
ಮುಂಬೈ: ವ್ಯಾಯಾಮ ಮಾಡಲು ಜಿಮ್‌ಗೆ ಬಂದ ಯುವಕನೋರ್ವನ ಮೇಲೆ ಜಿಮ್ ಟ್ರೈನರ್ ಓರ್ವ ಮಗ್ಡರ್ ನಿಂದ ಹಲ್ಲೆ ಮಾಡಿ ಆತನ ತಲೆ ಒಡೆದು ಆತನನ್ನು ಗಂಭೀರವಾಗಿ ಗಾಯಗೊಳಿಸಿದ ಆಘಾತಕಾರಿ ಘಟನೆ ಮುಂಬೈನ ಮುಲುಂದ್ ಎಂಬಲ್ಲಿ ನಡೆದಿದೆ. (ಮಗ್ಡರ್ ಎಂದರೆ ಗದೆಯಂತಿರುವ ವ್ಯಾಯಾಮಕ್ಕೆ ಬಳಸುವ ಸಾಧನ) ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಜಿಮ್ ಟ್ರೈನರ್‌ನನ್ನು ಬಂಧಿಸಿದ್ದಾರೆ. ತನ್ನ ವಿರುದ್ಧ ಜಿಮ್‌ಗೆ ಬರುತ್ತಿದ್ದ ಯುವಕ ಮಾಡಿದ ತಮಾಷೆಯಿಂದ ಸಿಟ್ಟಿಗೆದ್ದು ಜಿಮ್ ಟ್ರೈನರ್ ಹೀಗೆ ಆತನ ತಲೆಗೆ ಬಾರಿಸಿದ್ದಾನೆ ಎಂದು ವರದಿ ಆಗಿದೆ. ಘಟನೆಯ ಬಳಿಕ ಜಿಮ್‌ಗೆ ಬರುತ್ತಿದ್ದ ಯುವಕ ತಲೆಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗ್ಡರ್ ಎಂಬುದು ಒಂದು ಜಿಮ್‌ನಲ್ಲಿ ಬಳಸುವ ವ್ಯಾಯಾಮ ಉಪಕರಣವಾಗಿದ್ದು, ಹೆಚ್ಚಾಗಿ ರೆಸ್ಲರ್‌ಗಳು ಕಠಿಣ ವ್ಯಾಯಾಮಕ್ಕಾಗಿ ಈ ಉಪಕರಣಗಳನ್ನು ಬಳಸುತ್ತಾರೆ. ಇದು ಬಹಳ ಭಾರವಾಗಿದ್ದು, ಸಾಂಪ್ರದಾಯಿಕ ಭಾರತೀಯ ವ್ಯಾಯಾಮ ಸಾಧನವಾಗಿದೆ. ಇದು ತುಂಬಾ ಭಾರವಾಗಿರುತ್ತದೆ, ಹೆಚ್ಚಿನ ಕುಸ್ತಿಪಟುಗಳು ತಮ್ಮ ಆರಂಭಿಕ ತರಬೇತಿ ದಿನಗಳಲ್ಲಿ ಅದನ್ನು ಒಂದು ಕೈಯಿಂದ ಹಿಡಿದೆತ್ತಲು ಕೂಡ ಸಾಧ್ಯವಾಗುವುದಿಲ್ಲ. ಇಂತಹ ಸಾಧನದಿಂದ ಆತನ ತಲೆಗೆ ಥಳಿಸಿರುವುದರಿಂದ ಯುವಕ ಸಾಯದೇ ಬದುಕಿರುವುದೇ ದೊಡ್ಡ ವಿಚಾರ.
ಭಾರತದ ಶೇ.50 ರಷ್ಟು ವಯಸ್ಕರು ಅನ್‌ಫಿಟ್, ಪುರಷರಿಗಿಂತ ಮಹಿಳೆಯರೇ ಹೆಚ್ಚು!
