ಕೋವಿಡ್‌ನಿಂದ ಭಾರತೀಯರ ಅಯಸ್ಸು 2.6 ವರ್ಷ ಕಡಿತ ವರದಿಗೆ ಆರೋಗ್ಯ ಇಲಾಖೆ ಹೇಳಿದ್ದೇನು?

By Chethan Kumar  |  First Published Jul 20, 2024, 7:47 PM IST

ಕೊರೋನಾ ವಕ್ಕರಿಸಿದ ಬಳಿಕ ಭಾರತೀಯರ ಆಯಸ್ಸ 2.6 ವರ್ಷ ಕಡಿತಗೊಂಡಿದೆ ಎಂಬ ಅಧ್ಯಯನ ವರದಿ ಭಾರಿ ಕೋಲಾಹಲ ಸೃಷ್ಟಿಸಿದೆ. ಸಾಕಷ್ಟು ದಿಢೀರ್ ಸಾವು ಪ್ರಕರಣಗಳು ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ


ನವದೆಹಲಿ(ಜು.20) ಮಹಾಮಾರಿ ಕೊರೋನಾ ವೈರಸ್ ಭಾರತ ಹಾಗೂ ವಿಶ್ವಾದ್ಯಂತ ಸೃಷ್ಟಿಸಿದ ಅವಾಂತರಗಳು ಒಂದೆರೆಡಲ್ಲ. ಕೋಟಿ ಕೋಟಿ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾದಿಂದ ಹಲವು ಮಕ್ಕಳು ಅನಾಥರಾಗಿದ್ದಾರೆ. ಕೊರೋನಾ ವಕ್ಕರಿಸಿದ ಬಳಿಕವೂ ಇದರ ಭೀಕರ ಪರಿಣಾಮ ಆತಂಕ ಸೃಷ್ಟಿಸತ್ತಲೆ ಇದೆ. ಕೊರೋನಾ ಬಳಿಕ ದಿಢೀರ್ ಸಾವು ಪ್ರಕರಣಗಳು, ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ ಅನ್ನೋ ವಾದವೂ ಇದೆ. ಇದರ ನಡುವೆ ಅಕಾಡೆಮಿಕ್ ಜರ್ನಲ್ ಸೈನ್ಸ್ ಅಡ್ವಾನ್ಸ್ ನಡೆಸಿದ ಅಧ್ಯಯನ ವರದಿ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಕೊರೋನಾ ವಕ್ಕರಿಸಿದ ಬಳಿಕ ಭಾರತೀಯರ ಸರಾಸರಿ ಆಯಸ್ಸು 2.6 ವರ್ಷ ಕಡಿತಗೊಂಡಿದೆ ಎಂದು  ಈ ವರದಿ ಹೇಳುತ್ತಿದೆ. ಆದರೆ ಈ ವರದಿ ಕುರಿತು ಕೇಂದ್ರ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದೆ. ಈ ವರಧಿಗೆ ಯಾವುದೇ ವೈದ್ಯಕೀಯ ಹಾಗೂ ವೈಜ್ಞಾನಿಕ ಆಧಾರವಿಲ್ಲ ಎಂದು ಅಲ್ಲಗೆಳೆದಿದೆ.

