Gujarat Riots ಕಾಂಗ್ರೆಸ್ ನಾಯಕನ ಜೊತೆ ಸೇರಿ ಷಡ್ಯಂತ್ರ, ದಾಖಲೆ ಸಮೇತ ತೀಸ್ತಾ ಸೆಟಲ್ವಾಡ್ ಸಂಚು ಬಯಲು!

By Suvarna News  |  First Published Jul 16, 2022, 2:00 PM IST
  • ಗುಜರಾತ್ ಗಲಭೆ 2002ರ ಹಿಂದಿನ ಅಸಲಿ ಷಡ್ಯಂತ್ರ ಬಯಲು
  • ಮೋದಿ ಸೇರಿ ಹಲವರ ಮೇಲೆ ಸುಳ್ಳು ದಾಖಲೆ ಸೃಷ್ಟಿ
  • ತೀಸ್ತಾ ಸೆಟಲ್ವಾಡ್ ಹಾಗೂ ಕಾಂಗ್ರೆಸ್ ನಾಯಕನ ಸಂಚು ಬಯಲು

ಅಹಮ್ಮದಾಬಾದ್(ಜು.16): ಗುಜರಾತ್ ಗಲಭೆ ಬಳಿಕ ನಡೆದ ಷ್ಯಡಂತ್ರದ ಒಂದೊಂದೇ ಅಸಲಿ ಸತ್ಯಗಳು ಇದೀಗ ಹೊರಬರುತ್ತಿದೆ. 2002ರ ಗೋದ್ರೋತ್ತರ ಪ್ರಕರಣ ಕುರಿತು ತನಿಖೆ ತೀವ್ರಗೊಳಿಸಿರುವ ಗುಜರಾತ್ ಪೊಲೀಸರು ಮಹತ್ವದ ವಿಚಾರ ಬಹಿರಂಗ ಪಡಿಸಿದ್ದಾರೆ. ಈ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿರುವ ಮೂವರ ಪೈಕಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಜಾಮೀನು ನೀಡಲು ಪೊಲೀಸರು ಮಹತ್ವದ ದಾಖಲೆಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ದಾಖಲೆಯಲ್ಲಿ 2002ರ ಗುಜರಾತ್ ಗಲಭೆ ಬಳಿಕ ಅಂದಿನ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ತೀಸ್ತಾ ಸೆಟಲ್ವಾಡ್ ಕಾಂಗ್ರೆಸ್ ನಾಯಕ ಅಹಮ್ಮದ್ ಪಟೇಲ್ ಜೊತೆ ಸೇರಿ ಅತೀ ದೊಡ್ಡ ಷಡ್ಯಂತ್ರ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗುಜರಾತ್ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರು ತೀಸ್ತಾ ಸೆಟಸ್ವಾಡ್ ಷಡ್ಯಂತ್ರೆ ನೆರವು ನೀಡಿದ್ದಾರೆ. ಇದರಿಂದ ಅಂದಿನ ಸಿಎಂ ನರೇಂದ್ರ ಮೋದಿ ಸೇರಿದಂತೆ ಹಲವ ಮೇಲೆ ಸುಳ್ಳು ಕೇಸ್ ಹಾಕಲಾಗಿತ್ತು ಎಂದು ಗುಜರಾತ್ ಪೊಲೀಸರು ದಾಖಲೆ ಸಮೇತ ಹೇಳಿದ್ದಾರೆ. ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ(Narendra Modi) ಕೈವಾಡವಿದೆ ಎಂದು ಸುಳ್ಳು ಕೇಸ್ ಹಾಕಲಾಗಿತ್ತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮೋದಿಗೆ ಕ್ಲೀನ್ ಚಿಟ್ ನೀಡಿತ್ತು. ಇದರ ಬೆನ್ನಲ್ಲೇ ಗುಜರಾತ್ ಗಲಭೆ(Godra Case) ಪ್ರಕರಣ ತನಿಖೆ ನಡೆಸಲು ವಿಶೇಷ ತನಿಖಾ ತಂಡ(SIT)ರಚಿಸಿತ್ತು. ಈ ತನಿಖಾ ತಂಡ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಾಗೂ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆರ್‌ಬಿ ಶ್ರೀಕುಮಾರ್ ಬಂಧಿಸಿತ್ತು. ಇದೀಗ ಈ ಪ್ರಕರಣ ತೀವ್ರತೆ ಹೆಚ್ಚಾಗಿದೆ. ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ.

