Groom Arrested: ಮದುವೆ ಮಂಟಪಕ್ಕೆ ವರನೇ ಬರಲಿಲ್ಲ! ವಧು ನೇರವಾಗಿ ಪೊಲೀಸ್ ಸ್ಟೇಷನ್‌ಗೆ ಹೋಗಲು ಅಸಲಿಗೆ ಅಲ್ಲಿ ನಡೆದಿದ್ದೇನು?

Published : May 15, 2026, 07:33 AM IST
Groom Skips Wedding in Kasaragod Gets Arrested After Bride Files Complaint

ಸಾರಾಂಶ

ಕಾಸರಗೋಡಿನಲ್ಲಿ ಮದುವೆ ನಿಲ್ಲಲು ವರನೇ ಕಾರಣ. ಮುಹೂರ್ತದ ಸಮಯಕ್ಕೆ ವಧು ಮತ್ತು ಆಕೆಯ ಸಂಬಂಧಿಕರು ದೇವಸ್ಥಾನಕ್ಕೆ ಬಂದರೂ ವರ ಮಾತ್ರ ಬರಲಿಲ್ಲ. ಇದರಿಂದ ಮದುವೆ ರದ್ದಾಗಿದೆ.

ಕಾಸರಗೋಡು (ಮೇ.15): ಕಾಸರಗೋಡಿನ ಬಳಾಲ್ ಬಳಿ ನಡೆಯಬೇಕಿದ್ದ ಮದುವೆಯೊಂದು ವರ ಬಾರದ ಕಾರಣಕ್ಕೆ ನಿಂತುಹೋಗಿದೆ. ವಧು ಮತ್ತು ಆಕೆಯ ಕುಟುಂಬಸ್ಥರು ದೇವಸ್ಥಾನಕ್ಕೆ ಬಂದು ಕಾಯುತ್ತಿದ್ದರು. ಆದರೆ, ಮುಹೂರ್ತದ ಸಮಯವಾದರೂ ವರ ಮತ್ತು ಆತನ ಕಡೆಯವರು ಬರಲೇ ಇಲ್ಲ.

ಮದುವೆ ಮಂಟಪಕ್ಕೆ ಬಂದ ಯುವತಿ ನೇರ ಪೊಲೀಸ್ ಠಾಣೆಗೆ!

ಇದರಿಂದ ಬೇಸತ್ತ ಯುವತಿ, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಹಿಂದೆ ಪ್ರೀತಿಸುತ್ತಿದ್ದಾಗ ಯುವಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ವರನಾಗಬೇಕಿದ್ದ ಯುವಕನನ್ನು ಬಂಧಿಸಿದ್ದಾರೆ.

ವಿಷ್ಣು ನಾರಾಯಣನ್ ಬಂಧಿತ ಆರೋಪಿ

ಕಾಸರಗೋಡಿನ ಬಳಾಲ್ ಸಮೀಪದ ವಿಷ್ಣು ನಾರಾಯಣನ್ ಬಂಧಿತ ಆರೋಪಿ. ವೆಳ್ಳರಿಕುಂಡ್ ಪೊಲೀಸರು ನಾರಾಯಣನ್‌ನ ಅರೆಸ್ಟ್ ಮಾಡಿದ್ದಾರೆ. ವಿಷ್ಣು ನಾರಾಯಣನ್ ಮತ್ತು ಯುವತಿ ಈ ಹಿಂದೆ ಪ್ರೀತಿಸುತ್ತಿದ್ದರು. ಮದುವೆಗಾಗಿ ವಧು ಮತ್ತು ಆಕೆಯ ಸಂಬಂಧಿಕರು ದೇವಸ್ಥಾನಕ್ಕೆ ಬಂದಿದ್ದರು. ಆದರೆ, ವರನ ಕಡೆಯಿಂದ ಯಾರೂ ಬರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೂ ಬಂದ SIR! - 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
UP Unseasonal storms: ಉ.ಪ್ರ ಭೀಕರ ಬಿರುಗಾಳಿ-ಮಳೆಗೆ 111 ಮಂದಿ ಸಾವು.. 50 ಅಡಿ ಎತ್ತರಕ್ಕೆ ಹಾರಿದ ವ್ಯಕ್ತಿ (ವಿಡಿಯೋ)