800 ರೂ ಬೆಲೆಯ ಈ ವೊಡ್ಕಾ ಭಾರತದಲ್ಲಿ ನಂ.1, ಆದರೆ ಹೆಚ್ಚನವರಿಗೆ ಗೊತ್ತೇ ಇಲ್ಲ!

By Chethan Kumar  |  First Published Oct 8, 2024, 12:57 PM IST

ಭಾರತದಲ್ಲಿ ಅತೀ ಕಡಿಮೆ ಬೆಲೆಯಿಂದ ಲಕ್ಷ ಲಕ್ಷ ರೂಪಾಯಿ ಬೆಲೆಯ ದುಬಾರಿ ಮದ್ಯಗಳು ಲಭ್ಯವಿದೆ. ವೊಡ್ಕಾ ಬ್ರ್ಯಾಂಡ್ ಪೈಕಿ ದೇಶಿಯ, ವಿದೇಶಿ ಸೇರಿದಂತೆ ಹಲವು ಬ್ರ್ಯಾಂಡ್ ಲಭ್ಯವಿದೆ. ಇದರ ನಡುವೆ ಭಾರತದಲ್ಲಿ ನಂ.1 ವೊಡ್ಕಾ ಬ್ರ್ಯಾಂಡ್ ಯಾವುದು? 


ನವದೆಹಲಿ(ಅ.08) ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಹಾಗಂತ ಮದ್ಯ ಮಾರಾಟದಲ್ಲಿ ಕುಸಿತವೇನು ಆಗಿಲ್ಲ. ಹೊಸ ಹೊಸ ಬ್ರ್ಯಾಂಡ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಹಲವು ಬ್ರ್ಯಾಂಡ್‌ಗಳು ಮಾರಾಟದಲ್ಲಿ ದಾಖಲೆ ಬರೆದು ನಂಬರ್ 1 ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವೊಡ್ಕಾ ಬಹುತೇಕರ ನೆಚ್ಚಿನ ಡ್ರಿಂಕ್. ಇನ್ನು ಕಾಕ್‌ಟೇಲ್ ಸೇರಿದಂತೆ ಹಲವು ಜನಪ್ರಿಯ ಪಾನಿಯಗಳಲ್ಲೂ ವೊಡ್ಕಾ ಬಳಕೆ ಪ್ರಮಾಣ ಹೆಚ್ಚು. ಆದರೆ ಭಾರತದಲ್ಲಿ ವೊಡ್ಕಾಗೆ ಇತರ ಮದ್ಯಕ್ಕೆ ಸಿಕ್ಕಿದ ಪ್ರಾಶಸ್ತ್ಯ ಸಿಕ್ಕಿಲ್ಲ. ಹಾಗಂತ ಮಾರಾಟದಲ್ಲೇನು ಹಿಂದೆ ಉಳಿದಿಲ್ಲ. ಭಾರತದಲ್ಲಿ ಅತೀ ಹೆಚ್ಚು ಮಾರಾಟದ ಮೂಲಕ ನಂಬರ್ 1 ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ವೊಡ್ಕಾ ಬ್ರ್ಯಾಂಡ್ ಮ್ಯಾಜಿಕ್ ಮೊಮೆಂಟ್ಸ್ ಅನ್ನೋದು ಹಲವರಿಗೆ ಗೊತ್ತಿಲ್ಲ.

ಸ್ಮರ್ನಾಫ್, ರೊಮನೊವ್, ಬೆಲ್ವೆಡೆರ್ ಸೇರಿದಂತೆ ಹಲವು ವೊಡ್ಕಾ ಹೆಸರುಗಳು ಜನಪ್ರಿಯವಾಗಿದೆ. ಆದರೆ ಅತೀ ಹೆಚ್ಚು ಮಾರಾಟ ಕಾಣುತ್ತಿರುವ ಮ್ಯಾಜಿಕ್ ಮೊಮೆಂಟ್ಸ್ ಅಷ್ಟಾಗಿ ತಿಳಿದಿಲ್ಲ. ಅಂಕಿ ಅಂಶಗಳ ಪ್ರಕಾರ 2024ರಲ್ಲಿ ಇದುವರೆಗೆ 6 ಮಿಲಿಯನ್ ಕೇಸಸ್ ಮ್ಯಾಜಿಕ್ ಮೊಮೆಂಟ್ಸ್ ವೋಡ್ಕಾ ಬಾಟಲಿ ಮಾರಾಟಗೊಂಡಿದೆ. ಈ ವರ್ಷದ ಆದಾಯ ಬರೋಬ್ಬರಿ 1,000 ಕೋಟಿ ರೂಪಾಯಿ. 

