'ಕಾರಣವಿಲ್ಲದೆ ಪರೀಕ್ಷೆ ಮುಂದಕ್ಕೆ ಹಾಕುವ ಸರ್ಕಾರ, ಸಿಹಿತಿಂಡಿ ಅಂಗಡಿ ಇಟ್ಟ ಯುವಕರು'

By Suvarna NewsFirst Published Nov 15, 2020, 11:01 PM IST
Highlights

ಕೊರೋನಾ ಸಂದರ್ಭದಲ್ಲಿಯೂ ಯುವಕರ ಸ್ಪಷ್ಟ ಗುರಿ/ ಸೀಸನಲ್  ಬಿಜಿನಸ್ ಆರಂಭಿಸಿದ ಹುಡುಗರು/ ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ತಯಾರಿ/ ಕಾರಣವಿಲ್ಲದೆ ಕೆಲ ಸಂದರ್ಭ 

ಗುಜರಾತ್( ನ.  15) ಎಂ ಫಿಲ್ ವಿದ್ಯಾರ್ಥಿ ನಿಮೆಶ್ ಪರ್ಮಾರ್ (27) ಸರ್ಕಾರಿ ಉದ್ಯೋಗ ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.  ಪದವೀಧರ ಆಶಿಶ್ ಸೋಲಂಕಿ (25) ಇನ್ಸ್ ಪೆಕ್ಟರ್ ಆಗಲು ಬಯಸಿದ್ದಾರೆ. 31 ವರ್ಷದ ತರುಣ್ ಪರ್ಮಾರ್ ಅವರು ಸಹ ಸರ್ಕಾರಿ ಉದ್ಯೋಗದ ಆಕಾಂಕ್ಷಿ, ಕ್ರುನಾಲ್ ರಾಥೋಡ್ (24) ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದು  ಒಂದು ಸಣ್ಣ ಸಂಸ್ಥೆಯನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದಾರೆ...

ಆದರೆ  ಇದೆಲ್ಲ  ಸಾಕಾಗಲ್ಲ. ಯುವಕರು ಜೈ ಭೀಮ್ ಶಿಕ್ಷಿತ್ ಯುವ ರೋಜಗಾರ್ ದ್ವಾರಾ ಸಂಚಲಿತ್' ಅಡಿಯಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಯಲ್ಲಿ ತೊಡಗಿದ್ದರು.  ಹಬ್ಬದ ಸಂದರ್ಭದಲ್ಲಿ ಉದ್ಯಮ ಒಂದನ್ನು ಆರಂಭಿಸಿದರೆ ಹೇಗೆ ಎಂಬ ಆಲೋಚನೆ ಅವರ ತಲೆಯಲ್ಲಿ ಬಂದಿತು. ತಮ್ಮ ವಿದ್ಯಾಭ್ಯಾಸಾದ ನಿರ್ವಹಣೆ ವೆಚ್ಚ  ನಿರ್ವಹಿಸಲು ಸೀಸನಲ್ ಬಿಜಿನಸ್ ಆರಂಭಿಸಿದರು. ಈ ದೀಪಾವಳಿಗೆ  ನಾಲ್ವರು ಯುವಕರು ಸೇರಿ ಸಿಹಿ ತಿಂಡಿಯ ಅಂಗಡಿ ಹಾಕಿದ್ದಾರೆ.

ನಾವೆಲ್ಲರೂ ಕಾಂಪಿಟೇಟಿವ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಲೇ ಬಂದಿದ್ದೇವೆ. ಪೇಪರ್ ಲೀಕ್, ಕೊರೋನಾ ಮುಂತಾದ ಕಾರಣಕ್ಕೆ ಪರೀಕ್ಷೆ ಮುಂದಕ್ಕೆ ಹಾಕಲಾಗುತ್ತಿದೆ. ನಾವು  ನಿರ್ವಹಣೆಯೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕಿದ್ದು ಈ ಹೊಸ ಆಲೋಚನೆ ಮಾಡಿದೆವು ಎಂದು ಹೇಳುತ್ತಾರೆ.

ನಾಲ್ಕು ಮಕ್ಕಳ ಹೊಂದಲು ಹೇಳಿದರೆ ಏನ್ ಮಾಡ್ತೀಯಾ? ಐಎಎಸ್ ಪ್ರಶ್ನೆ

ಸರ್ಕಾರದ ಕೆಲ ಗೊಂದಲಕಾರಿ ನಿಯಮಗಳಿಂದಲೂ ನಮಗೆ ತೊಂದರೆಯಾಗಿದೆ. ಕಾರಣವಿಲ್ಲದೆ ಪರೀಕ್ಷೆ ರದ್ದು ಮಾಡಿದ್ದು ಇದೆ.  ಕೋಚಿಂಗ್ ಕ್ಲಾಸ್ ಗೆ ಹಣ ನೀಡಲೇಬೇಕಿದೆ. ಗ್ರಂಥಾಲಯ ವೆಚ್ಚ ಬರಿಸಬೇಕಿದೆ. ಹಾಗಾಗಿ ಈ ಎಲ್ಲ ಕಾರಣಕ್ಕೆ ಇಂಥ ಐಡಿಯಾ ಮಾಡಿದೆವು ಎಂದು ತಿಳಿಸುತ್ತಾರೆ.

ಸಿಹಿತಿಂಡಿಯ ಅಂಗಡಿಯಿಂದ ನಾಲ್ಕರಿಂದ ಐದು ಸಾವಿರ ಲಾಭ ಸಿಗಲಿದೆ ಎಂಬುದು ಯುವಕರ ಲೆಕ್ಕಾಚಾರ. ಆದರೆ ಕೊರೋನಾ ಇಲ್ಲಿಯೂ ಪರಿಣಾಮ ಬೀರಿದೆ. ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ.

ಒಟ್ಟಿನಲ್ಲಿ ಜೀವನ ನಿರ್ವಹಣೆಯೊಂದಿಗೆ ಕೊರೋನಾ ಸಂದರ್ಭದಲ್ಲಿಯೂ ಯುವಕರು ತಮ್ಮ ಗುರಿಯ ಹಿಂದೆ ಇದ್ದಾರೆ. ಅವರಿಗೊಂದು ಗುಡ್ ಲಕ್ ಹೇಳೋಣ. 

click me!