ವಿದೇಶಿ ಪ್ರವಾಸಿಗರಿಂದಲೂ ಲಂಚ ಪಡೆದು ದೇಶದ ಮಾನ ಕಳೆದ ಟ್ರಾಫಿಕ್ ಪೊಲೀಸರು

Published : Sep 02, 2025, 12:19 PM IST
Japanese Tourists Paying Bribe to Traffic Police Goes Viral

ಸಾರಾಂಶ

ಗುರುಗ್ರಾಮದಲ್ಲಿ ಜಪಾನಿನ ಪ್ರವಾಸಿಗರಿಂದ ಟ್ರಾಫಿಕ್ ಪೊಲೀಸರು ಲಂಚ ಪಡೆದ ಘಟನೆ ಬೆಳಕಿಗೆ ಬಂದಿದೆ. ಹೆಲ್ಮೆಟ್ ಧರಿಸದ ಹಿಂಬದಿ ಸವಾರನಿಂದ 1000 ರೂಪಾಯಿ ಲಂಚ ಪಡೆದ ಪೊಲೀಸರು ಯಾವುದೇ ರಶೀದಿ ನೀಡಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಎಲ್ಲರಿಗೂ ಗೊತ್ತಿರುವುದೇ ಅದನ್ನು ವಿಶೇಷವಾಗಿ ವಿವರಿಸಬೇಕಾಗಿಲ್ಲ, ಇನ್ನೂ ಟ್ರಾಫಿಕ್ ಪೊಲೀಸರು ವಸೂಲಿ ಮಾಡೋದ್ರಲ್ಲಿ ಒಂದು ಹೆಜ್ಜೆ ಮುಂದೆ. ಟ್ರಾಫಿಕ್ ಪೊಲೀಸರ ವಸೂಲಿ ದಂಧೆಯ ಬಗ್ಗೆ ಈಗಾಗಲೇ ಅನೇಕರು ಹೇಳಿಕೊಂಡಿದಿದೆ. ಜನಸಾಮಾನ್ಯರಂತೂ ಈ ಟ್ರಾಫಿಕ್ ಪೊಲೀಸರ ವರ್ತನೆಯ ಬಗ್ಗೆ ರೋಸಿ ಹೋಗಿದ್ದಾರೆ. ಆದರೆ ಈಗ ಈ ಟ್ರಾಫಿಕ್ ಪೊಲೀಸರು ವಿದೇಶಿ ಪ್ರಜೆಗಳಿಂದಲೂ ಲಂಚ ವಸೂಲಿ ಮಾಡಿದ್ದು ಬೆಳಕಿಗೆ ಬಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಕಳಿತಿದ್ದಾರೆ.

ಜಪಾನ್ ಪ್ರವಾಸಿಗರಿಂದ ಲಂಚ ಸ್ವೀಕರಿಸಿ ಟ್ರಾಫಿಕ್ ಪೊಲೀಸರು

ಹೌದು ರಾಜಧಾನಿಗೆ ಸಮೀಪದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಜಪಾನ್ ಮೂಲದ ಪ್ರವಾಸಿಗರು ದ್ವಿಚಕ್ರ ವಾಹನದಲ್ಲಿ ಪಯಣಿಸುತ್ತಿದ್ದರು. ಇವರಲ್ಲಿ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ, ಹೀಗಾಗಿ ಇವರನ್ನು ಹಿಡಿದ ಗುರುಗ್ರಾಮದ ಟ್ರಾಫಿಕ್ ಪೊಲೀಸರು ಹಿಂಬದಿ ಸವಾರನಿಂದ 1,000 ಲಂಚ ಕೇಳಿದ್ದಾರೆ. ಇದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಸ್ಕೂಟರ್ ಅನ್ನು ಹೆಲ್ಮೆಟ್ ಧರಿಸಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು, ಆದರೆ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಪ್ರವಾಸಿಗರಿಗೆ ದಂಡವಾಗಿ 1,000 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಹೇಳುವುದನ್ನು ಕೇಳಬಹುದು.

ದುಡ್ಡು ಪಡೆದ ಚಲನ್ ನೀಡದ ಟ್ರಾಫಿಕ್ ಪೊಲೀಸರು:

ಅಧಿಕಾರಿ ನೀವು ಇಲ್ಲಿ ಅಥವಾ ನ್ಯಾಯಾಲಯದಲ್ಲಿ ಹಣ ಪಾವತಿಸಬಹುದಾ ಎಂದು ಕೇಳುತ್ತಾ ನಗದು ರೂಪದಲ್ಲಿ ಹಣ ಪಾವತಿ ಮಾಡುವಂತೆ ಕೇಳುತ್ತಾರೆ. ಪ್ರವಾಸಿಗರಲ್ಲಿ ಒಬ್ಬರು ನಾನು ವೀಸಾ ಅಥವಾ ಸ್ಪರ್ಶ ಕಾರ್ಡ್ ಬಳಸಬಹುದೇ? ಎಂದು ಕೇಳುತ್ತಾರೆ. ಅದಕ್ಕೆ ಅಧಿಕಾರಿ ವೀಸಾ ಟಚ್ ಇಲ್ಲ ಎಂದು ಹೇಳುತ್ತಾರೆ. ನಂತರ ಪ್ರವಾಸಿ ಎರಡು 500 ರೂಪಾಯಿಯ ನೋಟುಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ.ಆದರೆ ಪೊಲೀಸರು ಚಲನ್ ನೀಡದೇ ಆ ಹಣವನ್ನು ಸ್ವೀಕರಿಸಿದ್ದಾರೆ.

