EAM visit Saudi "ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತ ಅರ್ಹ"

By Suvarna NewsFirst Published Sep 12, 2022, 6:14 PM IST
Highlights

ಭಾರತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮೊದಲ ಸೌದಿ ಅರೆಬಿಯಾ ಭೇಟಿಯಲ್ಲಿ ಮತ್ತೆ ತಮ್ಮ ಖಡಕ್ ಮಾತಿನ ಮೂಲಕ ಗಮನಸೆಳೆದಿದ್ದಾರೆ. ಈ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಕುರಿತು ಜೈಶಂಕರ್ ಮಾತನಾಡಿದ್ದಾರೆ.

ಸೌದಿ ಅರೆಬಿಯಾ(ಸೆ.12):  ಭದ್ರತಾ ವಿಚಾರದಲ್ಲಿ ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ನಿಲುವನ್ನು ಖಡಕ್ ಆಗಿ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಭದ್ರತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಲವು ವೇದಿಕೆಗಳಲ್ಲಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇದೀಗ ಮಹತ್ವದ ವಿಚಾರದ ಮೇಲೆ ಬೆಳಕು ಚೆಲ್ಲಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯತ್ವ ಪಡೆಯಲು ಬಲವಾದ ಕಾರಣ ಹೊಂದಿದೆ ಎಂದು ಜೈಶಂಕರ್ ಹೇಳಿದ್ದಾರೆ. ವಿದೇಶಾಂಗ ಸಚಿವರಾಗಿ ಇದೇ ಮೊದಲ ಬಾರಿಗೆ ಸೌದಿ ಅರೆಬಿಯಾಗೆ ಭೇಟಿ ನೀಡಿರುವ ಜೈಶಂಕರ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಪಡೆಯಲು ಭಾರತ ಅರ್ಹವಾಗಿದೆ. ವಿಶ್ವಸಂಸ್ಥೆ ಜಾಗತಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು ಹಾಗೂ ಬದಲಾಗಬೇಕು. ಹೀಗಾದರೆ ಮಾತ್ರ ವಿಶ್ವಸಂಸ್ಥೆ ಪ್ರಸ್ತುತವಾಗಲಿದೆ. ಅಂತಾರಾಷ್ಟ್ರೀಯ ಭದ್ರತೆಯನ್ನು ಕಾಪಾಡಿಕೊಳ್ಳಲು ಶಕ್ತವಾಗಬೇಕು. ಹಳೇ ನಿಲುವುಗಳಿಗೆ ಜೋತು ಬೀಳುವುದರಿಂದ ಅಪ್ರಸ್ತುತವಾಗಲಿದೆ ಎಂದು ಜೈಶಂಕರ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕುರಿತು ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು(United Nations Security Council) ಸುಧಾರಿಸುವ ಪ್ರಯತ್ನಗಳಲ್ಲಿ ಭಾರತ (India)ಮುಂಚೂಣಿಯಲ್ಲಿದೆ.  ಭದ್ರತಾ ಮಂಡಳಿಯನ್ನು ಮತ್ತಷ್ಟು ಶಕ್ತಿಯುತಗೊಳಿಸಬೇಕಿದೆ.  ಭದ್ರತಾ ಮಂಡಳಿಯ ನೀತಿಗಳನ್ನು ಬದಲಿಸಬೇಕು. ಜಾಗತಿಕ ಸಮಸ್ಯೆಗಳಿಗೆ ಧನಿಯಾಗುವಂತಿರಬೇಕು. ನೂತನ ಭದ್ರತಾ ಮಂಡಳಿಯಿಂದ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ನರೆವಾಗಲಿದೆ ಎಂದು ಜೈಶಂಕರ್(S Jaishankar) ಹೇಳಿದ್ದಾರೆ. 

S Jaishankar: ಅಬುಧಾಬಿಯ ಮೊದಲ ಹಿಂದು ದೇವಸ್ಥಾನಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವ!

ಭಾರತದ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರ, ನ್ಯೂಕ್ಲಿಯರ್ ಪವರ್, ತಂತ್ರಜ್ಞಾನಗಳ ತವರಾಗಿದೆ. ವಿಶ್ವದ ಶಕ್ತಿಯುತ್ತ ರಾಷ್ಟ್ರವಾಗಿ ಬೆಳೆದು ನಿಂತಿದೆ. ಭಾರತಕ್ಕೆ ಭದ್ರತಾ ಮಂಡಳಿಯ ಖಾಯಂ ಸದಸ್ಯ(permanent membership) ನೀಡಲು ಎಲ್ಲಾ ಅರ್ಹತೆ ಪಡೆದಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಭದ್ರತೆ ಅತೀ ಮುಖ್ಯ ವಿಚಾರ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಭದ್ರತಾ ಸಮಸ್ಯೆಗಳಿಗೆ(unsc) ಸ್ಪಂದಿಸಲು, ಪರಿಹರಿಸಲು ಸಾಧ್ಯವಾಗದಿದ್ದರೆ, ಇರುವಿಕೆಯ ಪ್ರಶ್ನೆ ಏಳಲಿದೆ. ಹೀಗಾಗಿ ಭದ್ರತಾ ಮಂಡಳಿಯನ್ನು ನವೀಕರಿಸುವ ಅನಿವಾರ್ಯತೆ ಇದೆ ಎಂದು ಜೈಶಂಕರ್ ಹೇಳಿದ್ದಾರೆ. 

ಭಾರತ ಹಾಗೂ ಚೀನಾ ಗಡಿ ಸಮಸ್ಯೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜೈಶಂಕರ್!

ಸೌದಿ ಅರೆಬಿಯಾಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಹಲವು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಭಾರತ ಹಾಗೂ ಸೌದಿ ನಡುವಿನ ವ್ಯಾಪಾರ ವಹಿವಾಟು, ವಿದೇಶಾಂಗ ನೀತಿಗಳ ಕುರಿತು ಚರ್ಚಿಸಲಿದ್ದಾರೆ. 
 

click me!