ನಾಯಿ ಹೇರ್ ಟ್ರಿಮ್ ಮಾಡ್ತೀನಿ ಅಂತ್ಹೇಳಿ, ನಾಲಿಗೆಯನ್ನೇ ಕಟ್ ಮಾಡೋದ ಸಲೂನ್ ಓನರ್?

By Anusha KbFirst Published Sep 27, 2024, 4:49 PM IST
Highlights

ಡಾಗ್‌ ಸ್ಪಾವೊಂದಕ್ಕೆ ತನ್ನ ನಾಯಿಯನ್ನು ಹೇರ್ ಕಟ್ಟಿಂಗ್‌ಗೆಂದು ಕರೆದುಕೊಂಡು ಬಂದ ಮಾಲೀಕನಿಗೆ ಆಘಾತ ಕಾದಿದೆ. ಏಕೆಂದರೆ ಸ್ಪಾದಲ್ಲಿ ಮಹಿಳೆ ಶ್ವಾನದ ಕೂದಲಿನ ಜೊತೆಗೆ ನಾಯಿಯ ನಾಲಗೆಯನ್ನೇ ಕತ್ತರಿಸಿದ್ದಾಳೆ.

ಮಧ್ಯಪ್ರದೇಶ: ಹಲವು ವಿವಿಧ ತಳಿಯ ನಾಯಿಗಳನ್ನು ಸಾಕುವುದು ಈಗ ಫ್ಯಾಷನ್ ಆಗಿದೆ. ಈ ಹೈಬ್ರೀಡ್ ನಾಯಿಗಳಿಗೆ ಮನುಷ್ಯರಂತೆ ಆರೈಕೆ ಮಾಡಬೇಕಾಗುತ್ತದೆ. ಇವುಗಳು ಬೀದಿ ನಾಯಿಗಳಂತೆ ತಮ್ಮನ್ನು ತಾವು ಸ್ವಚ್ಛಗೊಳಿಸಿಕೊಳ್ಳುವುದಿಲ್ಲ, ಇವುಗಳಿಗೆ ಪುಟ್ಟ ಮಕ್ಕಳಿಗೆ ಆರೈಕೆ ಮಾಡಿದಂತೆ ಮನುಷ್ಯರೇ ಆರೈಕೆ ಮಾಡಬೇಕಾಗುತ್ತದೆ. ಅಲ್ಲದೇ ಇವುಗಳಿಗೆ ಆರೈಕೆ ಕೇಂದ್ರಗಳು ಕೂಡ ಇವೆ. ನಗರಗಳಲ್ಲಿ ಇಂತಹ ಶ್ವಾನಗಳ ಕೂದಲು ಕತ್ತರಿಸಲು, ಉಗುರು ಕತ್ತರಿಸಲು ಬ್ಯೂಟಿಪಾರ್ಲರ್‌ಗಳಂತೆ ಡಾಗ್ ಸ್ಪಾಗಳಿವೆ. ಇದು ನಗರ ಪ್ರದೇಶಗಳಲ್ಲಿರುವ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಇಂತಹ ಡಾಗ್‌ ಸ್ಪಾವೊಂದಕ್ಕೆ ತನ್ನ ನಾಯಿಯನ್ನು ಹೇರ್ ಕಟ್ಟಿಂಗ್‌ಗೆಂದು ಕರೆದುಕೊಂಡು ಬಂದ ಮಾಲೀಕನಿಗೆ ಆಘಾತ ಕಾದಿದೆ. ಏಕೆಂದರೆ ಸ್ಪಾದಲ್ಲಿ ಮಹಿಳೆ ಶ್ವಾನದ ಕೂದಲಿನ ಜೊತೆಗೆ ನಾಯಿಯ ನಾಲಗೆಯನ್ನು ಕೂಡ ಕತ್ತರಿಸಿದ್ದಾಳೆ. ಮಧ್ಯ ಪ್ರದೇಶ ಭೋಪಾಲ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 

ಮಹಿಳೆ ತಿಳಿಯದೆಯೇ ಕಣ್ತಪ್ಪಿನಿಂದ ಶ್ವಾನದ ಕೂದಲಿನ ಜೊತೆ ನಾಲಗೆಯನ್ನು ಕತ್ತರಿಸಿದ್ದಾಳೆ. ಹೇರ್ ಟ್ರಿಮ್ ಮಾಡುವ ವೇಳೆ ಈ ದುರಂತ ನಡೆದಿದೆ. ಶಿಟ್ಜು (Shih Tzu) ತಳಿಯ ಶ್ವಾನ ಇದಾಗಿದ್ದು, ಇದು ಕುರಿಮರಿಯಂತೆ ಉದ್ಧವಾದ ಕೂದಲನ್ನು ಹೊಂದಿರುತ್ತದೆ. ತುಂಬಾ ಮಾನವಸ್ನೇಹಿಯಾಗಿರುವ ಈ ಶ್ವಾನ ಮನುಷ್ಯರನ್ನು ತುಂಬಾ ಪ್ರೀತಿ ಮಾಡುತ್ತದೆ. ಮನೆಯಲ್ಲಿ ಮಕ್ಕಳಿಲ್ಲದ ಅನೇಕರು ಈ ಶ್ವಾನವನ್ನು ಸಾಕುತ್ತಾರೆ. ಮಕ್ಕಳಂತೆಯೇ ಮನೆ ತುಂಬಾ ಓಡಾಡುವ ಈ ಶ್ವಾನ ಮನೆ ಮಾಲೀಕರಿಗೆ ಮುದ್ದಿನ ಮಗುವಿದ್ದಂತೆ. ಆದರೆ ಈ ಶ್ವಾನದ ಕೂದಲನ್ನು ಕತ್ತರಿಸುವ ಬರದಲ್ಲಿ ಡಾಗ್ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಯಿಯ ನಾಲಗೆ ಕತ್ತರಿಸಿದ್ದು, ಮಾಲೀಕರಿಗೆ ಆಘಾತವುಂಟಾಗಿದೆ. ಘಟನೆಯ ಬಳಿಕ ಮಹಿಳೆ ಪರಾರಿಯಾಗಿದ್ದಾಳೆ.

