ಸಂಗೀತದ ವಿಚಾರದಲ್ಲಿ ಗಲಾಟೆ: ಅತಿಥಿಯನ್ನು ಗುಂಡು ಹಾರಿಸಿ ಕೊಂದ ಮಧುಮಗ

By Anusha KbFirst Published May 11, 2022, 10:58 AM IST
Highlights
  • ಡಿಜೆ ಹಾಡಿಗೆ ಸಂಬಂಧಿಸಿದಂತೆ ಗಲಾಟೆ
  • ಅತಿಥಿಯನ್ನು ಗುಂಡು ಹಾರಿಸಿ ಕೊಂದ ಮಧುಮಗ
  • ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಘಟನೆ

ಲಖ್ನೋ: ಮದುವೆಯ ಸಂದರ್ಭದಲ್ಲಿ ಸಂಗೀತದ ವಿಚಾರಕ್ಕೆ ವಾದ ವಿವಾದ ಆರಂಭವಾಗಿ ನಂತರ ಅದು ವಿಕೋಪಕ್ಕೆ ತಿರುಗಿ ವರ ಅತಿಥಿಯನ್ನೇ ಗುಂಡು ಹಾರಿಸಿ ಕೊಂದ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ.ಇಲ್ಲಿನ ಶಹಪುರ್ ಪ್ರದೇಶದಲ್ಲಿ ಮದುವೆಯಲ್ಲಿ ಹಾಡುಗಳನ್ನು ನುಡಿಸುವ ವಿಚಾರದಲ್ಲಿ ವಾದ ವಿವಾದ ಆಗಿದ್ದು,  ಮದುವೆಗೆ ಬಂದಿದ್ದ ಅತಿಥಿಯೊಬ್ಬರನ್ನು ವರ ಗುಂಡಿಟ್ಟು ಹತ್ಯೆಗೈದ ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಜಾಫರ್ ಅಲಿ (Zafar Ali) ಎಂದು ಗುರುತಿಸಲಾಗಿದ್ದು, ಆತ ವಧುವಿನ ಕಡೆಯವರು ಎಂದು ತಿಳಿದು ಬಂದಿದೆ. ಮದುವೆ ಮೆರವಣಿಗೆಯಲ್ಲಿ ಡಿಜೆ ಹಾಡುಗಳನ್ನು ನುಡಿಸುವುದನ್ನು ಕೆಲವರು ವಿರೋಧಿಸಿದ್ದರಿಂದ ಎರಡೂ ಕಡೆಯ ಜನರು ಪರಸ್ಪರ ಘರ್ಷಣೆ ನಡೆಸಿದರು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅತುಲ್ ಶ್ರೀವಾಸ್ತವ್ (Atul Srivastav) ಹೇಳಿದ್ದಾರೆ.

ನಂತರ ವರ ಇಫ್ತಿಕರ್ (Iftikhar)ಗುಂಡು ಹಾರಿಸಿದ್ದು, ಈ ವೇಳೆ ಮದುವೆಗೆ ಬಂದಿದ್ದ ಅತಿಥಿ ಅಲಿ ಗಾಯಗೊಂಡಿದ್ದ. ಕೂಡಲೇ ಜಾಫರ್ ಅಲಿಯನ್ನುಆಸ್ಪತ್ರೆಗೆ ಸಾಗಿಸಲಾಯಿತು ಈ ವೇಳೆ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಣೆ ಮಾಡಿದರು. ಘಟನೆಯ ಬಳಿಕ ಪೊಲೀಸರು ವರ ಇಫ್ತಿಕರ್‌ನನ್ನು ಬಂಧಿಸಿದ್ದು, ಗ್ರಾಮದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಅತುಲ್ ಶ್ರೀವಾಸ್ತವ್ ಹೇಳಿದ್ದಾರೆ.

Latest Videos

ಗಂಡನ ಮನೆಯಲ್ಲಿ ಟಾಯ್ಲೆಟ್ ಇಲ್ಲದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!

