2014ರ ಬಳಿಕ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಭಾರತ ಅತ್ಯುತ್ತಮ ಸಂಬಂಧ, ಪ್ರಧಾನಿ ಮೋದಿ

Published : Dec 03, 2022, 08:03 PM ISTUpdated : Dec 03, 2022, 08:06 PM IST
2014ರ ಬಳಿಕ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಭಾರತ ಅತ್ಯುತ್ತಮ ಸಂಬಂಧ, ಪ್ರಧಾನಿ ಮೋದಿ

ಸಾರಾಂಶ

ಸೌದಿ ಅರೆಬಿಯಾ ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಭಾರತದ ಸಂಬಂಧ ಅತ್ಯುತ್ತಮವಾಗಿದೆ. ವಿದೇಶಗಳಲ್ಲಿ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಈ ಅವಧಿಯಲ್ಲಿ ಇಸ್ಲಾಮಿಕ್ ದೇಶದಲ್ಲಿ ಹಲವು ಹಿಂದೂ ದೇವಸ್ಥಾನಗಳು ಆರಂಭಗೊಂಡಿದೆ. 

ಅಹಮ್ಮದಾಬಾದ್(ಡಿ.03):  ಯುಪಿಎ ಸರ್ಕಾರ ಮಣಿಸಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ವಿಶೇಷವಾಗಿ ವಿದೇಶಗಳ ಜೊತೆಗಿನ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಆಗಮನದ ಬಳಿಕ ಬದಲಾಗಿದೆ. ಇದೀಗ ಗುಜರಾತ್‌ನ 2ನೇ ಹಂತದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಇಸ್ಲಾಮಿಕ್ ರಾಷ್ಟ್ರಗಳ ಜೊತೆಗಿನ ಭಾರತದ ಸಂಬಂಧ ಕುರಿತು ಮಾತನಾಡಿದ್ದಾರೆ. 2014ರ ಬಳಿಕ ಸೌದಿ ಅರೆಬಿಯಾ, ಬಹ್ರೇನ್ ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಭಾರತ ಅತ್ಯುತ್ತಮ ಸಂಬಂಧ ಹೊಂದಿದೆ ಎಂದು ಮೋದಿ ಹೇಳಿದ್ದಾರೆ. ಯುಎಇ, ಸೌದಿ ಅರೆಬಿಯಾ, ಬಹ್ರೇನ್ ರಾಷ್ಟ್ರಗಳ ಅತ್ಯುನ್ನತ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದೆ. ಇದು ನನಗೆ ಹಾಗೂ ಓರ್ವ ಗುಜರಾತಿಗೆ ಹೆಮ್ಮೆಯ ವಿಚಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸೌದಿ ಅರೆಬಿಯಾದ ವಿದ್ಯಾರ್ಥಿಗಳಿಗೆ ಯೋಗ ಅಧಿಕೃತ ಪಠ್ಯವಾಗಿದೆ. ಬಹ್ರೇನ್, ಅಬು ದಾಬಿಯಲ್ಲಿ ಹಿಂದೂ ದೇಗುಲಗಳು ತಲೆ ಎತ್ತಿ ನಿಂತಿವೆ. ಭಾರತದ ಆರ್ಥಿಕತೆ ವಿಶ್ವದಲ್ಲಿ 6ನೇ ಸ್ಥಾನ ಪಡೆದಿದೆ. 2014ಕ್ಕೂ ಮೊದಲು ಕಾಂಗ್ರೆಸ್ ಆಡಳಿತದಲ್ಲಿ 10ನೇ ಸ್ಥಾನದಲ್ಲಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿ ತವರಲ್ಲಿ ರಾವಣ ಸಂಗ್ರಾಮ: 'ನಮೋ' ಸಮರ ಘೋಷದ ಸಂದೇಶವೇನು?

ಮೋದಿ ಭರ್ಜರಿ 50 ಕಿ.ಮೀ. ರೋಡ್‌ ಶೋ!
ಒಂದು ಕಡೆ ಗುಜರಾತ್‌ನಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿರುವಾಗ, 2ನೇ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭರ್ಜರಿ 50 ಕಿ.ಮೀ. ರೋಡ್‌ ಶೋ ನಡೆಸಿದರು. ರೋಡ್‌ ಶೋ 16 ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಿದ್ದು, ಚುನಾವಣೆಯ ಮೇಲೆ ಭಾರಿ ಪ್ರಭಾವ ಉಂಟು ಮಾಡಿ ಬಿಜೆಪಿ ಪರ ಅಲೆ ಸೃಷ್ಟಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಈ 16 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ಘಟ್ಲೋಡಿಯಾ ಕ್ಷೇತ್ರವೂ ಇದೆ.

ಹೂವಿನಿಂದ ಅಲಂಕೃತವಾದ ತೆರೆದ ವಾಹನದ ಮೇಲೆ ಕೇಸರಿ ಟೋಪಿ ಧರಿಸಿ ನಿಂತ ಮೋದಿ ರೋಡ್‌ ಶೋ ನರೋಡಾಗಾಂನಿಂದ ಮಧ್ಯಾಹ್ನ 3.30ಕ್ಕೆ ಆರಂಭವಾಗಿ ಸಂಜೆ 7 ಗಂಟೆ ಸುಮಾರಿಗೆ ಗಾಂಧಿನಗರ ದಕ್ಷಿಣ ಕ್ಷೇತ್ರದಲ್ಲಿ ಮುಕ್ತಾಯಗೊಂಡಿತು. 50 ಕಿ.ಮೀ. ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ಮೋದಿ ಕೈಬೀಸಿದರೆ, ಜನರು ಭಾರಿ ಉತ್ಸಾಹದಿಂದ ಬಿಜೆಪಿ ಹಾಗೂ ಮೋದಿಗೆ ಜೈಕಾರ ಹಾಕಿ ಅವರ ಕೈ ಮುಟ್ಟಲು ಯತ್ನಿಸುತ್ತಿದ್ದುದು ಕಂಡುಬಂತು.

ಗುಜರಾತ್‌ನಲ್ಲಿ 2ನೇ ಹಂತದ ಮತದಾನದ ಪ್ರಚಾರ ಅಂತ್ಯ
ಗುಜರಾತಿನ 2ನೇ ಹಂತದ ಚುನಾವಣೆ ಸೋಮವಾರ ನಡೆಯಲಿದ್ದು, ಶನಿವಾರ ಅಬ್ಬರದ ಪ್ರಚಾರ ಅಂತ್ಯವಾಗಿದೆ. ಸೋಮವಾರ ಮತದಾನ ನಡೆಯಲಿದೆ. 2ನೇ ಹಂತದಲ್ಲಿ ಒಟ್ಟು 182 ಸ್ಥಾನಗಳ ಪೈಕಿ 93 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಸೇರಿ 60ಕ್ಕೂ ಹೆಚ್ಚು ರಾಜಕೀಯ ಪಕ್ಷಕ್ಕೆ ಸೇರಿದ 833 ಜನರು ಚುನಾವಣಾ ಕಣದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮತದಾರರ ಓಲೈಕೆಗಾಗಿ ಪಕ್ಷಗಳು ಕೊನೆಯ ಬಾರಿ ಅಬ್ಬರದ ಪ್ರಚಾರ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು