ಅಂದು ಇಂಗ್ಲೀಷ್ ಮತಾಡಿ ನನ್ನಿಷ್ಟ ಈಗ ಕನ್ನಡ ಪ್ರೀತಿ; ಲಾವಣ್ಯ ದ್ವಂದ್ವ ನೀತಿ ಪ್ರಶ್ನಿಸಿದ ಪೂನವಾಲ!

By Chethan Kumar  |  First Published Jul 20, 2024, 3:54 PM IST

ನನಗೆ ಬೇಕಾದ ಭಾಷೆಯಲ್ಲಿ ಮಾತಾಡುತ್ತೇನೆ ಎಂದು ಇಂಗ್ಲೀಷ್ ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಜೈನ್, ನಾನು ಯಾವುದೇ ಭಾಷೆಯನ್ನೂ ಯಾರು ಮೇಲೆ ಹೇರಿಕೆ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದೀಗ ಕನ್ನಡ ಕುರಿತು ಮಾಡಿದ್ದಾರೆ. ಈ ರೀತಿ ದ್ವಂದ್ವ ನೀತಿ ಯಾಕೆ ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ ಪ್ರಶ್ನಿಸಿದ್ದಾರೆ.
 


ನವದೆಹಲಿ(ಜು.20) ಕರ್ನಾಟಕದಲ್ಲಿ ಇದೀಗ ಕನ್ನಡ ಹೋರಾಟಗಳು ಜೋರಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಕುರಿತು ಸರ್ಕಾರದ ದಿಢೀರ್ ಯೂ ಟರ್ನ್, ಕನ್ನಡ ಭಾಷೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಯಾಗುತ್ತಿದೆ. ಇದರ ನಡುವೆ ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಜೈನ್ ಕನ್ನಡ ಪರ ಟ್ವೀಟ್ ಮಾಡಿದ್ದಾರೆ. ಆದರೆ ಲಾವಣ್ಯ ಹಿಂದೆ ಮಾಡಿದ ಟ್ವೀಟ್‌ಗೂ ಈಗ ಕನ್ನಡ ಕುರಿತು ಮಾಡಿದ ಟ್ವೀಟ್‌‌ಗೂ ಹೋಲಿಕೆಯಾಗುತ್ತಿಲ್ಲ ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ ಪ್ರಶ್ನಿಸಿದ್ದಾರೆ. ಲಾವಣ್ಯ ಬಲ್ಲಾಳ್ ಜೈನ್ ಭಾಷೆ ಕುರಿತು ದ್ವಂದ್ವನೀತಿ ಯಾಕೆ ಎಂದು ಪೂನಾವಾಲ ಪ್ರಶ್ನಿಸಿದ್ದಾರೆ.

ಸದ್ಯ ಲಾವಣ್ಯ ಬಲ್ಲಾಳ್ ಜೈನ್, ಕರ್ನಾಟಕದಲ್ಲಿ ಕನ್ನಡ ಮಾತನಾಡಿಲ್ಲ ಅಂದರೆ ಇನ್ನೇನಲ್ಲಿ ಮಾತನಾಡಲು ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ. ಕನ್ನಡ ಭಾಷೆ ಮೇಲಾಗುತ್ತಿರುವ ದಬ್ಬಾಳಿಕೆ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಪರ ಲಾವಣ್ಯ ಬಲ್ಲಾಳ್ ಜೈನ್ ಪ್ರಮುಖ ವಿಚಾರವನ್ನೇ ಟ್ವೀಟ್ ಮಾಡಿದ್ದಾರೆ. ಆದರೆ ಫೆಬ್ರವರಿ ತಿಂಗಳಲ್ಲಿ ಲಾವಣ್ಯ ಬಲ್ಲಾಳ್ ಆಡಿದ ಮಾತು ಹಾಗೂ ಮಾಡಿದ ಟ್ವೀಟ್ ಇದಕ್ಕೆ ವಿರುದ್ಧವಾಗಿದೆ ಎಂದು ಬಿಜೆಪಿ ನಾಯಕ ಶೆಹಜಾಬ್ ಪೂನಾವಾಲ ದ್ವಂದ್ವ ನೀತಿ ಎಂದು ಆರೋಪಿಸಿದ್ದಾರೆ.

