ಹಲವು ರಾಜ್ಯಗಳಲ್ಲಿ ಭಾರಿ ಸೆಖೆ ಬಿಸಿಗಾಳಿ: ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ

By Anusha Kb  |  First Published Apr 6, 2024, 8:39 AM IST

ಸೆಕೆಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆಯ ದಿನ ಅತೀಯಾದ ಸೆಖೆಯಿಂದ ಕಂಗಾಲಾದ ದೇಶದ ಪ್ರಮುಖ ನಗರಗಳು ಯಾವುದು ಎಂಬ ಡಿಟೇಲ್ ಇಲ್ಲಿದೆ. ಆಂಧ್ರಪ್ರದೇಶದ ನಂದ್ಯಾಲ ನಿನ್ನೆ ದೇಶದಲ್ಲೇ ಅತೀ ಹೆಚ್ಚು ಉಷ್ಣಾಂಶದಿಂದ(ತಾಪಮಾನ) ಕೂಡಿದ ನಗರವಾಗಿತ್ತು. 


ಬೆಂಗಳೂರು: ಸೆಕೆಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆಯ ದಿನ ಅತೀಯಾದ ಸೆಖೆಯಿಂದ ಕಂಗಾಲಾದ ದೇಶದ ಪ್ರಮುಖ ನಗರಗಳು ಯಾವುದು ಎಂಬ ಡಿಟೇಲ್ ಇಲ್ಲಿದೆ. ಆಂಧ್ರಪ್ರದೇಶದ ನಂದ್ಯಾಲ ನಿನ್ನೆ ದೇಶದಲ್ಲೇ ಅತೀ ಹೆಚ್ಚು ಉಷ್ಣಾಂಶದಿಂದ(ತಾಪಮಾನ) ಕೂಡಿದ ನಗರವಾಗಿತ್ತು. ಇಲ್ಲಿ 43.7 ಡಿಗ್ರಿ ತಾಪಮಾನ ದಾಖಲಾಗಿತ್ತು. ಭಾರತೀಯ ಹವಾಮಾನ ಇಲಾಖೆ ಐಎಂಡಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ನಂದ್ಯಾಲದ ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಇದ್ದು, 43.5 ಡಿಗ್ರಿ ದಾಖಲಾಗಿದೆ. ಹಾಗೆಯೇ ಒಡಿಶಾದ ಭುವನೇಶ್ವರದಲ್ಲಿ 43. 5 ಡಿಗ್ರಿ ಇದೆ. ನಂತರದಲ್ಲಿ ರಾಜ್ಯದ ಕಲಬುರಗಿ ಜಿಲ್ಲೆ ಇದ್ದು, 43.3 ಡಿಗ್ರಿ ತಾಪಮಾನ ದಾಖಲಾಗಿದೆ. ಹಾಗೆಯೇ ಆಂಧ್ರದ ಅನಂತಪುರಂನಲ್ಲಿ 43.1 ಡಿಗ್ರಿ ಇದೆ. ಸೋಲಾಪುರದಲ್ಲಿ 43.1 ರೆಟಚಿಂತಲ 43, ಕಡಪಾ 42.8, ತಿರುಪತಿ 42.4, ಚಂದ್ರಾಪುರ 42.4 ತಾಪಮಾನ ದಾಖಲಾಗಿದೆ. 

ಹಾಗೆಯೇ ಒಡಿಶಾ, ಗಂಗೇಟಿಕ್ ಪಶ್ಚಿಮ ಬಂಗಾಳ, ಜಾರ್ಖಂಡ್, ವಿದರ್ಭ, ಕರ್ನಾಟಕದ  ಉತ್ತರ ಒಳನಾಡು, ಆಂಧ್ರಪ್ರದೇಶದ ಕರಾವಳಿ, ಯಾನಂ, ರಾಯಲಸೀಮಾ ಹಾಗೂ ತೆಲಂಗಾಣದಲ್ಲಿ ಇಂದು ಬಿಸಿ ಗಾಳಿ ತೀವ್ರವಾಗಿದೆ. ಈ ಮಧ್ಯೆ ಜಮ್ಮು ಕಾಶ್ಮೀರ, ಲಡಾಕ್, ಹಿಮಾಚಲ ಪ್ರದೇಶ,  ಉತ್ತರಾಖಂಡ್, ಅಸ್ಸಾಂ, ಮೇಘಾಲಯ, ನಾಗಲ್ಯಾಂಡ್,  ಮಣಿಪುರ, ಮಿಜೋರಾಂ, ತ್ರಿಪುರಾ, ಉಪ ಹಿಮಾಲಯ, ಪಶ್ಚಿಮ ಬಂಗಾಳ,  ಸಿಕ್ಕಿಂನಲ್ಲಿ ಮುಂದಿನ 7 ದಿನಗಳೊಳಗೆ ಮಳೆಯಾಗುವ ಸಾಧ್ಯತೆ ಇದೆ. 

Tap to resize

Latest Videos

2 ನೇ ದಿನವೂ 44.1 ಡಿಗ್ರಿ ಬಿಸಿಲು: ಹೈರಾಣಾದ ಕಲಬುರಗಿ ಮಂದಿ..!

ಇತ್ತ ಬೆಂಗಳೂರಿನ ನಿನ್ನೆಯ ತಾಪಮಾನ ದೆಹಲಿ ಹಾಗೂ ಮುಂಬೈನ ತಾಪಮಾನವನ್ನು ಮೀರಿಸುವಷ್ಟರ ಮಟ್ಟಿಗೆ ಹೆಚ್ಚಾಗಿದೆ.  ನೈಸರ್ಗಿಕ ಎಸಿ ಸಿಟಿಯಂತಿದ್ದ  ಬೆಂಗಳೂರಿನ ಹಗಲಿನ ತಾಪಮಾನ ಮುಂದಿನ ಕೆಲ ದಿನಗಳವರೆಗೆ 37 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದರಿಂದಾಗಿ ಇದು ಗಮನಾರ್ಹವಾಗಿ ಬೆಂಗಳೂರನ್ನು ಮುಂಬೈಗಿಂತ ಹೆಚ್ಚು ಬಿಸಿಯ ನಗರವಾಗಿಸಿದೆ. ಜೊತೆಗೆ ಈ ಮೂಲಕ ಇದು ನವದೆಹಲಿಯ ತಾಪಮಾನವನ್ನೂ ಕೂಡ ಮೀರಿಸಿದೆ.  ಕಳೆದ ದಿನ ಬೆಂಗಳೂರಿನ ತಾಪಮಾನ 37.2 ಡಿಗ್ರಿ ದಾಖಲಾಗಿತ್ತು.  10 ವರ್ಷಗಳ ಹಿಂದೆ ಒಮ್ಮೆ ಬೆಂಗಳೂರು ತಾಪಮಾನ ಈ ರೀತಿ ಏರಿಕೆ ಆಗಿತ್ತು.

ಬೆಂಗ್ಳೂರಲ್ಲಿ ನಿನ್ನೆ 37.2 ಡಿಗ್ರಿಗೆ ಜಿಗಿದ ಬಿಸಿಲು: ಮೂರು ವರ್ಷಗಳಲ್ಲೇ ದಾಖಲೆ..!

click me!