
ಪುಣೆ[ಜ.13]: ದೇಶದೆಲ್ಲೆಡೆ ಪೊಲೀಸ್ ಇಲಾಖೆಗಳು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೋಶಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಹೀಗಿರುವಾಗ ಟ್ವಿಟರ್ ನಲ್ಲಿ ಪೊಲೀಸ್ ಖಾತೆಗಳಲ್ಲಿ ನೀಡಲಾಗುವ ಹಾಸ್ಯಾಸ್ಪದ ಹಾಗೂ ಕ್ರಿಯೇಟಿವ್ ವಾರ್ನಿಂಗ್ ಜನರನ್ನು ಅತಿ ಹೆಚ್ಚು ಆಕರ್ಷಿಸುತ್ತದೆ. ಹೀಗಿರುವಾಗ ಪುಣೆ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಯುವತಿಯ ನಂಬರ್ ಕೇಳಿದ ಯುವಕನೊಬ್ಬನಿಗೆ ಕ್ಲಾಸ್ ತೆಗೆದುಕೊಂಡಿರುವುದು ಸದ್ದು ಮಾಡುತ್ತಿದೆ. ಹೀಗೆ ಮೊಬೈಲ್ ನಂಬರ್ ಕೇಳಿದಾತನಿಗೆ ಪೊಲೀಸರು ಕೊಟ್ಟಿರುವ ರಿಪ್ಲೈ ಜನರ ಮನಗೆದ್ದಿದೆ.
ರವಿವಾರದಂದು ಯುವತಿಯೊಬ್ಬಳು ಪುಣೆ ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಧನೋರಿ ಪೊಲೀಸ್ ಸ್ಟೇಷನ್ ಫೋನ್ ನಂಬರ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪುಣೆ ಪೊಲೀಸರು ಪೊಲೀಸ್ ಸ್ಟೇಷನ್ ನಂಬರ್ ಸಮೇತ ಉತ್ತರಿಸಿದ್ದಾರೆ. ಆದರೆ ಅಷ್ಟರಲ್ಲೇ ಓರ್ವ ಯುವಕ ಪುಣೆ ಪೊಲೀಸರ ಬಳಿ ಆ ಯುವತಿಯ ನಂಬರ್ ಕೇಳಿದ್ದಾನೆ. ಇದಕ್ಕೆ ಪೊಲೀಸರು ಡಿಫರೆಂಟ್ ಆಗಿ ಉತ್ತರಿಸಿದ್ದಾರೆ.
@abirchiklu ಹೆಸರಿನ ವ್ಯಕ್ತಿ 'ನನಗೆ ಆ ಹುಡುಗಿಯ ನಂಬರ್ ಕೊಡ್ತೀರಾ? ಪ್ಲೀಸ್' ಎಂದು ಬರೆದಿದ್ದಾನೆ. ಈ ಟ್ವೀಟ್ ಹಲವಾರು ಮಂದಿ ಗಮನಿಸಿದ್ದಾರೆ. ಆದರೆ ಅಷ್ಟರೊಳಗೆ ಪುಣೆ ಪೊಲೀಸರು ಇದಕ್ಕೆ ಉತ್ತರಿಸುತ್ತಾ 'ಸರ್ ಸದ್ಯ ನಾವು ನಿಮ್ಮ ಮೊಬೈಲ್ ನಂಬರ್ ತಿಳಿದುಕೊಳ್ಳುವ ಉತ್ಸಾಹದಲ್ಲಿದ್ದೇವೆ. ನಿಮಗೆ ಯುವತಿಯ ನಂಬರ್ ಯಾಕೆ ಬೇಕೆಂದು ತಿಳಿಯುವ ಇಚ್ಛೆ ನಮಗಿದೆ. ಹೀಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮಗೆ ನೇರವಾಗಿ ಕಳುಹಿಸಿ. ನಿಮ್ಮ ಖಾಸಗೀತನವನ್ನು ನಾವು ಗೌರವಿಸುತ್ತೇವೆ' ಎಂದಿದ್ದಾರೆ.
ಪೊಲೀಸರಿಗೆ ಆತಂಕ ತಂದ ‘ಪೊಲೀಸ್’ ನಾಮಫಲಕ!
ಸದ್ಯ ಪೊಲೀಸರ ಈ ಕಮೆಂಟ್ ಜನರ ಮನ ಗೆದ್ದಿದೆ. ಈ ಟ್ವೀಟ್ ಭಾರೀ ವೈರಲ್ ಆಗುತ್ತಿದ್ದು, ಪೊಲೀಸರ ಹಾಸ್ಯಾಸ್ಪದ ವಾರ್ನಿಂಗ್ ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