ರಾಮ ನಾಮ ಸ್ಮರಿಸುತ್ತಿದ್ದಂತೆ ಮಹಿಳೆಯ ಮಡಿಲಲ್ಲಿ ಮೈಮರೆತ ಮಾರುತಿ: ವೀಡಿಯೋ ವೈರಲ್‌

By Anusha Kb  |  First Published Oct 8, 2024, 2:43 PM IST

ರಾಮನಾಮ ಸ್ಮರಿಸುತ್ತಿದ್ದ ಮಹಿಳೆಯೊಬ್ಬರ ಹೆಗಲೇರಿದ ಕೋತಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿದ್ದು ಬದ್ರಿನಾಥದಲ್ಲಿರುವ ಹೋಟೆಲ್‌ವೊಂದರಲ್ಲಿ. 


ರಾಮನಾಮಕ್ಕೂ ರಾಮಭಕ್ತ ಆಂಜನೇಯನಿಗೂ ಇರುವ ಅವಿನಾಭಾವ ಸಂಬಂಧ ಹಿಂದೂ ಪುರಾಣವನ್ನು  ಓದಿದ ಬಹುತೇಕರಿಗೆ ತಿಳಿದಿರುವಂತದ್ದೆ. ರಾಮನ ಬಿಟ್ಟು ಹನುಮನಿಲ್ಲ, ಹನುಮನ ಬಿಟ್ಟು ರಾಮನಿಲ್ಲ, ಆದರೆ ಹನುಮನ ವಂಶಜರೆಂದೇ ನಂಬುವ ವಾನರರು ಕೂಡ ಅನೇಕ ಬಾರಿ ತಮ್ಮ ರಾಮಭಕ್ತಿ ಮೆರೆದ ಅನೇಕ ವೀಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು. ಅದೇ ರೀತಿ ಈಗ ಇಲ್ಲೊಂದು ವೀಡಿಯೋ ವೈರಲ್ ಆಗಿದೆ. ರಾಮನಾಮ ಸ್ಮರಿಸುತ್ತಿದ್ದ ಮಹಿಳೆನ್ನು ನೋಡುತ್ತಿದ್ದಂತೆ ಕೋತಿಯೊಂದು ಆಕೆಯ ಹೆಗಲೇರಿ ಮಗುವಿನಂತೆ ಪವಡಿಸಿದೆ. ಈ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಹಿಂದೂಗಳ ಆರಾಧ್ಯ ದೈವ ರಾಮನಿಗೂ ಕೋತಿಗಳಿಗೂ ಇರುವ ಅವಿನಾಭಾವ ಸಂಬಂಧವನ್ನು ಮತ್ತೆ ನೆನಪು ಮಾಡುತ್ತಿದೆ.

ರಾಮಾಯಣದಲ್ಲಿ ರಾವಣ ಸೀತಾಪಹರಣದ ಮಾಡಿದ ನಂತರ ಕೋತಿಗಳ ಸಹಾಯದಿಂದ ಶ್ರೀರಾಮನಿಗೆ ಲಂಕೆಗೆ ತೆರಳಲು ಹನುಮ ಸೇರಿದಂತೆ ಇಡೀ ವಾನರ ಸೈನ್ಯವೇ ಸಹಾಯ ಮಾಡುತ್ತದೆ. ಶ್ರೀಲಂಕೆ ಭಾರತದ ನಡುವಿನ ಸಮುದ್ರ ಮಾರ್ಗ ರಾಮಸೇತುವಿಗೆ ಸೇತುವೆ ಕಟ್ಟುತ್ತವೆ. ಈ ರಾಮಸೇತು ಈಗಲೂ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಿರುವಾಗ ಈಗ ರಾಮನಾಮ ಜಪಿಸುವ ಮಹಿಳೆ ಹಾಗೂ ಕೋತಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದೆ. 

