ಸನಾತನ ಧರ್ಮವನ್ನು ಕೊನೆಯ ಉಸಿರಿನವರೆಗೂ ವಿರೋಧಿಸುತ್ತೇನೆ, ಮತ್ತೆ ವಿವಾದ ಸೃಷ್ಟಿಸಿದ ಸ್ಟಾಲಿನ್!

By Suvarna News  |  First Published Nov 6, 2023, 7:49 PM IST

ಸನಾತನ ಧರ್ಮವನ್ನು ಸರ್ವನಾಶ ಮಾಡಲು ಕರೆ ಕೊಟ್ಟ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸನಾತನ ಧರ್ಮವನ್ನು ಕೊನೆಯ ಉಸಿರನವರೆಗೂ ವಿರೋಧಿಸುತ್ತೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
 


ಚೆನ್ನೈ(ನ.06) ಸನಾತನ ಧರ್ಮ ಮಲೇರಿಯಾ ಡೆಂಗ್ಯೂ ರೀತಿ. ಅದನ್ನು ಸರ್ವನಾಶ ಮಾಡಬೇಕು ಎಂದು ಕರೆಕೊಟ್ಟ ತಮಿಳುನಾಡು ಸಿಎಂ ಪುತ್ರ ಉದಯನಿಧಿ ಸ್ಟಾಲಿನ್ ಇದೀಗ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ಈಗಾಗಲೇ ತಮ್ಮ ಹೇಳಿಕೆಯನ್ನು ಸಮರ್ಥಿಸಿರುವ ಉದಯನಿಧಿ ಸ್ಟಾಲಿನ್, ಇದೀಗ ಕೊನೆಯ ಉಸಿರಿನವರೆಗೂ ಸನಾತನ ಧರ್ಮ ವಿರೋಧಿಸುವುದಾಗಿ ಹೇಳಿದ್ದಾರೆ. ಸನಾನತ ನೂರಾರು ವರ್ಷಗಳ ಸಮಸ್ಯೆ, ಇದನ್ನು ವಿರೋಧಿಸುತ್ತಲೇ ಇರುತ್ತೇನೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. 

ಸನಾತನ ಧರ್ಮ ನಾಶಕ್ಕೆ ಕರೆಕೊಟ್ಟ ಉದಯನಿಧಿ ಸ್ಟಾಲಿನ್‌ಗೆ ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿತ್ತು. ಆದರೆ ಪಾಠ ಕಲಿಯದ ಉದಯನಿಧಿ ಸ್ಟಾಲಿನ್ ಮತ್ತೆ ಸನಾತನ ಧರ್ಮದ ವಿರುದ್ಧ ಗುಡುಗುತ್ತಿದ್ದಾರೆ. ಇಷ್ಟಾದರೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, ಮತ್ತೆ ಮತ್ತೆ ಹಲವರ ನಂಬಿಕೆಗೆ ಧಕ್ಕೆ ತರುತ್ತಿದ್ದಾರೆ. ಈ ಬಾರಿ ಮತ್ತೆ ಸನಾತನ ಧರ್ಮ ವಿಚಾರ ಎತ್ತಿಕೊಂಡು ದ್ವೇಷದ ಭಾಷಣ ಮಾಡಿದ್ದಾರೆ.

Tap to resize

Latest Videos

Sanatan Dharma: ಉದಯನಿಧಿ ಮಾತ್ರವಲ್ಲ, ಅವರಪ್ಪ ಬಂದ್ರೂ ಆಗಲ್ಲ: ಅವರಜ್ಜನ ಕೈಯಲ್ಲೂ ಆಗಿಲ್ಲವೆಂದ ಈಶ್ವರಪ್ಪ

ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ಅಂಬೇಡ್ಕರ್, ಪೆರಿಯಾರ್, ತಿರುಮಾವಲಾವನ್ ಹೇಳಿರುವುದನ್ನೇ ನಾನು ಹೇಳಿದ್ದೇನೆ. ಸನಾತನ ಧರ್ಮವನ್ನು ನಾನು ವಿರೋಧಿಸುತ್ತಲೇ ಇರುತ್ತೇನೆ. ಯಾವುದೇ ಕಾನೂನು ಹೋರಾಟಕ್ಕೂ ಸಿದ್ದ. ಆದರೆ ನನ್ನ ಹೇಳಿಕೆಯನ್ನು ಬದಲಿಸುವುದಿಲ್ಲ ಎಂದಿದ್ದಾರೆ. ಈ ಹೇಳಿಕೆಯಿಂದ ಎದುರಾಗುವ ಯಾವುದೇ ಸವಾಲು, ಕಾನೂನು ಹೋರಾಟಕ್ಕೂ ನಾನು ಸಿದ್ಧ ಎಂದು ಉದಯನಿಧಿ ಸ್ಟಾಲಿನ್ ಸವಾಲು ಹಾಕಿದ್ದಾರೆ.

ಸನಾತ ಧರ್ಮವನ್ನು ನಾವು ಕೇವಲ ವಿರೋಧ ಮಾಡಿದರೆ ಸಾಲದು. ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಸೊಳ್ಳೆಗಳು, ಡೆಂಘಿ ಜ್ವರ, ಮಲೇರಿಯಾ, ಕೊರೋನಾ ಇವುಗಳನ್ನು ವಿರೋಧಿಸಿದರೆ ಸಾಲದು. ನಿರ್ಮೂಲನೆ ಮಾಡಬೇಕು. ಸನಾತನ ಧರ್ಮವೂ ಸಹ ಇದೇ ರೀತಿ. ಈ ಸಮ್ಮೇಳನದಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಹಾಗೆಯೇ ಸನಾತನ ಧರ್ಮ ನಿರ್ಮೂಲನೆ ಎಂಬ ಸಮ್ಮೇಳನ ಆಯೋಜನೆ ಮಾಡಿದವರಿಗೆ ಅಭಿನಂದನೆಗಳು’ ಎಂದು ಹೇಳಿದರು.

ಸನಾತನ ಧರ್ಮ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ, ವೈರಲ್‌ ಆದ ರಾಮ್‌ ಚರಣ್‌ ಟ್ವೀಟ್‌

ಇದರ ಬೆನ್ನಲ್ಲೇ ಸ್ಟಾಲಿನ್ ನೀಡಿರುವ ಹೇಳಿಕೆಯನ್ನು ಸಮರ್ಥಿಸಿದ ಡಿಎಂಕೆ ನಾಯಕ ಎ. ರಾಜಾ, ಇತ್ತೀಚಿನ ದಿನಗಳಲ್ಲಿ ಎಚ್‌ಐವಿ ಪೀಡಿತರನ್ನು ಅಸಹ್ಯ ಭಾವನೆಯಿಂದ ನೋಡಲಾಗುತ್ತದೆ. ಅದೇ ರೀತಿ ಸನಾತನ ಧರ್ಮವನ್ನು ಒಂದು ರೀತಿ ಎಚ್‌ಐವಿ ಹಾಗೂ ಕುಷ್ಠರೋಗದಂಥ ಸಾಮಾಜಿಕ ಅವಮಾನದಂತೆ ನೋಡಬೇಕು ಎಂದಿದ್ದರು.  
 

click me!