
ನವದೆಹಲಿ(ಮಾ.02): ಗುಜರಾತ್ ಜನತೆ ಬಿಜೆಪಿ ಜೊತೆಗಿದ್ದಾರೆ. ಉತ್ತಮ ಆಡಳಿತ, ಉತ್ತಮ ಸರ್ಕಾರಕ್ಕೆ ಪರವಾಗಿದ್ದಾರೆ. ಇದು ಪ್ರದಾನಿ ನರೇಂದ್ರ ಮೋದಿ ಗುಜರಾತ್ ಚುನಾವಣೆ ಫಲಿತಾಂಶ ಕುರಿತು ಮಾಡಿರುವ ಟ್ವೀಟ್. ಗುಜರಾತ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 2015ಕ್ಕೆ ಹೋಲಿಸಿದರೆ, ಈ ಬಾರಿ ಮತ್ತಷ್ಟು ಅತ್ಯುತ್ತಮ ಪ್ರದರ್ಶನ ನೀಡಿದೆ.
ಗುಜರಾತ್‌ನಲ್ಲಿ ಕಾಂಗ್ರೆಸ್ ಧೂಳೀಪಟ; ಆದರೂ ರಾಹುಲ್ ಗಾಂಧಿ ಒಡೆದು ಆಳುವ ನೀತಿ ಬಿಟ್ಟಿಲ್ಲ ಎಂದ ನಡ್ಡಾ!.
ಗುಜರಾತ್‌ನಾದ್ಯಂತ ನಗರ ಪಾಲಿಕಾ, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಫಲಿತಾಂಶಗಳು ಸ್ಪಷ್ಟವಾದ ಸಂದೇಶವನ್ನು ನೀಡುತ್ತಿದೆ.ಗುಜರಾತ್ ಜನತೆ ಬಿಜೆಪಿ, ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಜೊತೆಗಿದ್ದಾರೆ ಅನ್ನೋದಕ್ಕೆ ಈ ಫಲಿತಾಂಶವೇ ಸಾಕ್ಷಿ. ಬಿಜೆಪಿ ಮೇಲಿಟ್ಟಿರುವ ಅಚಲ ನಂಬಿಕೆ ಮತ್ತು ವಾತ್ಸಲ್ಯಕ್ಕಾಗಿ ನಾನು ಗುಜರಾತ್ ಜನತಗೆ ತಲೆಬಾಗುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇತ್ತೀಚಿಗೆ ದೊರೆತ ಪುರಸಭೆಗಳ ಫಲಿತಾಂಶಗಳ ಪ್ರಕಾರ, ಬಿಜೆಪಿ 1,182 ಸ್ಥಾನಗಳನ್ನು ವಶಪಡಿಸಿಕೊಂಡರೆ, ನಂತರದ ಸ್ಥಾನದಲ್ಲಿ ಕಾಂಗ್ರೆಸ್ (214), ಸ್ವತಂತ್ರರು (73), ಆಮ್ ಆದ್ಮಿ ಪಕ್ಷ (2), ಬಹುಜನ ಸಮಾಜವಾದಿ ಪಕ್ಷ (2), ಮತ್ತು ಇತರರು (10) ). ಸ್ಥಾನ ಗೆದ್ದುಕೊಂಡಿದ್ದಾರೆ
171 ನಾಯಕರು ಠೇವಣಿ ಕಳೆದುಕೊಂಡ ಖುಷಿಗೆ ಕೇಜ್ರಿವಾಲ್ ರೋಡ್‌ಶೋ; ವ್ಯಂಗ್ಯವಾಡಿದ BJP!
ಗುಜರಾತ್‌ನಲ್ಲಿ ನಗರ ಪಾಲಿಕೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಸ್ಥಳೀಯ ಚುನಾವಣೆಯಲ್ಲಿ ಒಟ್ಟು 8474 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಸದ್ಯದ ವರದಿ ಪ್ರಕಾರ ಬಿಜೆಪಿ ಒಟ್ಟು 2085 ಸ್ಥಾನಗಳನ್ನು ಗೆದ್ದುಕೊಂಡಿದೆ. ಇನ್ನು ಕಾಂಗ್ರೆಸ್ 602 ಸ್ಥಾನ ಗೆದ್ದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