ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ; ಗುಜರಾತ್ ಕೋರ್ಟ್‌ ತೀರ್ಪು

Published : Jan 30, 2023, 07:42 PM ISTUpdated : Jan 30, 2023, 08:00 PM IST
ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ; ಗುಜರಾತ್ ಕೋರ್ಟ್‌ ತೀರ್ಪು

ಸಾರಾಂಶ

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಸಾರಾಂ ಬಾಪು ಪತ್ನಿ ಸೇರಿದಂತೆ ಇತರ ಆರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಗಾಂಧಿನಗರ (ಜನವರಿ 30, 2023) : 2013 ರಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣವೊಂದರಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ ಎಂದು ಗುಜರಾತ್ ಕೋರ್ಟ್‌ ತೀರ್ಪು ನೀಡಿದೆ. ಮಹಿಳಾ ಭಕ್ತೆಯೊಬ್ಬರನ್ನು ಅತ್ಯಾಚಾರ ಮಾಡಿರುವ 10 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅಸಾರಾಂ ಬಾಪು ದೋಷಿ ಎಂದು ಗುಜರಾತ್‌ ಸೆಷನ್ಸ್‌ ನ್ಯಾಯಾಲಯ ಡಿ.ಕೆ. ಸೋನಿ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ನಾಳೆ (ಜನವರಿ 31) ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 10 ವರ್ಷಗಳ ಹಿಂದೆ ಅಹಮದಾಬಾದ್‌ನ ಮೊಟೆರಾದಲ್ಲಿರುವ ಅಸಾರಾಂ ಬಾಪು ಆಶ್ರಮದಲ್ಲಿದ್ದಾಗ ಸೂರತ್ ಮೂಲದ ಮಹಿಳೆಯೊಬ್ಬರು ಸ್ವಯಂಘೋಷಿತ ದೇವಮಾನವ ತಮ್ಮ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರು.

ಈ ಪ್ರಕರಣದಲ್ಲಿ ಅಸಾರಾಂ ಅವರ ಪುತ್ರ ನಾರಾಯಣ ಸಾಯಿ ಕೂಡ ಆರೋಪಿಯಾಗಿದ್ದರು. ಅಸಾರಾಂ ಅವರ ಪತ್ನಿ ಲಕ್ಷ್ಮೀ, ಮಗಳು ಭಾರತಿ ಮತ್ತು ನಾಲ್ವರು ಮಹಿಳಾ ಅನುಯಾಯಿಗಳಾದ ಧ್ರುವಬೆನ್, ನಿರ್ಮಲಾ, ಜಸ್ಸಿ ಮತ್ತು ಮೀರಾ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಆದರೆ,  ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ (Lack of Evidence) ಅಸಾರಾಂ ಬಾಪು (Asaram Bapu) ಪತ್ನಿ (Wife) ಸೇರಿದಂತೆ ಇತರ ಆರು ಆರೋಪಿಗಳನ್ನು (Accused) ನ್ಯಾಯಾಲಯ (Court) ಖುಲಾಸೆಗೊಳಿಸಿದೆ. ಅಹಮದಾಬಾದ್‌ನ (Ahmedabad) ಚಂದ್‌ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನ (FIR) ಪ್ರಕಾರ, ಅಸಾರಾಂ ಬಾಪು 2001 ರಿಂದ 2006 ರವರೆಗೆ ನಗರದ ಹೊರವಲಯದಲ್ಲಿರುವ ತನ್ನ ಆಶ್ರಮದಲ್ಲಿ ಮಹಿಳೆಯ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಇದನ್ನು ಓದಿ: ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆ!

ನ್ಯಾಯಾಲಯವು ಪ್ರಾಸಿಕ್ಯೂಷನ್ ಪ್ರಕರಣವನ್ನು ಸ್ವೀಕರಿಸಿದೆ ಮತ್ತು ಸೆಕ್ಷನ್ 376 2 (ಸಿ) (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು) ಮತ್ತು ಅಕ್ರಮ ಬಂಧನಕ್ಕಾಗಿ ಭಾರತೀಯ ದಂಡ ಸಂಹಿತೆಯ ಇತರ ನಿಬಂಧನೆಗಳ ಅಡಿಯಲ್ಲಿ ಅಸಾರಾಂನನ್ನು ದೋಷಿ ಎಂದು ತೀರ್ಪು ನೀಡಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್‌ಸಿ ಕೊಡೇಕರ್ ಸೋಮವಾರ ಹೇಳಿದರು. ಈ ಮಧ್ಯೆ, ವಿವಾದಿತ ಹಾಗೂ ಸ್ವಯಂಘೋಷಿತ ದೇವಮಾನವ ಸದ್ಯ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೋಧಪುರದ ಜೈಲಿನಲ್ಲಿದ್ದಾರೆ.

ಸೂರತ್ ಮೂಲದ ಮಹಿಳೆಯೊಬ್ಬರು ಅಸಾರಾಂ ಬಾಪು ಮತ್ತು ಇತರ 7 ಜನರ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ಬಂಧನದ ಪ್ರಕರಣವನ್ನು ದಾಖಲಿಸಿದ್ದರು. ಈ ಪೈಕಿ ಒಬ್ಬರು ವಿಚಾರಣೆ ಬಾಕಿ ಇರುವಾಗಲೇ ಅಕ್ಟೋಬರ್ 2013 ರಲ್ಲಿ ಮೃತಪಟ್ಟಿದ್ದರು. ಬಳಿಕ ಜುಲೈ 2014 ರಲ್ಲಿ ಗುಜರಾತ್ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ: ಅಸಾರಾಂಗೆ ಮತ್ತೆ ಜೈಲೇ ಗತಿ

2018 ರಲ್ಲಿ, ಜೋಧಪುರದ ವಿಚಾರಣಾ ನ್ಯಾಯಾಲಯವು ಪ್ರತ್ಯೇಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿತ್ತು. 2013ರಲ್ಲಿ ಜೋಧಪುರದ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಸಾರಾಂ ಬಾಪು ತಪ್ಪಿತಸ್ಥನೆಂದು ಸಾಬೀತಾಗಿದೆ.

ಆ ಸಮಯದಲ್ಲಿ, 77 ವರ್ಷ ವಯಸ್ಸಿನ ದೇವಮಾನವನನ್ನು ಐಪಿಸಿಯ ಸೆಕ್ಷನ್ 376, ಲೈಂಗಿಕ ಅಪರಾಧಗಳ (ಪೋಕ್ಸೋ) ಕಾಯ್ದೆಯ ಅಡಿಯಲ್ಲಿ ಮಕ್ಕಳ ರಕ್ಷಣೆ ಮತ್ತು ಬಾಲಾಪರಾಧಿ ನ್ಯಾಯ (ಜೆಜೆ) ಕಾಯ್ದೆಯ ಅಡಿಯಲ್ಲಿ ದೋಷಿ ಎಂದು ಘೋಷಿಸಲಾಯಿತು. ಅಸಾರಾಂ ಬಾಪು ಅವರನ್ನು ಇಂದೋರ್‌ನಿಂದ 2013ರ ಆಗಸ್ಟ್‌ನಲ್ಲಿ ಬಂಧಿಸಿ, 2013ರ ಸೆಪ್ಟೆಂಬರ್‌ನಲ್ಲಿ ಜೋಧಪುರಕ್ಕೆ ಕರೆತರಲಾಗಿತ್ತು.

ಇದನ್ನು ಓದಿ: ಅಸಾರಾಂ ಬಾಪು ಪ್ರಕರಣ ವಿಳಂಬ; ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