ಉದಯ್‌ಪುರ ಪ್ಯಾಲೇಸ್‌ಗೆ ರಾಷ್ಟ್ರಪತಿ ಮುರ್ಮು ಭೇಟಿಗೆ ರಾಜಮನೆತನದ ವಿರೋಧ

By Anusha KbFirst Published Oct 8, 2024, 1:24 PM IST
Highlights

ಭಾರತದ ರಾಷ್ಟ್ರಪತಿಯವರು ರಾಜಸ್ಥಾನದ ಉದಯ್‌ಪುರದಲ್ಲಿರುವ ರಾಜಮನೆತನದ ಅರಮನೆಗೆ ಭೇಟಿ ನೀಡಿದ್ದಕ್ಕೆ ಮೇವಾರ್‌ ರಾಜಮನೆತನದ ಕೆಲ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. 

ಭಾರತದ ರಾಷ್ಟ್ರಪತಿಯವರು ರಾಜಸ್ಥಾನದ ಉದಯ್‌ಪುರದಲ್ಲಿರುವ ರಾಜಮನೆತನದ ಅರಮನೆಗೆ ಭೇಟಿ  ನೀಡಿದ್ದಕ್ಕೆ ಮೇವಾರ್‌ ರಾಜಮನೆತನದ ಕೆಲ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. 

ಮೇವಾರ್ ರಾಜಮನೆತನದ ಈ ಹಿಂದಿನ ಸದಸ್ಯರಾಗಿರುವ ಹಾಗೂ ಪ್ರಸ್ತುತ ಬಿಜೆಪಿ ಸಂಸದೆಯಾಗಿರುವ ಮಹೀಮಾ ಕುಮಾರಿ ಮೇವಾರ್ ಹಾಗೂ ಆಕೆಯ ಪತಿ ಶಾಸಕ ವಿಶ್ವರಾಜ್ ಸಿಂಗ್ ಮೇವಾರ್‌  ರಾಷ್ಟ್ರಪತಿಯವರ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೇವಾರ್ ರಾಜಮನೆತನದ ಉದಯ್‌ಪುರ ಅರಮನೆಯ ಆಸ್ತಿ ವಿವಾದವೂ ಕೋರ್ಟ್‌ನಲ್ಲಿರುವುದರಿಂದ ರಾಷ್ಟ್ರಪತಿ ಮುರ್ಮು ಅವರು ಅರಮನೆಗೆ ಭೇಟಿ ನೀಡಬಾರದಾಗಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Latest Videos

ಅಕ್ಟೋಬರ್‌ 3 ರಂದು ರಾಷ್ಟ್ರಪತಿ ದೌಪ್ರದಿ ಮುರ್ಮು ಅವರು ಉದಯ್‌ಪುರದ ಮೋಹನ್‌ಲಾಲ್ ಸುಖಡಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ 32ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.  ಈ ಘಟಿಕೋತ್ಸವಕ್ಕಾಗಿ ಉದಯ್‌ಪುರಕ್ಕೆ ಬಂದಿದ್ದ ರಾಷ್ಟ್ರಪತಿ ಮುರ್ಮು ಅವರು ನಗರದ ಪ್ರೇಕ್ಷಣಿಯ ಸ್ಥಳ ಎನಿಸಿರುವ ಉದಯ್‌ಪುರ ಪ್ಯಾಲೇಸ್‌ಗೆ ವೈಯಕ್ತಿಕವಾಗಿ ಭೇಟಿ ನೀಡಿದ್ದರು. ಈ ವೇಳೆ ರಾಷ್ಟ್ರಪತಿಯವರಿಗೆ ರಾಜಸ್ಥಾನದ ರಾಜ್ಯಪಾಲರಾದ ಹರಿಬಾಬು ಬಗ್ಡೆ ಹಾಗೂ ರಾಜಸ್ಥಾನದ ಉಪ ಮುಖ್ಯಮಂತ್ರಿ ಪ್ರೇಮ್ ಚಂದ್ ಬಿರ್ವಾ ಅವರು ಸಾಥ್ ನೀಡಿದ್ದರು. ಇವರಿಗೆ ಮೇವಾರ್‌ ರಾಜಮನೆತನದ ಲಕ್ಷ್ಯರಾಜ್ ಸಿಂಗ್ ಮೇವರ್ ಅವರು ಹಾಗೂ ಅವರ ಕುಟುಂಬದವರು ಆತಿಥ್ಯ ನೀಡಿದ್ದರು.  

ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ಮುರ್ಮು!

ಆದರೆ ಇದಕ್ಕೆ ಬಿಜೆಪಿಯ ರಾಜಸಮಂದ್‌ ಕ್ಷೇತ್ರದ ಸಂಸದೆ ಮಹಿಮಾ ಕುಮಾರಿ ಮೇವರ್ ಹಾಗೂ ಆಕೆಯ ಪತಿ ನಾಥ್‌ದ್ವಾರದ ಬಿಜೆಪಿ ಶಾಸಕ ವಿಶ್ವರಾಜ್ ಸಿಂಗ್ ಮೇವಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಕುಟುಂಬದ ಮುಖ್ಯಸ್ಥರಾಗಿರುವ ವಿಶ್ವರಾಜ್ ಅವರ ತಂದೆ ಮಹೇಂದ್ರ ಸಿಂಗ್ ಮೇವಾರ್ ಅವರನ್ನು ಭೇಟಿ ಮಾಡಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ವಿಶ್ವರಾಜ್ ಅವರ ತಂದೆ ಮಹೇಂದ್ರ ಸಿಂಗ್ ಮೇವಾರ್ ಅವರು ಅರವಿಂದ್ ಮೇವಾರ್ ಅವರ ಹಿರಿಯ ಸಹೋದರರಾಗಿದ್ದಾರೆ. ಈ ಅರವಿಂದ್ ಮೇವಾರ್ ಅವರು ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅತಿಥ್ಯ ನೀಡಿದ ಲಕ್ಷ್ಯರಾಜ್ ಅವರ ತಂದೆಯಾಗಿದ್ದಾರೆ. ಈ ರಾಜ ಕುಟುಂಬದವರು ಮಹಾರಾಣ ಪ್ರತಾಪ ಅವರ ವಂಶಜರಾಗಿದ್ದಾರೆ. 

ನಗರದ ಈ ಪ್ಯಾಲೇಸ್‌ ನಮ್ಮ ಕುಟುಂಬದ ಆಸ್ತಿಯಾಗಿದ್ದು ಇದಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ಇದೆ. ಇದರ ಜೊತೆಗೆ ಈ ಆಸ್ತಿಯ ಕೆಲ ಭಾಗದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಅರ್ಜಿ ಬಾಕಿ ಇದೆ. ಅಲ್ಲದೇ ಈ ಆಸ್ತಿಯೂ ಹಿಂದೂ ಅವಿಭಾಜಿತ ಕುಟುಂಬ ಎಂದು ತೆರಿಗೆ ಇಲಾಖೆ ಹಾಗೂ ಜಿಲ್ಲಾ ನ್ಯಾಯಾಲಯದಿಂದ ಘೋಷಿತವಾಗಿದ್ದು, ಹೈಕೋರ್ಟ್‌ನಲ್ಲೂ ಅರ್ಜಿಯೊಂದು ವಿಚಾರಣೆಗೆ ಬಾಕಿ ಇದೆ. ಹೀಗಾಗಿ ನಾವು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಈ ವಿಚಾರವನ್ನು ಅವರಿಗೆ ತಿಳಿಸಿದ್ದೇವೆ. ಇಂತಹ ಆಸ್ತಿಗೆ ಭೇಟಿ ನೀಡುವ ಮೂಲಕ ರಾಷ್ಟ್ರಪತಿ ಅವರು ತಮ್ಮ ಹುದ್ದೆಗಿರುವ ಘನತೆಯ ಜೊತೆ ಧಕ್ಕೆ ತಂದಿದ್ದಾರೆ. ಅದು ಕುಟುಂಬದ ಯಜಮಾನನಿಗೆ ಯಾವುದೇ ಮಾಹಿತಿ ನೀಡದೇ ಎಂದು ಮಹೇಂದ್ರ ಸಿಂಗ್ ಅವರು ಆರೋಪಿಸಿದ್ದಾರೆ. 

Mimicry Row: 'ನಾನು ಕೂಡ 20 ವರ್ಷ ಇಂಥ ಅವಮಾನ ಎದುರಿಸಿದ್ದೆ..' ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಟೀಕೆ

click me!