ರೈಲು ಪ್ರಯಾಣಿಕನಿಗೆ 30 ಸಾವಿರ ರೂ ಪಾವತಿಸಲು ಕೋರ್ಟ್ ಆದೇಶ, ಕಾರಣ ಶೌಚಾಲಯ!

By Chethan Kumar  |  First Published Nov 1, 2024, 3:37 PM IST

ರೈಲು ಪ್ರಯಾಣಿಕನಿಗೆ 30,000 ರೂಪಾಯಿ ಪಾವತಿಸಲು ಗ್ರಾಹಕರ ವೇದಿಕೆ ಕೋರ್ಟ್ ಆದೇಶ ನೀಡಿದೆ.  ಇದಕ್ಕೆ ಕಾರಣ ರೈಲಿನ ಶೌಚಾಲಯದ ಅನ್ನೋದು ವಿಶೇಷ.
 


ವಿಶಾಖಪಟ್ಟಣಂ(ನ.1)  ರೈಲು ಪ್ರಯಾಣಿಕನೊಬ್ಬನಿಗೆ ಇದೀಗ ಭಾರತೀಯ ರೈಲ್ವೇ ಇಲಾಖೆ 30,000 ರೂಪಾಯಿ ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಕಾರಣ ರೈಲಿನ ಶೌಚಾಲಯ. ಹೌದು. ಪ್ರಯಾಣಿಕನ ದೂರಿಗೆ ರೈಲು ಸಿಬ್ಬಂದಿಗಳು ಸ್ಪಂದಿಸಿಲ್ಲ, ಆಕ್ರೋಶಗೊಂಡ ಪ್ರಯಾಣಿಕರ ಗ್ರಾಹಕರ ವೇದಿಕೆ ಕಮಿಷನರ್ ಮೆಟ್ಟಿಲು ಹತ್ತಿ ಇದೀಗ ನ್ಯಾಯ ಪಡೆದುಕೊಂಡಿದ್ದಾನೆ. ಒಂದೆರೆಡು ಸಾವಿರ ರೂಪಾಯಿಗೆ ಟಿಕೆಟ್ ಬುಕ್ ಮಾಡಿ ಪ್ರಯಾಣಿಸಿದ ಪ್ರಯಾಣಿಕನಿಗೆ ಶೌಚಾಲಯ ಕಾರಣದಿಂದ ಇದೀಗ ಭಾರತೀಯ ರೈಲ್ವೇ ದುಬಾರಿ ಮೊತ್ತ ದಂಡದ ರೂಪದಲ್ಲಿ ಪಾವತಿಸಬೇಕಿದೆ.

ಏನಿದು ಘಟನೆ?
ವಿಶಾಖಪಟ್ಟಣಂ ನಿವಾಸಿ 55 ವರ್ಷದ ವಿ ಮೂರ್ತಿ ಕೆಲ ಅಗತ್ಯ ಕಾರ್ಯಕ್ರಮ ಹಾಗೂ ಕೆಲಸದ ನಿಮಿತ್ತ ತೆರಳಲು ಟ್ರೈನ್ ಟಿಕೆಟ್ ಬುಕ್ ಮಾಡಿದ್ದಾರೆ. ತಿರುಪತಿಯಿಂದ ದುವ್ವಾಡಕ್ಕೆ ತೆರಳಲು ತಿರುಮಲಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ. ವಿ ಮೂರ್ತಿ ಹಾಗೂ ಕುಟುಂಬ ದೂರ ಪ್ರಯಾಣದ ಕಾರಣ 3ಎಸಿ ಟಿಕೆಟ್ ಬುಕ್ ಮಾಡಲಾಗಿದೆ.  ಜೂನ್ 5, 2025ರಂದು ವಿ ಮೂರ್ತಿ ಹಾಗೂ ಕುಟುಂಬ ತಿರುಮಲಾ ಎಕ್ಸ್‌ಪ್ರೆಸ್ ರೈಲು ಹತ್ತಿದೆ.

Tap to resize

Latest Videos

ಈ ಸುಲಭ ವಿಧಾನದ ಮೂಲಕ ರೈಲಿನ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಿ ಹಣ, ಸಮಯ ಉಳಿಸಿ!

ರೈಲು ಹತ್ತಿ ಕುಳಿತ ಕೆಲ ಹೊತ್ತಲ್ಲಿ ಪ್ರಯಾಣ ಆರಂಭಗೊಂಡಿದೆ. ಬುಕ್ ಮಾಡಿದ್ದು ಎಸ್ ಕೋಚ್. ಆದರೆ ಎಸಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಸಂಪೂರ್ಣ ಕೋಚ್ ಕಸ ಕಡ್ಡಿಗಳಿಂದ ತುಂಬಿದ್ದ, ಕೆಟ್ಟ ವಾಸನೆ ಬರುತ್ತಿತ್ತು. ಇನ್ನು ರೈಲಿನ ಶೌಚಾಲಯದಲ್ಲಿ ನೀರೇ ಇರಲಿಲ್ಲ. ವಾಕರಿಕೆ ಬರುವಂತಿತ್ತು. ಪ್ರಯಾಣದ ನಡುವೆ ಟಿಕೆಟ್ ಕಲೆಕ್ಟರ್ ಸೇರಿದಂತೆ ಹಲವು ಸಿಬ್ಬಂದಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದ ವಿ ಮೂರ್ತಿ ಸೋತು ಹೋಗಿದ್ದರು.  ಇತ್ತ ತಾವು ಇಳಿಯಬೇಕಿದ್ದ ದುವ್ವಾಡ ರೈಲು ನಿಲ್ದಾಣಕ್ಕೆ ಮಾಹಿತಿ ನೀಡಿ ಸ್ಪಂದಿಸುವಂತೆ ಸೂಚಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.  ಬೇರೆ ವಿಧಿ ಇಲ್ಲದೆ ಸಹಿಸಿಕೊಂಡು ಪ್ರಯಾಣ ಮುಂದುವರಿಸಿದ ವಿ ಮೂರ್ತಿ ದುವ್ವಾಡ್ ರೈಲು ನಿಲ್ದಾಣದಲ್ಲಿ ಇಳಿದುಕೊಂಡಿದ್ದಾರೆ. 