ಭಾರತದಲ್ಲಿ ಮದುವೆಯ ದಿನ ನಡೆಯುವ ಗಲಾಟೆಗಳು ಆಗಾಗ ವರದಿ ಆಗುತ್ತಲೇ ಇರುತ್ತವೆ. ಕೆಲ ದಿನಗಳ ಹಿಂದಷ್ಟೇ ಮದುವೆಯೊಂದರಲ್ಲಿ ತಾಳಿ ಕಟ್ಟುವ ವೇಳೆ ಕರೆಂಟು ಹೋದ ಪರಿಣಾಮ ವರನೋರ್ವ ವಧುವಿನ ತಂಗಿಗೆ ತಾಳಿ ಕಟ್ಟಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಈ ಘಟನೆ ನಡೆದಿತ್ತು. ರಮೇಶ್ ಲಾಲ್‌ ಎಂಬುವವರ ಇಬ್ಬರು ಪುತ್ರಿಯರಾದ ನಿಕಿತಾ ಹಾಗೂ ಕರಿಷ್ಮಾ ಅವರಿಗೆ ಕ್ರಮವಾಗಿ ಬೇರೆ ಬೇರೆ ಕುಟುಂಬದ ಇಬ್ಬರು ಹುಡುಗರಾದ ದಂಗ್ವಾರ ಗ್ರಾಮದ ಭೊಲ ಹಾಗೂ ಗಣೇಶ್ ಎಂಬುವರೊಂದಿಗೆ ವಿವಾಹ ನಿಗದಿಯಾಗಿತ್ತು. ಆದರೆ ಮದುವೆ ವೇಳೆ ವಧುಗಳು ಮಾಸ್ಕ್‌ ಜೊತೆಗೆ ಮುಖ ಕಾಣದಂತೆ ಶಾಲು ಧರಿಸಿದ್ದರಿಂದ ಅದರ ಜೊತೆಗೆ ವಿದ್ಯುತ್ ಕೂಡ ಕೈ ಕೊಟ್ಟಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ.

Love Tragedy : ಹೆಂಡತಿಯ ಬಾಯ್‌ಫ್ರೆಂಡ್‌ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್
ಮದುವೆ ದಿನ ದೊಡ್ಡ ಸಹೋದರಿ ಹಾಗೂ ಆಕೆಯ ತಂಗಿ ಒಂದೇ ರೀತಿಯ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರು. ಇಬ್ಬರು ಸಹೋದರಿಯರ ಮದುವೆಯನ್ನು ಒಟ್ಟಿಗೆ ನಿಶ್ಚಯಿಸಲಾಗಿತ್ತು. ಇಲ್ಲಿನ ಬಿಲ್ ಸಮುದಾಯದ ಕುಟುಂಬವೊಂದರ ಮದುವೆಯಲ್ಲಿ ಈ ಅನಾಹುತ ನಡೆದಿದೆ. ಧೀರ್ಘಕಾಲ ಕರೆಂಟು ಹೋದರೂ ಇಲ್ಲಿ ಜನರೇಟರ್‌ನ್ನು ಕೂಡ ವ್ಯವಸ್ಥೆ ಮಾಡಿಲ್ಲ. ಇದರಿಂದ ಎಲ್ಲೆಡೆ ಕತ್ತಲೆ ಆವರಿಸಿದ್ದು, ಕತ್ತಲೆಯ ಮಧ್ಯೆಯೇ ವಧುಗಳು ಬದಲಾಗಿದ್ದು ವರ ವಧುವಿನ ತಂಗಿಗೆ ತಾಳಿ ಕಟ್ಟಿದ್ದಾರೆ.

ಮದುವೆ ಮುಗಿದ ನಂತರ ಸಹೋದರಿಯರನ್ನು ಅವರ ಅತ್ತೆ ಮನೆಗಳಿಗೆ ಪೋಷಕರು ಕಳುಹಿಸಿ ಕೊಟ್ಟಿದ್ದಾರೆ. ಅಲ್ಲಿಯವರೆಗೂ ವಧುಗಳು ಬದಲಾದ ಬಗ್ಗೆ ಯಾರ ಗಮನಕ್ಕೂ ಬಂಧಿರಲಿಲ್ಲ. ನಂತರ ವಧು ದಂಗ್ವಾರದಲ್ಲಿರುವ ತನ್ನ ಅತ್ತೆ ಮನೆಗೆ ಬಂದಾಗ ಅಲ್ಲಿ ಮದುವೆ ದಿಬ್ಬಣದ ವೇಳೆ ವಧು ಬದಲಾಗಿರುವುದು ತಿಳಿದು ಬಂದಿದೆ. ವಧು ಬದಲಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎರಡು ಕುಟುಂಬಗಳ ಮಧ್ಯೆ ದೊಡ್ಡ ವಿವಾದ ಶುರುವಾಗಿದೆ. ವಧುವಿನ ಅತ್ತೆ ಮನೆಯವರು ಹಾಗೂ ಬಂಧುಗಳು ವಧು ಬದಲಾಗಿರುವುದನ್ನು ಗಮನಿಸಿ ಶಾಕ್‌ಗೆ ಒಳಗಾಗಿದ್ದಾರೆ. ನಂತರ ವಧು ಹಾಗೂ ವರನ ಫೋಷಕರೆಲ್ಲರೂ ಒಂದು ಕಡೆ ಸೇರಿ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ನಿಖಿತಾ ಎಂಬ ವಧುವನ್ನು ಮದುವೆಯಾಗಬೇಕಿದ್ದ ವರ ಗಣೇಶ್‌ (Ganesh Bhola) ಪುರೋಹಿತರು ಮತ್ತೊಮ್ಮೆ ಸರಿಯಾದ ವಧುವಿನೊಂದಿಗೆ ವಿವಾಹ ನೆರವೇರಿಸಿದ್ದಾರೆ ಎಂದು ಹೇಳಿದ್ದಾರೆ.

click me!