ಇದನ್ನು ಜಿಮ್ ಟ್ರೈನರ್ ಯುವಕನ ತಲೆಗೆ ಹೊಡೆಯಲು ಬಳಸಿದ್ದಾನೆ. ಮುಲುಂದ್‌ನಲ್ಲಿರುವ ಫಿಟ್‌ನೆಸ್ ಇಂಟೆಲಿಜೆನ್ಸ್‌ನ ಜಿಮ್‌ನಲ್ಲಿ ಈ ಘಟನೆ ನಡೆದಿದೆ. ಹೀಗೆ ಹಲ್ಲೆಯಿಂದ ಗಾಯಗೊಂಡ ಯುವಕನಿಗೆ ಎಂಆರ್‌ಐ ಸ್ಕ್ಯಾನ್ ಮಾಡಲಾಗಿದ್ದು, ತಲೆಗೆ ಆಳವಾದ ಗಾಯಗಳಾಗಿರುವುದು ತಿಳಿದು ಬಂದಿದೆ. ಹಾಗೆಯೇ ಆತನ ಎಡಭಾಗದ ತಲೆಬುರುಡೆಯಲ್ಲಿ ಪ್ರಾಕ್ಚರ್(ಮುರಿತ) ಆಗಿದೆ. ಹಲ್ಲೆಯ ದೃಶ್ಯಾವಳಿಗಳು ಜಿಮ್‌ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಘಟನೆಯ ಬಳಿಕ ಹಲ್ಲೆಗೊಳಗಾದ ಯುವಕ ದೂರು ನೀಡಿದ್ದು, ಪೊಲೀಸರು ಜಿಮ್ ಟ್ರೈನರ್‌ನನ್ನು ಬಂಧಿಸಿದ್ದಾರೆ.
ಮಗ್ಡರ್ ಹಾಗೂ ಜಿಮ್ ಉಪಕರಣಗಳ ಬಗ್ಗೆ ಮತ್ತಷ್ಟು?
ಹಿಂದೆ ಗರಡಿ ಮನೆಗಳಲ್ಲಿ ಅಭ್ಯಾಸ ನಡೆಸಲು ಈ ನೈಸರ್ಗಿಕ ಉಪಕರಣಗಳನ್ನು ಬಳಸಲಾಗುತ್ತಿತ್ತು. ಬಳಕೆಯಾಗುವುದು ನೈಸರ್ಗಿಕ ಉಪಕರಣಗಳಷ್ಟೇ. ಇದರಲ್ಲಿ ಕರೇಲಾ ಉಪಕರಣವನ್ನು ಮರದಿಂದ ಮಾಡಿದ್ದು. ಗದೆಯ ರೀತಿಯಲ್ಲಿರುತ್ತದೆ. ಇದರಲ್ಲಿ ಆಂಜನೇಯ ಗದೆ, ಭೀಮಗದೆ ಎಂಬ ಹಲವು ವಿಧಗಳಿವೆ, ಗರ್ದನ್ ಕಲ್ಲು ಎಂಬ ಉಪಕರಣವೂ ಇದ್ದು, ಇದನ್ನು ಹಿಂದೆ ಕತ್ತಿನ ಭಾಗಕ್ಕೆ ಶಕ್ತಿ ಹೆಚ್ಚಿಸಲು ಬಳಸುತ್ತಿದ್ದರು. ರೌಂಡ್‌ಕಲ್ಲು, ಸಾಮ್ರಾಣಿ ಕಲ್ಲು, ಕೊಂಬು, ಗುದ್ದಲಿ, ಹನುಮಾನ್ ದಂಡೆ, ಗದೆ ಮತ್ತಿತರ ಪರಿಕರಗಳನ್ನು ಪೈಲ್ವಾನರು ಕುಸ್ತಿಪಟುಗಳು ಬಳಸುತ್ತಾರೆ.
ಟ್ರೆಡ್ ಮಿಲ್‌ನಿಂದ ಜಾರಿ 3ನೇ ಪ್ಲೋರ್‌ನಿಂದ ಸೀದಾ ಕೆಳಗೆ ಬಿದ್ದ ಮಹಿಳೆ: ವೀಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