Latest Videos

ನಾಗರಹಾವಿನ ಜೊತೆ ನಾಯಿ ಕಾಳಗ! ಕೂಲಿಕಾರರ ಮಕ್ಕಳನ್ನು ಕಾಪಾಡಿದ ಜೆನ್ನಿ- ವಿಡಿಯೋ ವೈರಲ್​

ಅಲ್ಲದೇ ಘಟನೆಯ ನಂತರ ಕ್ಷಮೆ ಕೇಳುವ ಬದಲು ಆಕೆಯ ಪತಿ ಶ್ವಾನದ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಲೂನ್ ಮಾಲೀಕರ ವಿರುದ್ಧ ಅಯೋಧ್ಯ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯ ಇನ್‌ಚಾರ್ಜ್‌ ಮಹೇಶ್ ಲಿಲ್ಲರೆ ಅವರ ಪ್ರಕಾರ, ಈ ಘಟನೆ ಸೆಪ್ಟೆಂಬರ್ 20 ರಂದು ನಡೆದಿದ್ದು, ಶ್ವಾನದ ಮಾಲಕಿ ಸಂಗೀತಾ ತಿವಾರಿ ಹಾಗೂ ಅವರ ಪತಿ 1.5 ವರ್ಷದ ತಮ್ಮ ಶಿಜು ಶ್ವಾನವನ್ನು ನ್ಯೂ ಮಿನಾಲ್ ರೆಸಿಡೆನ್ಸಿಯಲ್ಲಿ ಇದ್ದ ಪರ್ಫೆಕ್ಟ್ ಪಾವ್ಸ್ ಹೆಸರಿನ ಶ್ವಾನದ ಸಲೂನ್‌ಗೆ ಹೇರ್‌ ಟ್ರಿಮ್‌ಗಾಗಿ ಕರೆದುಕೊಂಡು ಬಂದಿದ್ದರು. 

ಈ ವೇಳೆ ಸಲೂನ್ ಮಾಲಕಿ ಸೃಷ್ಟಿ ಭಗತ್‌ ಶ್ವಾನದ ನಾಲಿಗೆಗೆ ಕತ್ತರಿ ಹಾಕಿದ್ದಾಳೆ. ಈ ವೇಳೆ ಶ್ವಾನವೂ ನೋವಿನಿಂದ ಕಿರುಚಾಡಲು ಶುರು ಮಾಡಿದೆ. ಅಲ್ಲದೇ ಸಲೂನ್ ತುಂಬಾ ರಕ್ತ ಚೆಲ್ಲಾಡಿದೆ. ಇದರಿಂದ ಶ್ವಾನದ ಮಾಲಕಿಗೆ ತಲೆ ತಿರುಗಿದ್ದು, ಅವರು ಸಲೂನ್‌ನಲ್ಲೇ ತಲೆತಿರುಗಿ ಬಿದ್ದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಚೇತರಿಸಿಕೊಂಡ ಸಂಗೀತಾ ಹಾಗೂ ಶ್ವಾನವನ್ನು ಸಂಗೀತಾ ಅವರ ಪತಿ ಪಶುವೈದ್ಯರ ಬಳಿ ಶ್ವಾನದ ಚಿಕಿತ್ಸೆಗಾಗಿ ಕರೆತಂದಿದ್ದಾರೆ. ಇದಾಗಿ 5 ದಿನದ ನಂತರ ಸಂಗೀತಾ ಈ ಸಲೂನ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ನಂತರ  ಸಲೂನ್‌ಗೆ ಬಂದ ಪೊಲೀಸರು ಮಾಲಕಿ ಸೃಷ್ಟಿ ಅವರನ್ನು ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ಇದಾದ ನಂತರ ಆಕೆ ಜೈಪುರಕ್ಕೆ ಪರಾರಿಯಾಗಿದ್ದಾಳೆ. 

ಅಸ್ವಸ್ಥ ಮಾಲೀಕನಿದ್ದ ಆ್ಯಂಬುಲೆನ್ಸ್ ಹಿಂದೆ ಬಂದ ನಾಯಿ ನೋಡಿ ವೈದ್ಯ ಮಾಡಿದ್ದೇನು? ಮನತಟ್ಟಿದ ದೃಶ್ಯ!

 

click me!