Latest Videos

undefined

ಟಿವಿ ಚರ್ಚೆಯಲ್ಲಿ ಬಿಜೆಪಿ-ಕಾಂಗ್ರೆಸ್‌ ವಕ್ತಾರರ ಜಟಾಪಟಿ, ಎಕ್ಸ್‌ನಲ್ಲಿ 'Lavanya BJ' ಟ್ರೆಂಡ್‌!

ಫಬ್ರವರಿ 7 ರಂದು ಲಾವಣ್ಯ ಬಲ್ಲಾಳ್ ಜೈನ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವ್ಯತ್ಯಾಸಗಳನ್ನು ವಿವರಿಸುತ್ತಾ ವಿಡಿಯೋ ಮಾಡಿದ್ದಾರೆ. ಸಂಪೂರ್ಣವಾಗಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ. ಬಣ್ಣ, ಜನಾಂಗೀಯ ನಿಂದನೆ, ಉತ್ತರ-ದಕ್ಷಿಣ ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಮೂರುವರೆ ನಿಮಿಷದ ಈ ವಿಡಿಯೋದಲ್ಲಿ ಲಾವಣ್ಯ ಬಲ್ಲಾಳ್ ಜೈನ್ ಸಂಪೂರ್ಣವಾಗಿ ಇಂಗ್ಲೀಷ್‌ನಲ್ಲಿ ಮಾತನಾಡಿದ್ದರು. ಇದೇ ವೇಳೆ ಲಾವಣ್ಯ ಬಲ್ಲಾಳ್ ಜೈನ್‍ಗೆ  ಎಕ್ಸ್ ಬಳಕೆದಾರ ಕನ್ನಡದ ಬಗ್ಗೆ ಪ್ರಶ್ನಿಸಿದ್ದರು. ನೀವು ಪದೆ ಪದೇ ಹಿಂದಿ ಹೇರಿಕೆ ಎಂದು ಮಾತನಾಡುತ್ತೀರಿ. ಹೀಗೆ ಹೇಳುವ ನೀವು ಕನ್ನಡದಲ್ಲಿ ಯಾಕೆ ಮಾತನಾಡುತ್ತಿಲ್ಲ. ನಿಮ್ಮ ಸ್ಥಳೀಯ ಭಾಷೆಯಲ್ಲಿ ಮಾತನಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದರು.

 

 

ಈ ಪ್ರಶ್ನೆಗೆ ಉತ್ತರಿಸಿದ್ದ ಲಾವಣ್ಯ ಬಲ್ಲಾಳ್ ಜೈನ್, ನಾನು ನಗಗೆ ಇಷ್ಟ ಬಂದ, ನನಗೆ ಅಗತ್ಯವಿರುವ ಭಾಷೆಯಲ್ಲಿ ಮಾತನಾಡುತ್ತೇನೆ. ನಾನು ಯಾವತ್ತೂ ಭಾಷೆಯನ್ನು ಇನ್ನೊಬ್ಬರ ಮೇಲೆ ಹೇರಿಕೆ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಅಂದು ಇಂಗ್ಲೀಷ್‌ನಲ್ಲಿ ಮಾತಾಡಿ ಸಮರ್ಥನೆ ಮಾಡಿಕೊಂಡಿದ್ದ ಲಾವಣ್ಯ ಇದೀಗ ದ್ವಂದ್ವ ನೀತಿ ಅನುಸರಿಸುತ್ತಿರುವುದು ಯಾಕೆ ಎಂದು ಶೆಹಜಾದ್ ಪೂನವಾಲ ಪ್ರಶ್ನಿಸಿದ್ದಾರೆ.

ಮೇಕೆಗೂ ಟಿಕೆಟ್ ಕೊಂಡ ಮಹಿಳೆ: ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಫುಲ್ ಟ್ರೋಲ್!?

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಎರಡೂ ಟ್ವೀಟ್‌ಗಳನ್ನು ಪೋಸ್ಟ್ ಮಾಡಿರುವ ಶೆಹಜಾದ್ ಪೂನಾವಾಲ, ಸುಳ್ಳಲನ್ನೇ ಕಿರುಚಾಡುತ್ತಾ ಹೇಳುವ ಜೋಕರ್ಸ್ ಎಂದಿದ್ದಾರೆ. 
 

click me!