ಮದುವೆಗೂ ಮೊದಲು 10 ಅಸಾಮಾನ್ಯ ಬೇಡಿಕೆ ಇಟ್ಟ ವರ: ನೋ ನೋ ಎಂದ ಹೆಣ್ಣು ಮಕ್ಕಳು

Published : Nov 03, 2025, 12:46 PM IST
Grooms unusual Demand

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ವರನೊಬ್ಬ ವಿವಾಹಕ್ಕೆ 10 ಬೇಡಿಕೆ ಇಟ್ಟಿದ್ದು ವೈರಲ್ ಆಗಿವೆ. ಪ್ರೀ-ವೆಡ್ಡಿಂಗ್ ಶೂಟ್ ಇಲ್ಲ, ವಧು ಸೀರೆಯುಡಬೇಕು ಹೀಗೆ 10 ಬೇಡಿಕೆಗಳನ್ನು ಆತ ಮುಂದಿಟ್ಟಿದ್ದಾನೆ. ಆದರೆ ಆತನ ಬೇಡಿಕೆಗಳನ್ನು ಹೆಣ್ಣು ಮಕ್ಕಳು ನಿರಾಕರಿಸಿದ್ದಾರೆ. ಆದರೆ ಕೆಲ ಪುರುಷರು ಸ್ವಾಗತಿಸಿದ್ದಾರೆ. 

ವಿವಾಹವಾಗುವುದಕ್ಕೆ 10 ವಿಭಿನ್ನ ಬೇಡಿಕೆ ಇಟ್ಟ ವರ

ವಿವಾಹವಾಗಲು ಹೊರಟಾಗ ಅನೇಕರಿಗೆ ಹಲವು ಆಸೆ ಆಕಾಂಕ್ಷೆಗಳಿರುತ್ತವೆ. ಹುಡುಗ ಹಾಗೆಯೇ ಇರಬೇಕು ಹೀಗೆಯೇ ಇರಬೇಕು,ನಾವು ಹೇಳಿದ ಮಾತು ಕೇಳಬೇಕು, ಲೇಡಿ ಫ್ರೆಂಡ್ ಇರಬಾರದು ಹುಡುಗನ ಅಪ್ಪ ಅಮ್ಮ ಜೊತೆಗೆ ಇರಬಾರದು. ತಿಂಗಳಿಗೆ ವೇತನ ಲಕ್ಷಕ್ಕಿಂತ ಮೇಲಿರಬೇಕು. ಪಾರ್ಟಿ ಪಬ್‌ಗೆ ಕರೆದೊಯ್ಯಬೇಕು, ಕಾರು ಬಂಗ್ಲೆ ಇರಬೇಕು. ಮನೆ ಕೆಲಸಕ್ಕೆ ಕೆಲಸದವರು ಬೇಕು ಹೀಗೆ ಅವರವರ ಯೋಗ ಯೋಗ್ಯತೆ ಆಸೆಗೆ ತಕ್ಕಂತೆ ಹೆಣ್ಮಕ್ಕಳು ಬೇಡಿಕೆ ಇಟ್ಟರೆ ಗಂಡು ಮಕ್ಕಳದ್ದು ಮತ್ತೊಂದು ತರದ ಬೇಡಿಕೆ, ಹುಡುಗಿ ತೆಳ್ಳಗೆ ಬೆಳ್ಳಗೆ ಚೆನ್ನಾಗಿರಬೇಕು. ಮನೆ ಕೆಲಸ ಗೊತ್ತಿರಬೇಕು. ಉದ್ಯೋಗದಲ್ಲಿರಬೇಕು, ಅತ್ತೆ ಮಾವನ ಚೆನ್ನಾಗಿ ನೋಡಿಕೊಳ್ಳಬೇಕು. ಹೀಗೆ ಒಬ್ಬೊಬ್ಬರದ್ದು ಒಂದೊಂದು ಬೇಡಿಕೆ. ಆದರೆ ಇಲ್ಲೊಬ್ಬ ವರನ ಅಸಾಮಾನ್ಯ ಎನಿಸಿರುವ ಬೇಡಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುವ ಜೊತೆಗೆ ಜನರ ಮೆಚ್ಚುಗೆಗೂ ಪಾತ್ರವಾಗಿದೆ. ಹಾಗಿದ್ರೆ ಆತನ ಬೇಡಿಕೆ ಏನು ಅಂತ ನೋಡೋಣ...

ಬೇಡಿಕೆ ಲಿಸ್ಟ್ ಇಲ್ಲಿದೆ  ನೋಡಿ

1 ವಿವಾಹ ಪೂರ್ವ ಫೋಟೋ ಶೂಟ್ ಅಥವಾ ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ನಡೆಸಲಾಗುವುದಿಲ್ಲ.

