BJP ಸರ್ಕಾರದಿಂದ ಶಿಲನ್ಯಾಸ ಅವಧಿಯೊಳಗೆ ಉದ್ಘಾಟನೆ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿ ಮೋದಿ ಭಾಷಣ!

By Suvarna NewsFirst Published Jul 16, 2022, 1:06 PM IST
Highlights

ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. 296 ಕಿಲೋಮೀಟರ್ ಉದ್ದನೆಯ ಮಾರ್ಗ ಇದಾಗಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ.  ವಿದೇಶಗಳಲ್ಲಿ ನೋಡುತ್ತಿದ್ದ ಅತ್ಯುತ್ತಮ ರಸ್ತೆ ಇದೀಗ ಭಾರತದ ಹಳ್ಳಿ ಹಳ್ಳಿಗಳಲ್ಲಿ ನೋಡಲು ಸಿಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಲಖನೌ(ಜು.16):  ಬಿಜೆಪಿ ಸರ್ಕಾರ ಯೋಜನೆಯ ಶಿಲಾನ್ಯಾಸ ಮಾಡುತ್ತೆ, ನಮ್ಮ ಸರ್ಕಾರವೇ ಯೋಜನೆಯ ಉದ್ಘಾಟನೆಯನ್ನು ಮಾಡುತ್ತದೆ. ಇದು ನಮ್ಮ ಸರ್ಕಾರದ ಕೆಲಸ ಮಾಡು ರೀತಿ ಎಂದು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಬಳಿಕ ಜನತೆಯನ್ನುದ್ದೇಶಿ ಹೇಳಿದ್ದಾರೆ.   ಬುಂದೇಲ್‌ಖಂಡ್‌ನ 296 ಕಿ.ಮೀ. ಉದ್ದದ ಮಾರ್ಗವನ್ನು ಮೋದಿ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಹಿಂದಿನ ಸರ್ಕಾರದಲ್ಲಿ ಪ್ರಮುಖ ಸಮಸ್ಯೆ ಇಲ್ಲಿನ ಕಾನೂನು. ರಾಜ್ಯದ ಅಭಿವೃದ್ಧಿ ಮರೀಚಿಕೆಯಾಗಿತ್ತು. ಇದರಿಂದ ಬೇಸತ್ತ ಉತ್ತರ ಪ್ರದೇಶ ಜನ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಈಗ ಜನರಿಗೆ ಯೋಗಿ ಸರ್ಕಾರ ತ್ವರಿತಗತಿಯಲ್ಲಿ ಅಭಿವೃದ್ಧಿಯ ಸವಿ ಸಿಗುತ್ತಿದೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಉತ್ತರ ಪ್ರದೇಶಕ್ಕೆ ಅತ್ಯುತ್ತಮ ಮೂಲಸೌಕರ್ಯ ಒದಗಿಸಲು ನಿರಂತರ ಪ್ರಯತ್ನ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಬಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯಿಂದ ಜನರಿಗೆ ಮಾತ್ರ ಉಪಯೋಗವಲ್ಲ. ಇದರ ಜೊತೆಗೆ ಯುಪಿ ಆರ್ಥಿಕ ವ್ಯವಸ್ಥೆಯೂ ಮತ್ತಷ್ಟು ಉತ್ತಮವಾಗಲಿದೆ. ವ್ಯಾಪಾರ ವಹಿವಾಟು, ಕೃಷಿ ಆಧಾರಿತ ವಸ್ತುಗಳ, ಉತ್ಪನ್ನಗಳನ್ನು ಸಾಗಿಸಲು, ಮಾರಾಟ ಮಾಡವುದು ಇನ್ನು ಸುಲಭವಾಗಿದೆ. ಬಂದೇಲ್‌ಖಂಡನ ಮೂಲೆ ಮೂಲೆಯನ್ನು ಅಭಿವೃದ್ಧಿ ಮಾಡಲಿದೆ. ಇಷ್ಟೇ ಅಲ್ಲ ಉದ್ಯೋಗ, ವ್ಯಾಪಾರ, ಕೃಷಿ , ಶಿಕ್ಷಣ ಸೇರಿ ಎಲ್ಲಾ ಕ್ಷೇತ್ರಕ್ಕೂ ಈ ಹೆದ್ದಾರಿ ನೆರವಾಗಲಿದೆ. 

