
ನವದೆಹಲಿ[ಜ.13]: ಕಾಶ್ಮೀರದಲ್ಲಿ ಉಗ್ರರ ಸಂಹಾರ ಮುಂದುವರಿದಿದ್ದು, ಭಾನುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿ ದಿನ್ ಉಗ್ರಗಾಮಿ ಸಂಘಟನೆಯ ಉನ್ನ ತ ಕಮಾಂಡರ್ ಸೇರಿದಂತೆ ಮೂವರು ಭಯೋತ್ಪಾದಕರು ಹತರಾಗಿದ್ದಾರೆ.
ಹಿಜ್ಬುಲ್ ಮುಜಾಹಿದಿನ್ ಕಮಾಂಡರ್ ಆಗಿದ್ದ ಉಮರ್ ಫಯಾದ್, ಫೈಜಾನ್ ಹಮೀದ್, ಆದಿಲ್ ಬಷೀರ್ ಬಂಧಿತ ಉಗ್ರರಾಗಿದ್ದಾರೆ. ಇವರ ಬಂಧನದೊಂದಿಗೆ ಆ ಸಂಘಟನೆಗೆ ತೀವ್ರ ಹಿನ್ನಡೆಯಾಗಿದೆ. ಬಂಧಿತರು ಜಮ್ಮು ಕಾಶ್ಮೀರದಾದ್ಯಂತ ನಡೆದ ಹಲವು ಉಗ್ರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಯೋತ್ಪಾದಕರೊಂದಿಗೆ ಸಿಕ್ಕಿ ಬಿದ್ದ ರಾಷ್ಟ್ರಪತಿ ಶೌರ್ಯ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ!
ದಕ್ಷಿಣ ಕಾಶ್ಮೀರ ಜಿಲ್ಲೆಯ ತ್ರಾಲ್ ಬಳಿಯ ಗುಲ್ಷನ್‌ಪೋರಾ ಪ್ರದೇಶದ ವಸತಿ ಕಟ್ಟಡಗಳಲ್ಲಿ ಉಗ್ರರು ಅಡಗಿ ದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ತಪಾಸಣೆ ಆರಂಭಿಸಿದವು. ಈ ವೇಳೆ, ಉಗ್ರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದರು.
ಯೋಧರು ಪ್ರತಿದಾಳಿ ಆರಂಭಿಸಿ 3 ಉಗ್ರರನ್ನು ಸದೆಬಡಿದಿದ್ದಾರೆ. 2017ರ ಮೇನಲ್ಲಿ ಹಿಜ್ಬುಲ್ ಕಮಾಂಡರ್ ಆಗಿದ್ದ ಸಬ್ಜಾರ್ ಅಹಮದ್ ಭಟ್ ಭದ್ರತಾ ಪಡೆಗಳ ಗುಂಡಿಗೆ ಹತನಾಗಿದ್ದ. ಆತನ ಸಾವಿನ ಹಿನ್ನೆಲೆಯಲ್ಲಿ ಕಾಶ್ಮೀರದಾದ್ಯಂತ ಪ್ರತಿಭಟನೆ ನಡೆದಿದ್ದವು. ಅದಾದ ಬಳಿಕ ಭಟ್ ಸ್ಥಾನಕ್ಕೆ ಉಮರ್ ಬಂದಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