2 ವಧು ಸೀರೆ ಉಡಬೇಕು, ಲೆಹೆಂಗಾ ಅಲ್ಲ.

3 ಮದುವೆಯ ಸಮಯದಲ್ಲಿ ಜೋರಾಗಿ, ಅಸಭ್ಯ ಸಂಗೀತದ ಬದಲಿಗೆ, ಮೃದುವಾದ ವಾದ್ಯ ಸಂಗೀತವನ್ನು ಮಾತ್ರ ನುಡಿಸಲು ಅವಕಾಶ.

4 ಹೂವಿನ ಹಾರ ಬದಲಾವಣೆ (ವರಮಾಲೆ ವಿನಿಮಯ) ಸಮಯದಲ್ಲಿ, ವಧು ವರರು ಮಾತ್ರ ವೇದಿಕೆಯಲ್ಲಿ ಇರಬೇಕು.

5 ಹೂವಿನ ಹಾರ ಬದಲಾವಣೆ ಸಮಯದಲ್ಲಿ ವಧು ಅಥವಾ ವರನನ್ನು ಮೇಲೆತ್ತುವಂತಿಲ್ಲ. ಆ ರೀತಿ ಬಯಸುವ ಯಾರೇ ಆದರೂ ಸಮಾರಂಭದಿಂದ ಹೊರಹೋಗುವಂತೆ ಕೇಳಲಾಗುತ್ತದೆ.

6 ಪುರೋಹಿತರು ವಿವಾಹ ವಿಧಿಗಳನ್ನು ಪ್ರಾರಂಭಿಸಿದ ನಂತರ, ಅವರಿಗೆ ಯಾರೂ ಅಡ್ಡಿಪಡಿಸುವಂತಿಲ್ಲ.

7 ಛಾಯಾಗ್ರಾಹಕ/ವಿಡಿಯೋಗ್ರಾಫರ್ ಫೋಟೋ ವೀಡಿಯೋಗಾಗಿ ಮದ್ವೆ ಆಚರಣೆಗಳನ್ನು ಅಡ್ಡಿಪಡಿಸುವಂತಿಲ್ಲ ಅಥವಾ ನಿಲ್ಲಿಸುವಂತಿಲ್ಲ, ದೂರದಿಂದ ಸದ್ದಿಲ್ಲದೆ ಫೋಟೋಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ಪವಿತ್ರ ಬೆಂಕಿಯ ಮುಂದೆ ನಡೆಯುವ ಪವಿತ್ರ ವಿವಾಹ, ಸಿನಿಮಾ ಚಿತ್ರೀಕರಣವಲ್ಲ

8 ಛಾಯಾಗ್ರಾಹಕರ ಸೂಚನೆಯಂತೆ ವಧು ವರರು ಕ್ಯಾಮೆರಾಗೆ ಅಸ್ವಾಭಾವಿಕವಾಗಿ ಪೋಸ್ ನೀಡುವಂತಿಲ್ಲ.

9 ವಿವಾಹ ಸಮಾರಂಭ ಹಗಲಿನಲ್ಲಿ ನಡೆಯಬೇಕು ಮತ್ತು ಬಿದಾಯಿ (ವಿದಾಯ) ಸಂಜೆಯೊಳಗೆ ಪೂರ್ಣಗೊಳ್ಳಬೇಕು. ಇದರಿಂದ ಅತಿಥಿಗಳು ತಡರಾತ್ರಿಯ ಊಟದಿಂದ (ಇದು ಹೆಚ್ಚಾಗಿ ನಿದ್ರಾಹೀನತೆ, ಆಮ್ಲೀಯತೆ ಅಥವಾ ಅಜೀರ್ಣಕ್ಕೆ ಕಾರಣವಾಗುತ್ತದೆ) ತೊಂದರೆಗೊಳಗಾಗುವುದಿಲ್ಲ ಮತ್ತು ಸಮಯಕ್ಕೆ ಸರಿಯಾಗಿ ಮನೆಗೆ ಆರಾಮವಾಗಿ ಮರಳಬಹುದು ಎಂದು ಖಚಿತಪಡಿಸುತ್ತದೆ.