Latest Videos

ನೆಹರು ಹಾಕಿದ್ದ ಅಡಿಗಲ್ಲು ಮೋದಿ ಕಾಲದಲ್ಲಿ ನೀರು: ನದಿಗೆ ಅಡ್ಡ ನಿಂತಿದ್ದು ಯಾರು?

ಈ ಹಿಂದೆ ಕೋಲ್ಕತಾ, ಬೆಂಗಳೂರು, ದೆಹಲಿಯಲ್ಲಿ ಮಾತ್ರ ಅತ್ಯುತ್ತಮ ರಸ್ತೆಗಳನ್ನು ನೋಡುತ್ತಿದ್ದೇವು. ಈ ಹಿಂದಿನ ಸರ್ಕಾರ ಕೂಡ ಅಷ್ಟಕ್ಕೆ ಸುಮ್ಮನಾಗಿತ್ತು. ಆದರೆ ಇದು ಮೋದಿ ಹಾಗೂ ಯೋಗಿ ಸರ್ಕಾರ. ಇಲ್ಲಿ ಪ್ರತಿ ಹಳ್ಳಿ ಹಳ್ಳಿಯೂ ಅಭಿವೃದ್ಧಿಯಾಗಲಿದೆ. ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇ, ಸುಲ್ತಾನಪುರ್, ಆಯೋಧ್ಯ, ಘಾಜಿಪುರ್, ಗೋರ್ಖಪುರ್, ಅಂಬೇಡ್ಕರ್, ಸಂತಕಬೀರ್ ನಗರ್ ಸೇರಿದಂತೆ ಉತ್ತರ ಪ್ರದೇಶ ಮೂಲೆ ಮೂಲೆಗೂ ಸಂಪರ್ಕ ಸಾಧ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದ ಪ್ರತಿ ಜಿಲ್ಲೆ ಹೊಸ ಉತ್ಸಾಹ, ಹೊಸ ಅಭಿವೃದ್ಧಿಯೊಂದಿಗೆ ಮುನ್ನಗ್ಗುತ್ತಿದೆ. ಇದೇ ಸಬ್ ಕಾ ವಿಕಾಸ್. ಇದಕ್ಕೆ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ವೇಗ ಹೆಚ್ಚಿದೆ.  ಇಷ್ಟೇ ಅಲ್ಲ ಭವಿಷ್ಯದಲ್ಲಿ ಉತ್ತರ ಪ್ರದೇಶದ ಮತ್ತಷ್ಟು ಜಿಲ್ಲೆ, ಹಳ್ಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಲ್ಲಿದೆ.  

ವೇದಿಕೆಗೆ ಬರುವ ಮೊದಲು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇ ಕುರಿತು ವಿಡಿಯೋ ನೋಡುತ್ತಿದ್ದೆ. ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ಹಲವು ವೀಕ್ಷಣಾ ಸ್ಥಳಗಳನ್ನು ಗಮನಿಸಿದೆ. ನಾವು ವಿದೇಶದಲ್ಲಿ ಈ ರೀತಿಯ ವ್ಯವಸ್ಥೆ ನೋಡುತ್ತಿದೆ.  ನಾನು ಯೋಗಿ ಸರ್ಕಾರವನ್ನು ಮನವಿ ಮಾಡುತ್ತೇನೆ, ಈ ಹೆದ್ದಾರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕು ಎಂದರು. 

ಪ್ರಧಾನಿ ಮೋದಿ ಮಾತನಾಡಿಸಲು ಓಡೋಡಿ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ವಿಡಿಯೋ ವೈರಲ್!

ಡಬಲ್ ಎಂಜಿನ್ ಸರ್ಕಾರದಿಂದ ಉತ್ತರ ಪ್ರದೇಶ ಅಧುನಿಕತೆಯ ರೂಪ ಪಡೆದುಕೊಳ್ಳುತ್ತಿದೆ. ಈ ಹಿಂದೆ ಭಾರತದಲ್ಲಿ ರೈಲು ಉತ್ಪಾದನೆಯಾಗುತ್ತಿರಲಿಲ್ಲ. ಕೇವಲ ಬೋಗಿಗಳಿಗೆ ಪೈಂಟ್ ಹೊಡೆಯುವ ಕೆಲಸ ಮಾತ್ರವಿತ್ತ. ಇದೀಗ ಉತ್ತರ ಪ್ರದೇಶ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ರೈಲು ಉತ್ಪಾದನಾ ಘಟನಾ, ಬೋಗಿ, ಎಂಜಿನ್, ಹಳಿ ಸೇರಿದಂತೆ ಎಲ್ಲವನ್ನೂ ಭಾರತವೇ ಉತ್ಪಾದಿಸುತ್ತಿದೆ. ಬುಂದೇಲ್‌ಖಂಡ್ ಯುವ ಪ್ರತಿಭೆಗಳನ್ನು ಹೊಂದಿದ ಪ್ರದೇಶ. ಕ್ರೀಡೆ, ಶಿಕ್ಷಣ, ಉದ್ಯೋಗ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಕ್ಕೆ ಈ ಎಕ್ಸ್‌ಪ್ರೆಸ್‌ವೇ ನೆರವಾಗಲಿದೆ ಎಂದಿದ್ದಾರೆ. 

ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸ ಮಾಡುವ ವಿಧಾನ ಬೇರೆ. ನಾವು ಯೋಜನೆ ಘೋಷಣೆ ಮಾಡಿ ಶಿಲನ್ಯಾಸ ಮಾಡುತ್ತೇವೆ. ನಮ್ಮದೇ ಸರ್ಕಾರ ಅದನ್ನು ಉದ್ಘಾಟಿಸುತ್ತದೆ. ಅಭಿವೃದ್ಧಿಗೆ ಹೊಸ ವೇಗ ನೀಡಿದ್ದೇವೆ  ಎದು ಮೋದಿ ಹೇಳಿದ್ದಾರೆ.  ಅಜಾದಿಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿ ನಾವಿದ್ದೇವೆ. ಹಲವರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಕ್ಕಾಗಿ ಪ್ರತಿ ಹಳ್ಳಿ ಹಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ನಾವೆಲ್ಲಾ ಭಾಗಿಯಾಗಿ ನಮ್ಮ ಸ್ವಾತಂತ್ರ್ಯವೀರರ ಬಲಿದಾನಗಳನ್ನು ಸ್ಮರಿಸೋಣ, ಅವರಿಗೆ ಗೌರವ ನಮನ ಸಲ್ಲಿಸೋಣ ಎಂದು ಮೋದಿ ಹೇಳಿದ್ದಾರೆ. ಆಗಸ್ಟ್ ಸಂಪೂರ್ಣ ತಿಂಗಳು ಪ್ರತಿ ಹಳ್ಳಿ ಹಳ್ಳಿಯಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಳ್ಳಿಯ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಮೋದಿ ಮನವಿ ಮಾಡಿದ್ದಾರೆ. 

 

Bundelkhand Expressway will ensure seamless connectivity and further economic progress in the region. https://t.co/bwQz2ZBGuZ

— Narendra Modi (@narendramodi)

 

ಬುಂದೇಲ್‌ಖಂಡ್‌ನ ಮಾರ್ಗ ಉದ್ಘಾಟನೆಯಿಂದ 1225 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ ವೇಗಳು ಬಳಕೆಗೆ ಸಿಕ್ಕದಂತಾಗಿದೆ.. 1974 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ವಿವಿಧ ಹಂತದಲ್ಲಿವೆ. ಉತ್ತರಪ್ರದೇಶದಲ್ಲಿ ಈಗಾಗಲೇ ಐದು ಎಕ್ಸ್‌ಪ್ರೆಸ್‌ ವೇಗಳು ಇವೆ. ಗ್ರೇಟರ್‌ ನೋಯ್ಡಾದಿಂದ ಆಗ್ರಾ ಸಂಪರ್ಕಿಸುವ 165 ಕಿ.ಮೀ. ಉದ್ದದ ಯಮುನಾ ಎಕ್ಸ್‌ಪ್ರೆಸ್‌ ವೇ, ನೋಯ್ಡಾ- ಗ್ರೇಟರ್‌ ನೋಯ್ಡಾ ಎಕ್ಸ್‌ಪ್ರೆಸ್‌ ವೇ (25 ಕಿ.ಮೀ.), ಆಗ್ರಾ- ಲಖನೌ ಎಕ್ಸ್‌ಪ್ರೆಸ್‌ ವೇ (302 ಕಿ.ಮೀ.), ದೆಹಲಿ- ಮೇರಠ್‌ ಎಕ್ಸ್‌ಪ್ರೆಸ್‌ ವೇ (96 ಕಿ.ಮೀ.) ಹಾಗೂ ಲಖನೌದಿಂದ ಗಾಜಿಪುರವರೆಗಿನ ಪೂರ್ವಾಂಚಲ್‌ ಎಕ್ಸ್‌ಪ್ರೆಸ್‌ ವೇ (341 ಕಿ.ಮೀ.)

click me!