ್ ಬಾಗಿಲಿನ ಮೆಟ್ಟಿಲು ಬಳಿ ಇಟ್ಟಿದ್ದಾನೆ. ಬಳಿಕ ಹೆಗಲ ಮೇಲಿದ್ದ ಮಗನನ್ನು ಬಸ್ ಮೆಟ್ಟಿಲಿಗೆ ಇಳಿಸಿದ್ದಾನೆ. ಇತ್ತ ಸೈಕಲ್ ಹಿಂಭಾಗದಲ್ಲಿ ಕುಳಿತಿದ್ದ ಪತ್ನಿಕೂಡ ರಸ್ತೆಗೆ ಇಳಿದಿಲ್ಲ. ಸೈಕಲ್‌ನಿಂದ ನೇರವಾಗಿ ಬಸ್ ಒಳಗೆ ಇಳಿದಿದ್ದಾರೆ.
ಇಬ್ಬರನ್ನು ಬಸ್ ಹತ್ತಿಸಿದ ರೀತಿಗೆ ಜನರು ಫಿದಾ ಆಗಿದ್ದಾರೆ. ಇಷ್ಟು ಪರ್ಫೆಕ್ಟ್ ಆಗಿ ಈತ ಪತ್ನಿ ಮಗನ ಬಸ್ ಹತ್ತಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಿವುಡ್ ಸ್ಟಂಟ್ ರೀತಿ ಸುಂದರವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಚಿಕ್ಕ ಚಾಯ್‌ವಾಲಾಗೆ ಅಂಕಲ್ ಎಂದ ಮಹಿಳೆ; ಮುಂದೆ ಏನಾಯ್ತು ನಿವೇ ಒಮ್ಮೆ ನೋಡಿ!