
ವಾರಣಾಸಿ(ಸೆ.12): ಗ್ಯಾನವ್ಯಾಪಿ ಮಸೀದಿ ಪ್ರಕರಣದ ಕಾನೂನು ಹೋರಾಟ ತೀವ್ರಗೊಳ್ಳುತ್ತಿದೆ. ಮಸೀದಿ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ವಾರಾಣಸಿ ಕೋರ್ಟ್, ವಿಚಾರಣೆಗೆ ಅಸ್ತು ಎಂದಿದೆ. ಇದೇ ವೇಳೆ ಹಿಂದೂಗಳ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದಿದ್ದ ಮುಸ್ಲಿಂ ಅರ್ಜಿಯನ್ನು ಕೋರ್ಟ್ ತರಿಸ್ಕರಿಸಿದೆ. ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಹಿಂದೂ ಸಮುದಾಯ ಸಿಹಿ ಹಂಚಿ ಸಂಭ್ರಮಿಸಿದೆ. ಇದು ನಮಗೆ ಸಿಕ್ಕ ಆರಂಭಿಕ ಗೆಲುವು ಎಂದಿತ್ತು. ಆದರೆ ಕೋರ್ಟ್ ನಿರ್ಧಾರ ಮುಸ್ಲಿಂ ಸಮಿತಿಯನ್ನು ಕೆರಳಿಸಿದೆ. ಇದೀಗ ವಾರಣಾಸಿ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹೋರಾಟ ನಡೆಸಲು ಮುಸ್ಲಿಂ ಸಮಿತಿ ಮುಂದಾಗಿದೆ. ಈ ಕುರಿತು ಶೀಘ್ರದಲ್ಲೇ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಮುಸ್ಲಿಂ ಸಮಿತಿ ಪರ ವಕೀಲ ಮೊಹಮ್ಮದ್ ಸಮೀಮ್ ಹೇಳಿದ್ದಾರೆ.
ಮಸೀದಿ ಆವರಣದಲ್ಲಿರುವ(gyanvapi mosque case) ಹಿಂದೂ ದೇವರ(Hindu Gods) ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ. ಇದು 1991ರ ಪೂಜಾ ಸ್ಥಳ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. ವಾರಾಣಾಸಿ ಕೋರ್ಟ್(Varanasi court) ಇದ್ಯಾವುದನ್ನು ಪರಿಗಣಿಸಿದ ಹಿಂದೂಗಳ(Hindu) ಪರವಾಗಿ ತೀರ್ಪು ನೀಡಿದೆ. ಹೀಗಾಗಿ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹೋರಾಟ ಆರಂಭಿಸುತ್ತೇವೆ. ವಾರಣಾಸಿ ಕೋರ್ಟ್‌ನಲ್ಲಿ ಈಗಷ್ಟೇ ಪ್ರಕರಣ ಆರಂಭಗೊಂಡಿದೆ. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಮೊಹಮ್ಮದ್ ಸಮೀಮ್ ಹೇಳಿದ್ದಾರೆ.
Gyanvapi case ಶಾಂತಿಯಿಂದ ಎಲ್ಲವನ್ನೂ ಒಪ್ಪಿಕೊಳ್ಳಿ, ಇದರಲ್ಲಿ ಸೋಲು-ಗೆಲುವಿನ ಪ್ರಶ್ನೆಯಿಲ್ಲ: ವಿಎಚ್‌ಪಿ
ಗ್ಯಾನವ್ಯಾಪಿ ಮಸೀದಿ(gyanvapi mosque) ವಕ್ಫ್ ಆಸ್ತಿಯಾಗಿದೆ. ಇದನ್ನು ಹಿಂದೂಗಳು ಪ್ರಶ್ನಿಸಲು ಹೇಗೆ ಸಾಧ್ಯ. ವಕ್ಫ್ ಆಸ್ತಿಯಲ್ಲಿರುವ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ ನೀಡುವುದು ಎಷ್ಟು ಸರಿ ಎಂದು ಅಂಜುಮನ್ ಇಸ್ಲಾಮ್ ಸಮಿತಿ ಪ್ರಶ್ನಿಸಿದೆ. ಇದರ ವಿರುದ್ದ ಹೋರಾಟ ಮುಂದುವರಿಸುತ್ತೇವೆ ಎಂದು ಅಂಜುಮನ್ ಎಚ್ಚರಿಕೆ ನೀಡಿದೆ.