Tap to resize

Latest Videos

undefined

ಭಜರಂಗಿ ರೂಪದಲ್ಲಿ ಬಂದು 6 ವರ್ಷದ ಬಾಲಕಿ ಮೇಲೆ ನಡೆಯುತ್ತಿದ್ದ ಅತ್ಯಾಚಾರ ತಪ್ಪಿಸಿದ ಕೋತಿಗಳು!

yehlatestnewshai ಎಂಬ ಇನ್ಸ್ಟಾಗ್ರಾಂ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ಪೋಸ್ಟ್‌ನಲ್ಲಿರು ಮಾಹಿತಿ ಪ್ರಕಾರ, ಕೇರಳದ ಮಹಿಳೆಯೊಬ್ಬರು ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ತೀರ್ಥಕ್ಷೇತ್ರ ಬದ್ರಿನಾಥಕ್ಕೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಈ ಕುಟುಂಬ ಆಹಾರ ಸೇವಿಸುವುದಕ್ಕಾಗಿ ಅಲ್ಲಿನ ಹೋಟೇಲೊಂದಕ್ಕೆ ಭೇಟಿ ನೀಡುತ್ತಾರೆ. ಇವರನ್ನೇ ಕೋತಿಯೊಂದು ಹಿಂಬಾಲಿಸುತ್ತಾ ಅದೂ ಹೊಟೇಲ್‌ಗೆ ಬರುತ್ತದೆ. ಈ ವೇಳೆ ಮಹಿಳೆ ದೇವರ ನಾಮಸ್ಮರಣೆ ಭಜನೆ ಹಾಡಲು ಶುರು ಮಾಡುತ್ತಾರೆ. ಅದರಲ್ಲೂ  ಮಹಿಳೆ ಶ್ರೀರಾಮನ ಸ್ಮರಣೆ ಮಾಡಲು ಶುರು ಮಾಡುತ್ತಿದ್ದಂತೆ ಈ ಮೇಜಿನ ಮೇಲಿದ್ದ ಈ ಕೋತಿ ಸೀದಾ ಹೋಗಿ ಮಹಿಳೆಯ ಹೆಗಲೇರಿ ಶ್ರೀರಾಮನ ಹನುಮ ತಬ್ಬಿಕೊಳ್ಳುವಂತೆ ಮಹಿಳೆಯಯ ಜೊತೆ ಭಾವನಾತ್ಮಕವಾಗಿ ವರ್ತಿಸುತ್ತದೆ. 

ಈ ವೀಡಿಯೋ ಈಗ ವೈರಲ್ ಆಗಿದ್ದು, ವೀಡಿಯೋದಲ್ಲಿ ಕಾಣುವಂತೆ ಮಹಿಳೆ ಹಾಗೂ ಅವರ ಜೊತೆಗಿರುವವರು ರಾಮ ರಾಮ ರಾಮ ರಾಮ ರಾಮ ರಾಮ ರಾಮ ಪಹೀ ಮಾಮ್ ಎಂಬ ಭಕ್ತಗೀತೆಯನ್ನು ಹಾಡುತ್ತಾರೆ. ಈ ಹಾಡಿಗೆ ಮಹಿಳೆಯೂ ದನಿಗೂಡಿಸಿದ್ದು, ಮೇಜಿನ ಮೇಲೆ ಕುಳಿತು ಮುಖವನ್ನೇ ನೋಡುತ್ತಿದ್ದ ಕೋತಿ ಸೀದಾ ಬಂದು ಮಹಿಳೆ ಹೆಗಲಿನಲ್ಲಿ ತಲೆ ಇಡುತ್ತದೆ. ಜೊತೆಗೆ ಮಹಿಳೆ ಹಾಗೂ ಜೊತೆಗಿದ್ದವರು ಶ್ರೀರಾಮ ಜಯರಾಮ ಹಾಡಲು ಶುರು ಮಾಡಿದಾಗ ಅದು ಜೊತೆಗೆ ಈ ಹಾಡಿಗೆ ತಲೆಯಾಡಿಸುತ್ತದೆ. ಈ ವೀಡಿಯೋ ನೋಡಿದ ಅನೇಕರು ಭಾವಪರವಶರಾಗಿದ್ದಾರೆ. ಬಹುಶಃ ಈ ಕೋತಿ ಹಿಂದಿನ ಜನ್ಮದಲ್ಲಿ ವಾನರ ಸೇನೆ ಆಗಿತ್ತೇನು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಈ ಕೋತಿಗೆ ತ್ರೇತಾಯುಗದ ನೆನಪು ಬಂದಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ರಾಮಭಕ್ತರ ಮೊಗದಲ್ಲಿ ನಗು ಮೂಡಿಸಿದೆ. 

ಮನುಷ್ಯ, ಮಂಗ ಮಾತ್ರವಲ್ಲ, ಈ ಪ್ರಾಣಿಗಳೂ ಬಾಹ್ಯಾಕಾಶಕ್ಕೆ ಪಯಣಿಸಿವೆ!

 

click me!