ಕುಟುಂಬ ಸಮೇತ ರೈಲಿನಿಂದ ಇಳಿದ ವಿ ಮೂರ್ತಿ ನೇರವಾಗಿ ರೈಲು ನಿಲ್ದಾಣದಲ್ಲಿನ ಅಧಿಕಾರಿಗಳಿಗೆ ಭೇಟಿಯಾಗಿ ದೂರು ನೀಡಿದ್ದಾರೆ. ಈ ವೇಳೆ ರೈಲು ಅಧಿಕಾರಿಗಳು ಇದು ಸುಳ್ಳು ಆರೋಪ ಎಂದು ಉತ್ತರ ನೀಡಿದ್ದರು. ರೈಲು ಶುಚಿಯಾಗಿದೆ. ಸುಮ್ಮನೆ ಗಮನಸೆಳೆಯಲು ನೀಡಿದ ಆರೋಪ ಎಂದು ದೂರನ್ನುತಳ್ಳಿ ಹಾಕಿತ್ತು.

ಗ್ರಾಹಕರ ವೇದಿಕೆ ಕಮಿಷನರ್ ಮೆಟ್ಟಿಲೇರಿದ ಮೂರ್ತಿ ದೂರು ದಾಖಲಿಸಿದ್ದಾರೆ. ಇತ್ತ ಗ್ರಾಹಕರ ವೇದಿಕೆ ವಿಚಾರಣೆ ನಡೆಸಿದೆ. ಈ ವೇಳೆ ಶೌಚಾಲದಲ್ಲಿ ಕೆಲ ಸಮಸ್ಯೆಗಳಿರುವುದು ಸ್ಪಷ್ಟವಾಗಿದೆ. ಏರ್‌ಲಾಕ್ ಸಮಸ್ಯೆಯಿಂದ ಶೌಚಾಲಯದಲ್ಲಿ ಸಮಸ್ಯೆ ಇದ್ದದ್ದು ನಿಜ ಅನ್ನೋದು ವಿಚಾರಣೆಯಲ್ಲಿ ಸಾಬೀತಾಗಿತ್ತು. ಪ್ರಯಾಣಿಕನಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಇದಕ್ಕಾಗಿ ಆತ ಪಾವತಿಸುತ್ತಾನೆ. ಈ ಎಲ್ಲಾ ಶುಲ್ಕಗಳನ್ನು ಟಿಕೆಟ್‌ನಲ್ಲಿ ಸೇರಿಸಲಾಗಿದೆ. ಹೀಗಿರುವಾಗ ಪ್ರಯಾಣಿಕನಿಗೆ ಅತ್ಯುತ್ತಮ ಸೇವೆ ನೀಡಬೇಕಾಗಿರುವುದು ರೈಲ್ವೇ ಇಲಾಖೆಯ ಹೊಣೆಗಾರಿಕೆಯಾಗಿದೆ. ಇಲ್ಲಿ ಶೌಚಾಲಯದಲ್ಲಿ ದೋಷವಿರುವುದು ಸಾಬೀತಾಗಿದೆ. ಹೀಗಾಗಿ ದಂಡ ಅನಿವಾರ್ಯ ಆಗಿದೆ ಎಂದು ಕಮಿಷನರ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ 25,000 ರೂಪಾಯಿ ದಂಡದ ರೂಪದಲ್ಲಿ ವಿ ಮೂರ್ತಿಗೆ ಪಾತಿಸಲು ಕಮಿಷನರ್ ಆದೇಶ ನೀಡಿದೆ. ಇದರ ಜೊತೆಗೆ 5,000 ರೂಪಾಯಿ ಕಾನೂನು ಹೋರಾಟ ಮಾಡಿದ ಖರ್ಚು ವೆಚ್ಚಕ್ಕಾಗಿ ಮೂರ್ತಿಗೆ ರೈಲ್ವೇ ಇಲಾಖೆ ಪಾವತಿಸಬೇಕು ಎಂದಿದೆ. ಒಟ್ಟು 30,000 ರೂಪಾಯಿ ಮೊತ್ತ ಪಾವತಿಸಲು ಭಾರತೀಯ ರೈಲ್ವೇ ಇಲಾಖೆಗೆ ಗ್ರಾಹಕರ ವೇದಿಕೆ ಕಮಿಷನರ್ ಆದೇಶಿಸಿದೆ.

ವರ್ಷದ 15 ದಿನ ಮಾತ್ರ ಸಂಚರಿಸುತ್ತೆ ಭಾರತದ ಈ ರೈಲು, 23 ದೇಶದಿಂದ ಆಗಮಿಸುತ್ತಾರೆ ಪ್ರಯಾಣಿಕರು!

click me!