ಗ್ಯಾನವಾಪಿ: ವಾರಾಣಸಿ ಜಿಲ್ಲಾ ಕೋರ್ಚ್ ತೀರ್ಪಿಗೆ ಕಾಯಲು ಸುಪ್ರೀಂ ನಿರ್ಧಾರ
ವಾರಾಣಸಿಯ ಗ್ಯಾನವಾಪಿ ಮಸೀದಿಯೊಳಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಕುರಿತು ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೇ ಇರಲು ಸುಪ್ರೀಂಕೋರ್ಚ್ ನಿರ್ಧರಿಸಿದೆ. ಇದೇ ವಿಷಯದ ಕುರಿತು ಈಗಾಗಲೇ ವಾರಾಣಸಿ ಜಿಲ್ಲಾ ನ್ಯಾಯಾಲಯ ಕೂಡಾ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಮಸೀದಿ ಆಡಳಿತ ಮಂಡಳಿ ಸಲ್ಲಿಸಿರುವ ಮೇಲ್ಮನವಿ ಕುರಿತ ವಿಚಾರಣೆಯನ್ನು ಅಕ್ಟೋಬರ್ ಮೊದಲ ವಾರಕ್ಕೆ ಮುಂದೂಡುವುದಾಗಿ ತಿಳಿಸಿದೆ. ಸಂಸತ್ ಅಂಗೀಕರಿಸಿರುವ ಕಾಯ್ದೆ ಅನ್ವಯ, ಯಾವುದೇ ಪ್ರಾರ್ಥನಾ ಮಂದಿರಗಳಲ್ಲಿ 1947ರಲ್ಲಿನ ಯಥಾಸ್ಥಿತಿ ಕಾಪಾಡಬೇಕಿದೆ. ಹೀಗಿದ್ದರೂ, ಪ್ರಾರ್ಥನೆಗೆ ಕೋರಿದ್ದ ಅರ್ಜಿ ವಿಚಾರಣೆಗೆ ಸ್ವೀಕಾರ ಮಾಡಿದ್ದು ಸರಿಯಲ್ಲ ಎಂದು ಮಸೀದಿ ಆಡಳಿತ ಮಂಡಳಿ ವಾದ ಮಂಡಿಸಿದೆ.
Gyanvapi Masjid Verdict: ಹಿಂದುಗಳ ಅರ್ಜಿ ವಿಚಾರಣೆಗೆ ಅರ್ಹ, ವಾರಣಾಸಿ ಕೋರ್ಟ್ ಮಹತ್ವದ ತೀರ್ಪು!
ಗ್ಯಾನವಾಪಿ ಮಸೀದಿ ವಿಡಿಯೋ ಸರ್ವೇಗೆ ಆದೇಶಿಸಿದ್ದ ಕಾಶಿ ಕೋರ್ಟ್ ಜಡ್ಜ್ ವರ್ಗಾವಣೆ
ಗ್ಯಾನವಾಪಿ ಮಸೀದಿಯಲ್ಲಿ ವಿಡಿಯೋ ಸಮೀಕ್ಷೆಗೆ ಆದೇಶ ನೀಡಿದ ವಾರಾಣಸಿ ಸಿವಿಲ್ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರನ್ನು ಬರೇಲಿಗೆ ವರ್ಗಾವಣೆ ಮಾಡಲಾಗಿದೆ. ಅಲಹಾಬಾದ್ ಹೈಕೋರ್ಚ್‌ನ ಸುಮಾರು 121 ಸಿವಿಲ್ ನ್ಯಾಯಾಧೀಶರನ್ನು ಸೋಮವಾರ ಸಂಜೆ ವರ್ಗಾವಣೆ ಮಾಡಲಾಗಿದ್ದು, ಅದರಲ್ಲಿ ದಿವಾಕರ್ ಕೂಡಾ ಒಬ್ಬರು. ಜುಲೈ 4 ರಂದು ವರ್ಗಾವಣೆಯಾದ ನ್ಯಾಯಾಧೀಶರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ, ದಿವಾಕರ್ ಗ್ಯಾನವಾಪಿ ಮಸೀದಿ ಕುರಿತು ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಮಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಹೇಳಿದ್ದರು. ಆದರೆ ವಾಡಿಕೆಯಂತೆ ನ್ಯಾಯಾಧೀಶರ ವರ್ಗಾವಣೆ ಮಾಡಲಾಗಿದ್ದು, ಇದಕ್ಕೂ ಗ್ಯಾನವಾಪಿ ವಿವಾದಕ್ಕೂ ಸಂಬಂಧವಿಲ್ಲ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