
ಸನಾತನ ಧರ್ಮ ವೈರಸ್ ಇದ್ದಂತೆ ಎಂದು ಸನಾತನ ಧರ್ಮದ ವಿರುದ್ಧ ತಮಿಳು ನಟ, ಸಚಿವ ರಾಜಕಾರಣಿ ಉದಯ ನಿಧಿ ಸ್ಟಾಲಿನ್ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಜತೆಗೆ, ತಾವು ನೀಡಿದ ಹೇಳಿಕೆಗೆ ತಾವು ಈಗಲೂ ಬದ್ಧ ಎಂದು ಹೇಳುವ ಮೂಲಕ ಸನಾತನ ಧರ್ಮದ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ, ಈ ಬಗ್ಗೆ ಹೈ ಕೋರ್ಟ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಹೈ ಕೋರ್ಟ್ 'ಉದಯನಿಧಿ ಸ್ಟಾಲಿನ್ ಆ ಹೇಳಿಕೆ ಕೊಟ್ಟಾಗ ಯಾಕೆ ಪೊಲೀಸರು ಕೇಸ್ ದಾಖಲಿಸಿಲ್ಲ' ಎಂದು ಪೊಲೀಸ್ ವ್ಯವಸ್ಥೆ ಬಗ್ಗೆ ಚಾಟಿ ಬೀಸಿದೆ. ತಮಿಳು ನಾಡಿದ ಹಾಲಿ ಸಚಿವ ಉದಯನಿಧಿ ಸ್ಟಾಲಿನ್ ಇಂತಹ ಜನ ವಿರೋಧಿ, ಒಂದು ಸಮುದಾಯದ, ಧರ್ಮದ ವಿರುದ್ಧ ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ಕೊಟ್ಟಾಗ ಪೊಲೀಸ್ ಈ ಬಗ್ಗೆ ಕೇಸ್ ದಾಖಲಿಸಿಲ್ಲ. ಕೇಸ್ ಇಲ್ಲದಿದ್ದರೆ ತಾವು ಇಂತಹ ವಿಷಯದಲ್ಲಿ ಕೈ ಹಾಡಕುವುದು ಅಸಾಧ್ಯ' ಎಂದಿದೆ.
ಸ್ಕೂಲ್ ಅಥವಾ ಕಾಲೇಜಿನಲ್ಲಿ ಹೀಗೆ ನನ್ನ ಅಶ್ಲೀಲ ವಿಡಿಯೋ ವೈರಲ್ ಆಗಿದ್ದರೆ ಗತಿ ಏನಾಗಿರುತ್ತಿತ್ತೋ!
ಉದಯ ನಿಧಿ ಸ್ವಾಲಿನ್ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬಗ್ಗೆ ಭಾರತದಾದ್ಯಂತ ಸನಾತನ ಧರ್ಮಿಯರ ತೀವ್ರ ಆಕ್ರೋಶ ಭುಗಿಲೆದ್ದಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಟ ಕಮಲ್ ಹಾಸನ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ಸ್ಟಾಲಿನ್ ಹೇಳಿಕೆ ಸಮರ್ಥಿಸಿಕೊಂಡಿದ್ದರು. ಆದರೆ, ದೇಶಾದ್ಯಂತ ಉದಯನಿಧಿ ಸ್ಟಾಲಿನ್ ಹೇಳಿಕೆ ಬೆಂಕಿ ಹಚ್ಚಿದ್ದರೂ ಅವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ; ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೋಷಿಯಲ್ ಮೀಡಿಯಾಗೆ ವಾರ್ನಿಂಗ್
ಒಟ್ಟಿನಲ್ಲಿ, ಇದೀಗ ವಾದ-ವಿವಾದಗಳ ಬಳಿಕ, ಈ ವಿಷಯದಲ್ಲಿ ಹೈ ಕೋರ್ಟ್ ಪೊಲೀಸ್ ಕಡೆ ಬೆಟ್ಟು ಮಾಡಿದೆ. ಇಂತಹ ಸೂಕ್ಷ್ಮ ಸಂಗತಿಗಳಿಗೆ ಸಂಬಂಧಿಸಿ ಕೇಸ್ ದಾಖಲಾಗದಿದ್ದರೆ ಕೋರ್ಟ್ ಮೂಗು ತೂರಿಸಲು ಅಸಾಧ್ಯ ಎಂಬ ಸಂದೇಶವನ್ನು ಹೈ ಕೋರ್ಟ್ ಸಾರಿದೆ ಎನ್ನಬಹುದು. ಉದಯನಿಧಿ ಹೇಳಿಕೆ ಈಗ ತಣ್ಣಗಾಗಿದ್ದರೂ ಅಂದು ಈ ಬಗ್ಗೆ ಭಾರೀ ಕೋಲಾಹಲವೇ ಸೃಷ್ಟಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