ಕೊರೋನಾ ಹರಡುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದೆ. ಮಾನವನ ಆರೋಗ್ಯ ಕ್ಷೀಣಿಸಿದೆ ಎಂದು ಈ ವರದಿ ಹೇಳುತ್ತಿದೆ. ಪ್ರಮುಖವಾಗಿ ಈ ವರದಿ ಮನುಷ್ಯನ ಆಯಸ್ಸಿನ ಕುರಿತು ಬೆಳಕು ಚೆಲ್ಲಿದೆ. ಕೊರೋನಾ ಬಳಿಕ ಮನುಷ್ಯನ ಆಯಸ್ಸಿನಲ್ಲಿ 2.6 ವರ್ಷ ಕಡಿತಗೊಂಡಿದೆ. ಇದು ಕೆಲ ಸಮುದಾಯ, ಮಹಿಳೆ, ಪುರುಷರಿಗೆ ಹೋಲಿಸಿದೆ ವ್ಯತ್ಯಾಸಗಳಿವೆ ಎಂದಿದೆ. ಅಲ್ಪಸಂಖ್ಯಾತ ಹಾಗೂ ಬುಡಕಟ್ಟು ಸಮುದಾಯಕ್ಕೆ ಈ ಕೊರೋನಾ ವೈರಸ್ ಮತ್ತಷ್ಟು ಹಿನ್ನಡೆ ತಂದಿದೆ ಎಂದು ವರದಿ ಹೇಳುತ್ತಿದೆ.

Tap to resize

Latest Videos

ಅಚ್ಚಕುಟ್ಟಾದ 32 ಹಲ್ಲಿನೊಂದಿಗೆ ಹುಟ್ಟಿದ ಹೆಣ್ಣು ಮಗು, ಈಗಿನ ಮಕ್ಕಳು ತುಂಬಾ ಫಾಸ್ಟ್!

ಬುಡಕಟ್ಟು ಸಮುದಾಯ, ಮುಸ್ಲಿಮರು ಸೇರಿದಂತೆ ಇತೆರ ಕೆಲ ಸಮದಾಯಗಳ ಹೆಣ್ಣುಮಕ್ಕಳ ಆಯಸ್ಸು 3.1 ವರ್ಷ ಕಡಿತಗೊಂಡಿದ್ದರೆ, ಪುರುಷರ ಆಯಸ್ಸು 2.1ರಷ್ಟು ಕಡಿತಗೊಂಡಿದೆ. 14 ರಾಜ್ಯಗಳ ಮಾದರಿಗಳು, ಅಂಕಿ ಅಂಶಗಳನ್ನು ಆಧರಿಸಿ ಈ ಅಧ್ಯಯನ ವರದಿ ತಯಾರಿಸಲಾಗಿದೆ. ಕೊರೋನಾ ಬಳಿಕ ಮನುಷ್ಯನ ಸರಾಸರಿ ಆಯಸ್ಸಿನ ವರ್ಷ ಇಳಿಕೆಯಾಗಿದೆ. ಇದು ವೈರಸ್ ಪ್ರಭಾವ. ಮನುಷ್ಯ ಪ್ರತಿರೋಧ ಶಕ್ತಿ ಕಳೆದುಕೊಂಡಿದ್ದಾನೆ ಅಥವಾ ಕುಂದಿದೆ ಎಂದು ವರದಿ ಹೇಳುತ್ತಿದೆ.

ಈ ವರದಿಯನ್ನು ಕೇಂದ್ರ ಆರೋಗ್ಯ ಇಲಾಖೆ ಅಲ್ಲಗೆಳೆದಿದೆ. 14 ರಾಜ್ಯದ ಶೇಕಡಾ 23ರಷ್ಟು ಸ್ಯಾಂಪಲ್ ಪಡೆದು ಈ ವರದಿ ತಯಾರಿಸಲಾಗಿದೆ. ಈ ವರದಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಭಾರತದ ಜನಸಂಖ್ಯೆ, ಆರೋಗ್ಯ , ಕೊರೋನಾ ಪ್ರಕರಣ ಸೇರಿದಂತೆ ಹಲವು ಮಾಹಿತಿಗಳನ್ನು ಆಧರಿಸಿ ಈ ವರದಿ ತಯಾರಾಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. 

ಅಪರ್ಣಾ ಬೆನ್ನಲ್ಲೇ ಕ್ಯಾನ್ಸರ್‌ಗೆ ಬಲಿಯಾದ ಬಾಲಿವುಡ್ ನಿರ್ಮಾಪಕನ ಪುತ್ರಿ ತಿಶಾ!
 

click me!