ಸಂಚಾರ ನಿಯಮಗಳ ಪ್ರಕಾರ, ಹೆಲ್ಮೆಟ್ ಧರಿಸದ ಹಿಂಬದಿ ಸವಾರನಿಗೆ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ದಂಡದ ಹಣವನ್ನು ಆನ್‌ಲೈನ್‌ ಅಪ್ಲಿಕೇಶನ್ ಅಥವಾ ಪೋರ್ಟಲ್ ಮೂಲಕ ಡಿಜಿಟಲ್ ರೂಪದಲ್ಲಿ ಪಾವತಿಸಬಹುದು. ಒಂದು ವೇಳೆ ಅಪರಾಧಿ ಸ್ಥಳದಲ್ಲೇ ದಂಡವನ್ನು ಪಾವತಿಸಲು ಬಯಸಿದರೆ, ಪೊಲೀಸರು ಕಾರ್ಡ್ ಅಥವಾ UPI ಪಾವತಿಗಾಗಿ ಪಾಯಿಂಟ್ ಆಫ್ ಸೇಲ್ (POS) ಯಂತ್ರವನ್ನು ಒದಗಿಸುವುದು ಅಥವಾ ಇ-ಚಲನ್ ಯಂತ್ರವನ್ನು ಬಳಸಿಕೊಂಡು ಮುದ್ರಿತ ರಶೀದಿಯನ್ನು ನೀಡಬೇಕು. ಆದರೆ ಇಲ್ಲಿ ಪೊಲೀಸರು ಯಾವುದೇ ರೂಲ್ಸ್ ಫಾಲೋ ಮಾಡಿಲ್ಲ.

ವೀಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರಿಂದ ಆಕ್ರೋಶ:

ಪೊಲೀಸರು ಯಾವುದೇ ರಶೀದಿ ನೀಡದೆ ಹಣವನ್ನು ಸ್ವೀಕರಿಸಿದ್ದು, ವಹಿವಾಟಿನ ಪಾರದರ್ಶಕತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ. ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಇತರ ಅನೇಕ ವಾಹನ ಸವಾರರು ಹೆಲ್ಮೆಟ್ ಧರಿಸಿಲ್ಲ, ಆದರೆ ಅವರನ್ನು ನಿಲ್ಲಿಸಲೂ ಇಲ್ಲ ದಂಡ ವಿಧಿಸಲೂ ಇಲ್ಲ ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ಈ ಘಟನೆಯ ವೀಡಿಯೋವನ್ನು ಈ ಜಪಾನ್ ಪ್ರವಾಸಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವೀಡಿಯೋವನ್ನು ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ವೈರಲ್ ಆಗಿತ್ತು. ಇದಕ್ಕೆ ಭಾರತದ ನಾಗರಿಕರು ವ್ಯಾಪಕವಾಗಿ ಕಾಮೆಂಟ್ ಮಾಡುತ್ತಿದ್ದಂತೆ ಗುರುಗ್ರಾಮ್ ಸಂಚಾರ ಪೊಲೀಸ್ ಇಲಾಖೆ ಘಟನೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಸಂಚಾರ ಸಿಬ್ಬಂದಿಗೆ ಸಂಬಂಧಿಸಿದ ಲಂಚ ಅಥವಾ ದುಷ್ಕೃತ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯೊಂದಿಗೆ ನಾಗರಿಕರು ಮುಂದೆ ಬರಬೇಕೆಂದು ಪೊಲೀಸ್ ಇಲಾಖೆ ಒತ್ತಾಯಿಸಿದೆ, ದೂರು ನೀಡಿದವರ ಗುರುತು ಗೌಪ್ಯವಾಗಿ ಉಳಿಯುತ್ತದೆ ಎಂದು ಪೊಲೀಸ್ ಇಲಾಖೆ ಹೇಳಿದೆ.

ಇದನ್ನೂ ಓದಿ: ಭಾರತ ನಮ್ ಜೊತೆ ಇರ್ಬೇಕಿತ್ತು, ರಷ್ಯಾ ಜೊತೆ ಅಲ್ಲ... ಪುಟಿನ್ ಮೋದಿ ಭೇಟಿ ಬಳಿ ಟ್ರಂಪ್ ಸಲಹೆಗಾರ ಹೇಳಿದ್ದೇನು?

ಇದನ್ನೂ ಓದಿ: ಕೈಗೆ ಕೋಳ ಮೈಮೇಲೆ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ವ್ಯಕ್ತಿಯ ಪಯಣ ಯಾರಿತಾ?

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