ಉಷ್ಣ ಮಾರುತಗಳ ದೇಶವನ್ನು ಆವರಿಸಿರುವ ಹೊತ್ತಿನಲ್ಲೇ, ಜೂನ್ ಮೊದಲ ವಾರದಿಂದ ಆರಂಭವಾಗಲಿರುವ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಇರುವ ಕುರಿತಾದ ಸುಳಿವುಗಳು ದೊರಕಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ನವದೆಹಲಿ (ಏ.06): ಉಷ್ಣ ಮಾರುತಗಳ ದೇಶವನ್ನು ಆವರಿಸಿರುವ ಹೊತ್ತಿನಲ್ಲೇ, ಜೂನ್ ಮೊದಲ ವಾರದಿಂದ ಆರಂಭವಾಗಲಿರುವ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಇರುವ ಕುರಿತಾದ ಸುಳಿವುಗಳು ದೊರಕಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ಮೂಲಕ ಪ್ರಸಕ್ತ ವರ್ಷದ ಮುಂಗಾರಿನ ಕುರಿತು ಮೊದಲ ಬಾರಿಗೆ ಶುಭ ಸುದ್ದಿ ನೀಡಿವೆ.
ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಭಾರತೀಯ ಹವಾಮಾನ ಸಂಸ್ಥೆಯ ಮುಖ್ಯಸ್ಥ ಮೃತ್ಯುಂಜಯ್ ಮಹಾಪಾತ್ರ, ‘ಮುಂಗಾರು ಮಾರುತಗಳ ಮೇಲೆ ಅಡ್ಡ ಪರಿಣಾಮ ಬೀರಬಹುದಾಗಿದ್ದ ಎಲ್ ನಿನೋದ ಪರಿಣಾಮಗಳು ದೂರವಾಗುತ್ತಿವೆ ಮತ್ತು ಯುರೇಶ್ಯಾ ಪ್ರದೇಶದಲ್ಲಿ ಹಿಮ ಆವರಿಸಿಕೊಳ್ಳುವ ಪ್ರಮಾಣವೂ ಇಳಿಕೆಯಾಗಿದೆ. ಇದು ಈ ಬಾರಿ ಸಾಮಾನ್ಯ ಮುಂಗಾರು ಮಳೆ ಸುರಿಯುವ ಮುನ್ಸೂಚನೆಗಳು’ ಎಂದು ಹೇಳಿದ್ದಾರೆ.
ಶತ್ರುಗಳಿಗೂ ಗೊತ್ತಾಗಿದೆ ಇದು ನವಭಾರತ: ಪ್ರಧಾನಿ ಮೋದಿ ಗುಡುಗು
ಪ್ರಸಕ್ತ ಇರುವ ಎಲ್ ನಿನೋದ ಪರಿಣಾಮಗಳು ಜೂನ್ ವೇಳೆಗೆ ತಟಸ್ಥವಾಗಲಿದೆ. ತಟಸ್ಥ ಪರಿಸ್ಥಿತಿ ಭಾರತದ ಮುಂಗಾರು ಮಾರುತಗಳಿಗೆ ಉತ್ತಮ. ಮತ್ತೊಂದೆಡೆ ಜುಲೈ-ಸೆಪ್ಟೆಂಬರ್‌ನಲ್ಲಿ ಲಾ ನಿನೋ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ಕೂಡಾ ಉತ್ತಮ ಮಳೆಗೆ ಪೂರಕವಾದದು ಎಂದು ಮಹಾಪಾತ್ರ ಹೇಳಿದ್ದಾರೆ. ಭಾರತದಲ್ಲಿ ದೀರ್ಘಕಾಲೀನ ಸರಾಸರಿ ಅನ್ವಯ ಮುಂಗಾರು ಮಳೆಯ ಪ್ರಮಾಣ ವಾರ್ಷಿಕ 868.6 ಮಿ.ಮೀನಷ್ಟಿದೆ. ಆದರೆ 2023ರಲ್ಲಿ 820 ಮಿ.ಮೀನಷ್ಟು ಮಾತ್ರವೇ ಮಳೆ ಸುರಿದಿತ್ತು.
ಮುಂಗಾರು ಮಳೆ ಉತ್ತಮವಾಗಲಿ: ಮುಂದಿನ ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ಪ್ರತಿಯೊಬ್ಬರೂ ಸುಖ, ಸಮೃದ್ಧಿಯಿಂದ ಜೀವನ ನಡೆಸಲಿ ಎಂದು ತಾಯಿ ವಾಗ್ದೇವಿಯಲ್ಲಿ ಪ್ರಾರ್ಥಿಸಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುಕ್ಷೇತ್ರ ದ್ಯಾಬೇರಿಯ ತಾಯಿ ವಾಗ್ದೇವಿ ಸನ್ನಿಧಿಯಲ್ಲಿ ನಡೆದ ನೂತನ ದೇವಾಲಯ ಕಟ್ಟಡ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ತಾಯಿ ವಾಗ್ದೇವಿಯ ದ್ಯಾಬೇರಿ ಭಕ್ತಿಭಾವದ ಪವಿತ್ರ ಕ್ಷೇತ್ರವಾಗಿದೆ. ವಾಗ್ದೇವಿ ಎಲ್ಲರಿಗೂ ಒಳಿತು ಮಾಡಲಿ.
ಈ ಬಾರಿ ಎರಡು ಶಕ್ತಿಗಳ ನಡುವೆ ಚುನಾವಣೆ: ಗೆದ್ದ ಬಳಿಕ ಪಿಎಂ ಆಯ್ಕೆ ಎಂದ ರಾಹುಲ್ ಗಾಂಧಿ
ಮುಂದಿನ ಮುಂಗಾರು ಮಳೆ ಉತ್ತಮವಾಗಿ, ಒಳ್ಳೆಯ ಬೆಳೆ ಬರಲಿ ಎಲ್ಲರೂ ಖುಷಿಯಿಂದ ಇರುವಂತೆ ವಾಗ್ದೇವಿ ಕರುಣಿಸಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವೆ ಎಂದರು. ಶ್ರೀ ವಾಗ್ದೇವಿ ಸೇವಾ ಸಮಿತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ಕೆರೆಗಳಿಗೆ ನೀರು ತುಂಬಿಸೋ ಯೋಜನೆಯಲ್ಲಿ ನೀರಿನಿಂದ ಭರ್ತಿಯಾಗಿದ್ದ ದ್ಯಾಬೇರಿ ಕೆರೆಗೆ ಬಾಗಿನ ಅರ್ಪಿಸಿದರು. ಬಳಿಕ ಶ್ರೀ ವಾಗ್ದೇವಿ ದೇವಸ್ಥಾನಕ್ಕೆ ತೆರಳಿದರು.