2002ರಲ್ಲಿ ಮೋದಿ, ಬಿಜೆಪಿ ಹಾಗೂ ಕೆಲವರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಲಾಗಿತ್ತು. 2002ರಲ್ಲಿ ಮೋದಿ ಸರ್ಕಾರವನ್ನು(Modi Govt) ಅಸ್ತಿರಗೊಳಿಸಲು ತೀಸ್ತಾ ಸೆಟಲ್ವಾಡ್ ಕಾಂಗ್ರೆಸ್ ನಾಯಕರ ಜೊತೆ ಸಂಚು ರೂಪಿಸಿದ್ದರು. ಇದಕ್ಕಾಗಿ ದಿವಗಂತ ಕಾಂಗ್ರೆಸ್ ನಾಯಕ ಅಹಮ್ಮದ್ ಪಟೇಲ್ 30 ಲಕ್ಷ ರೂಪಾಯಿ ಪಡೆದುಕೊಂಡಿದ್ದರು ಎಂದು ಗುಜರಾತ್ ಪೊಲೀಸರು ಅಹಮ್ಮದಾಬಾದ್ ಸೆಶನ್ ಕೋರ್ಟ್‌ಗೆ ದಾಖಲೆ ಸಲ್ಲಿಸಿದ್ದಾರೆ. 

Tap to resize

Latest Videos

ಗೋಧ್ರಾ ಗಲಭೆ ಕೇಸಲ್ಲಿ ಮೋದಿಗೆ ಕ್ಲೀನ್‌ಚಿಟ್‌, ತೀಸ್ತಾ ಸೆತಲ್ವಾಡೆ ಬಂಧನದ ಹಿಂದಿನ ಕಥೆಯೇನು?

ಗುಜರಾತ್ ಗಲಭೆ ಸಂತ್ರಸ್ತ ಕುತುಬುದ್ದೀನ್ ಅನ್ಸಾರಿ ಫೋಟೋ ಬಳಸಿಕೊಂಡು ತೀಸ್ತಾ ಸೆಟಲ್ವಾಡ್ (Teesta Setalvad )ಹಣ ಸಂಗ್ರಹಿಸಿದ್ದಾರೆ. ಕುತುಬುದ್ದೀನ್ ಅನ್ಸಾರಿಗೆ ನೆರವು ನೀಡುವ ಭರವಸೆ ನೀಡಿ ಅವರನ್ನು ತಮಗೆ ಬೇಕಾದಂತೆ ಬಳಸಿಕೊಂಡರು. ಬಿಜೆಪಿ ನಾಯಕರ ವಿರುದ್ಧ ಸುಳ್ಳು ಕೇಸ್ ದಾಖಲಿಸಲು ಹಾಗೂ ಸಂಪೂರ್ಣ ಘಟನೆ ಬಿಜೆಪಿ ನಿರ್ದೇಶನದಂತೆ ನಡೆದಿದೆ ಎಂದು ಬಿಂಬಿಸಲು ಬಳಸಿಕೊಳ್ಳಲಾಗಿತ್ತು. ತೀಸ್ತಾ ಸೆಟಲ್ವಾಡ್ ಅಸಲಿಯತ್ತು ಅರಿತ ಕುತುಬುದ್ದೀನ್ ಅನ್ಸಾರಿ ಇವರಿಂದ ದೂರವಾದರು.

ಗುಜರಾತ್ ಗಲಭೆ ಸಂತ್ರಸ್ತರ ಹೆಸರಿನಲ್ಲಿ ವಿದೇಶಗಳಿಂದ ಭಾರಿ ಮೊತ್ತದ ಹಣ ಪಡೆದುಕೊಂಡಿದ್ದಾರೆ. ಈ ಹಣವನ್ನು ಸಂಚು, ಹಾಗೂ ಷಡ್ಯಂತ್ರ ರೂಪಿಸಲು ಬಳಸಿಕೊಂಡ ಕುರಿತು ಬ್ಯಾಂಕ್ ದಾಖಲೆಗಳನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದಾರೆ. 

 

2002 ಗುಜರಾತ್‌ ಹಿಂಸಾಚಾರದ ವೇಳೆ ನಡೆದಿದ್ದೇನು? ಸಂದರ್ಶನದಲ್ಲಿ ಮೌನ ಮುರಿದ ಗೃಹ ಸಚಿವ ಅಮಿತ್ ಶಾ!

ತೀಸ್ತಾ ಷಡ್ಯಂತ್ರದಿಂದ ಗುಜರಾತ್ ಬಿಜೆಪಿ ಸರ್ಕಾರ ಹಾಗೂ ನರೇಂದ್ರ ಮೋದಿ ಮೇಲೆ ಬಹುದೊಡ್ಡ ಆರೋಪ ಕೇಳಿಬಂದಿತ್ತು. ಗೋದ್ರಾ ಪ್ರಕರಣ ವಿದೇಶಗಳಲ್ಲೂ ಭಾರಿ ಸದ್ದು ಮಾಡಿತು. ಮೋದಿಯನ್ನು ಹಂತಕ ಎಂದು ಬಿಂಬಿಸುವ ಪ್ರಯತ್ನ ಕೂಡ ಯಶಸ್ವಿಯಾಗಿತ್ತು. ಸಂಚನ್ನು ಸರಿಯಾಗಿ ಕಾರ್ಯಗತಗೊಳಿಸಿದ ತೀಸ್ತಾ ಸೆಟಲ್ವಾಡ್‌ರನ್ನು ಕಾಂಗ್ರೆಸ್ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತು. ಇನ್ನು 2007ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತು.
 

 

click me!