10 ನವವಿವಾಹಿತರನ್ನು ಸಾರ್ವಜನಿಕವಾಗಿ ತಬ್ಬಿಕೊಳ್ಳಲು ಅಥವಾ ಚುಂಬಿಸಲು ಕೇಳುವ ಯಾರನ್ನಾದರೂ ತಕ್ಷಣವೇ ಸ್ಥಳದಿಂದ ಕಳುಹಿಸಲಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಭಾರಿ ವೈರಲ್

ಹೀಗೆ ಅವರು 10 ಬೇಡಿಕೆಗಳನ್ನು ಇಟ್ಟಿದ್ದು, ಈ ವಿಚಾರ ಬಹಳ ಚರ್ಚೆಗೆ ಕಾರಣವಾಗಿದೆ. ಅನೇಕರು ಇದಕ್ಕೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಬೇಡಿಕೆಗಳು ಸರಿ, ಆದರೆ ವಧು ಏನು ಧರಿಸಬೇಕೆಂದು ನಿರ್ಧರಿಸಲು ಅವನು ಮಾತ್ರ ಯಾರು? ಅವನ್ನಷ್ಟೇ ಅವಳಿಗೂ ಇಂದು ಮುಖ್ಯವಾದ ದಿನ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳು ಮದ್ವೆ ದಿನ ಏನು ಉಡುಗೆ ತೊಡಬೇಕು ಎಂಬುದನ್ನು ನೀವೇಕೆ ನಿರ್ಧರಿಸುತ್ತಿದ್ದೀರಿ? ಸ್ತ್ರೀದ್ವೇಷಿ ಪುರುಷರು ಸುಧಾರಿಸುವುದಿಲ್ಲ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆತನ ಈ ಪಟ್ಟಿಯು ಅವನು ಪರಿಪೂರ್ಣ ವ್ಯಕ್ತಿ ಎಂದು ತೋರುತ್ತದೆ. 10 ಆಸೆಗಳನ್ನು ಪಟ್ಟಿ ಮಾಡುವ ಮೊದಲು ಅವನು ತನ್ನ ಸಂಗಾತಿಯನ್ನು ಸಂಪರ್ಕಿಸಿದ್ದಾನೆಯೇ? ಅಥವಾ, ಅವನು ವರನಾಗಿರುವುದರಿಂದ ಮತ್ತು ಬೇಡಿಕೆಗಳು ಹಣಕಾಸಿನ ಬಗ್ಗೆ ಅಲ್ಲವಾಗಿರುವುದರಿಂದ ಅವುಗಳನ್ನು ಪೂರೈಸಲಾಗುತ್ತದೆ ಎಂದು ಅವನು ಭಾವಿಸಬಹುದು. ಆದರೆ ಅವಳು ಮದುವೆಗೆ ಏನು ಧರಿಸಬೇಕೆಂದು ಅವನು ಏಕೆ ನಿರ್ಧರಿಸಬೇಕು? ಅದು ಅವಳ ಮದುವೆಯೂ ಹೌದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹಾಗೆಯೇ ಕೆಲವರು ಆತನ ಕೆಲ ಪಾಯಿಂಗ್‌ಗಳನ್ನು ಒಪ್ಪಿಕೊಂಡಿದ್ದಾರೆ. ಹಣ ಉಳಿಸಲು ವರ ಒಳ್ಳೆ ಪ್ಲಾನ್ ಮಾಡಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಮದುವೆಯಲ್ಲಿ ವಧುವಿಗೂ ಆಕೆಯದ್ದೇ ಆದ ಆಸೆ ಇದೆ ಎಂಬುದನ್ನು ವರ ಮರೆತಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಡಿಮಾಂಡ್ ಇರುವಲ್ಲಿ ಗೌರವ ಇರಲ್ಲ, ಅಲ್ಲಿ ನಿಯಂತ್ರಣವಿರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಹೇಗೆ ಬೇಡಿಕೆ ಎಂದಾಗುತ್ತದೆ. ಮದುವೆಯನ್ನು ಒಬ್ಬನೇ ನಿರ್ಧರಿಸುವುದಲ್ಲ, ಇಬ್ಬರು ಕುಳಿತು ಚರ್ಚೆ ನಡೆಸಿದ ಬಳಿಕವಷ್ಟೇ ಇದನ್ನು ಘೋಷಿಸಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಬಹುತೇಕ ಹೆಣ್ಣು ಮಕ್ಕಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವರನ ಬೇಡಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ…

ಇದನ್ನೂ ಓದಿ: ತಲೆಗೆ 14 ಲಕ್ಷ ಬಹುಮಾನ ಘೋಷಿಸಲ್ಪಟ್ಟಿದ್ದ ಮಹಿಳಾ ಮಾವೋವಾದಿ ನಕ್ಸಲೈಟ್ ಪೊಲೀಸರಿಗೆ ಶರಣು

ಇದನ್ನೂ ಓದಿ: Celebration Ends: ದಿನದ ಯಾವುದೇ ಸಮಯದಲ್ಲೂ ಮದ್ಯ ಪೂರೈಸುತ್ತಿದ್ದ ಸೆಲೆಬ್ರೇಷನ್ ಸಾಬು ಅರೆಸ್ಟ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್