
ಪಾಟ್ನಾ[ಜ.13]: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪೌರತ್ವ ಕಾಯ್ದೆ ಹಾಗೂ NRC ಸಂಬಂಧ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಪೌರತ್ವ ಕಾಯ್ದೆ ಸಂಬಂಧ ಮಾತುಕತೆ ನಡೆಯಬೇಕು. ಆದರೆ ಯಾವುದೇ ಕಾರಣಕ್ಕೂ NRC ಜಾರಿಗೊಳಿಸಲು ಬಿಡುವುದಿಲ್ಲ ಎಂದಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ NRC ಸಂಬಂಧ ಈ ಹಿಂದಿನಿಂದಲೂ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಿದ್ದರೂ ಅವರ ಪಕ್ಷದ ಕೆಲ ನಾಯಕರು ಪೌರತ್ವ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಇನ್ನು ಭಾನುವಾರದಂದು ಜೆಡಿಯು ನಾಯಕ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡುತ್ತಾ ಬಿಹಾರದಲ್ಲಿ NRC ಹಾಗೂ ಪೌರತ್ವ ಕಾಯ್ದೆ ಜಾರಿಯಾಗುವುದಿಲ್ಲ ಎಂದಿದ್ದರು. ಈ ವಿಚಾರ ಸಿಎಂ ನಿತೀಶ್ ಕುಮಾರ್ ನಿತೀಶ್ ಕುಮಾರ್ ರನ್ನು ಭಾರೀ ಇಕ್ಕಟ್ಟಿಗೀಡು ಮಾಡಿತ್ತು.
ಚುನಾವಣಾ ಚಾಣಕ್ಯನ ಒಂದು ಟ್ವೀಟ್: ಇಕ್ಕಟ್ಟಿನಲ್ಲಿ ಸಿಎಂ, ಬಿಜೆಪಿ ತತ್ತರ!
ಸದ್ಯ ದೀರ್ಘ ಮೌನದ ಬಳಿಕ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್ NRC ಜಾರಿಗೊಳಿಸುವ ಮಾತೇ ಇಲ್ಲ ಎಂದಿದ್ದರೂ ಪೌರತ್ವ ಕಾಯ್ದೆ ಕುರಿತು ರಾಜ್ಯ ಸರ್ಕಾರಗಳು ಮಾತನಾಡುವಂತಿಲ್ಲ. ಏನೇ ಆದರೂ ಸಂಸತ್ತು ನಿರ್ಧರಿಸುತ್ತೆ. ಈ ಕುರಿತು ಏನೇ ಮಾತನಾಡುವುದಿದ್ದರೂ ಜನವರಿ 19ರ ಬಳಿಕ ಮಾತನಾಡುತ್ತೇನೆ. NPR ಸಂಬಂಧ ಹೆಚ್ಚು ಮಾಹಿತಿ ಇಲ್ಲ, ಈ ಕುರಿತು ವರದಿ ಕೇಳಿದ್ದೇನೆ ಎಂದಿದ್ದಾರೆ.
ಇನ್ನು ಪ್ರಶಾಂತ್ ಕಿಶೋರ್ ವರ್ತನೆ ಹಾಗೂ ಟ್ವೀಟ್ ಆಡಳಿತಾಡೂಢ NDA ಮೈತ್ರಿ ಕೂಟದಲ್ಲಿ ಆತಂಕ ಹುಟ್ಟು ಹಾಕಿದೆ. ಪ್ರಶಾಂತ್ ಕಿಶೋರ್ ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತಿದ್ದಾರೆ. ನಿತೀಶ್ ಕುಮಾರ್ ಕೊಡಬೇಕಾದ ಪ್ರತಿಕ್ರಿಯೆಗಳನ್ನು ಅವರೇ ಕೊಡುತ್ತಿದ್ದಾರೆ ಎಂದು ಅನೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಹಾರ ವಿಧಾನಸಭೆಯಲ್ಲಿ ಪೌರತ್ವ ಕಾಯ್ದೆ ಸಂಬಂಧ ವಿಶೇಷ ಚರ್ಚೆ ನಡೆಯಬೇಕಿದೆ. ಎಲ್ಲರೂ ಇಿಚ್ಛಿಸಿದರೆ ಈ ಸಂಬಂಧ ಸದನದಲ್ಲಿ ಮಾತನಾಡುತ್ತೇವೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