Tap to resize

Latest Videos

undefined

ಸಂಚಲನ ಸೃಷ್ಟಿಸಿದ ನಂಜನಗೂಡಿನ ಹುಲಿ, ಇದು ಭಾರತದ ಮೊದಲ ಬೆಲ್ಲದಿಂದ ತಯಾರಿಸಿದ ರಮ್!

750ಎಂಎಲ್ ಮ್ಯಾಜಿಕ್ ಮೊಮೆಂಟ್ಸ್ ವೊಡ್ಕಾ ಬೆಲೆ ಕೇವಲ 800 ರೂಪಾಯಿ ಮಾತ್ರ. ಇತರ ವೊಡ್ಕಾಗಳಿಗೆ ಹೋಲಿಸಿದರೆ ಇದರ ಬೆಲೆ ಕಡಿಮೆ. ಗ್ರೀನ್ ಆ್ಯಪಲ್, ಆರೆಂಜ್, ಚಾಕೋಲೇಟ್, ಲೆಮನ್‌ಗ್ರಾಸ್, ಶುಂಠಿ, ರಸ್‌ಬೆರಿ, ವೆನಿಲ್ಲಾ, ಕ್ಯಾನ್‌ಪೆರಿ ಸೇರಿದಂತೆ ಹಲವು ಫ್ಲೇವರ್‌ಗಳಲ್ಲಿ ವೊಡ್ಕಾ ಲಭ್ಯವಿದೆ. ಮ್ಯಾಜಿಕ್ ಮೊಮೆಂಟ್ಸ್ ವೊಡ್ಕಾ 2006ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಳಿಕ ಸತತವಾಗಿ ಮಾರಾಟದಲ್ಲಿ ಗಣನೀಯ ಏರಿಕೆ ದಾಖಲಿಸುತ್ತಾ ಸಾಗಿದೆ. 2024ರ ವೇಳೆಗೆ ಈ ಬ್ರ್ಯಾಂಡ್ ಭಾರತದಲ್ಲಿ ಮ್ಯಾಜಿಕ್ ಮಾಡಿದೆ.

ವೊಡ್ಕಾ ಮದ್ಯದ ಕುರಿತು ಹರಿದಾಡುತ್ತಿರುವ ಹಲವು ಮಾತುಗಳು ಭಾರಿ ಜನಪ್ರಿಯ. ಆದರೆ ಇದಕ್ಕೆ ವೈಜ್ಞಾನಿಕ ಅಧ್ಯಯನಗಳ ಯಾವುದೇ ಸ್ಪಷ್ಟನೆ ಇಲ್ಲ. ಆದರೂ ವೊಡ್ಕಾ ಪ್ರಿಯರಲ್ಲಿ ಈ ಮಾತುಗಳು ಕೇಳಿಬರುತ್ತಲೇ ಇರುತ್ತದೆ. ಈ ಪೈಕಿ, ಇತರ ಮದ್ಯಗಳು ತೂಕ ಹೆಚ್ಚಿಸಿದರೆ, ವೊಡ್ಕಾ ಸೇವನೆಯಿಂದ ತೂಕ ಹೆಚ್ಚಾಗುವ ಆತಂಕವಿಲ್ಲ ಎಂದು ಹೇಳತ್ತಾರೆ. ಕಡಿಮೆ ಕ್ಯಾಲೋರಿ, ಕಾರ್ಬೋಹೈಡ್ರೇಟ್ ಅಂಶಗಳು ವೊಡ್ಕಾದಲ್ಲಿಲ್ಲ, ಶುಗರ್, ಫ್ಯಾಟಿ ಸೇರಿದಂತೆ ಯಾವುದೇ ಅಂಶಗಳು ವೊಡ್ಕಾದಲ್ಲಿಲ್ಲ. ಇದು ತೂಕ ವ್ಯತ್ಯಾಸವನ್ನು ತಡೆಯುತ್ತದೆ ಅನ್ನೋದು ವೊಡ್ಕಾ ಪ್ರೀಯರ ವಾದ. ಅದೇನೇ ಆದರೂ ಮದ್ಯ ಯಾವತ್ತೂ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಮರೆಯಬಾರದು.

ಪಾರ್ಟಿಯಿಂದ ಬೆಳಗ್ಗೆ ಹ್ಯಾಂಗೋವರ್ ಆಗ್ತಿದೆಯಾ? ಇಲ್ಲಿದೆ ಶೀಘ್ರ ಪರಿಹಾರದ ಪಾನೀಯ!
 

click me!