ಕಾರು ಕಳ್ಳತನದ ವೇಳೆ ಯುವಕ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದ್ದು, ಈ ವೇಳೆ ಆತನನ್ನು ಹಿಡಿದು ಆತನ ಕೈಕಾಲುಗಳನ್ನು ಕಟ್ಟಿ ಆತನ ಪ್ಯಾಂಟ್ ಬಿಚ್ಚಿದ ಜನ ಬಳಿಕ ಆತನ ಹಿಂಭಾಗಕ್ಕೆ ಮೆಣಸಿನ ಪುಡಿ ಹಾಕಿದ್ದಾರೆ.
ಅರಾರಿಯಾ: ಕಳ್ಳತನದ ವೇಳೆ ಸಿಕ್ಕಿಬಿದ್ದನೆನ್ನಲಾದ ಕಳ್ಳನಿಗೆ ಜನರು ಕ್ರೂರವಾಗಿ ಹಿಂಸಿಸಿ ಶಿಕ್ಷೆ ನೀಡಿದ ಘಟನೆ ಬಿಹಾರದ ಅರಾರಿಯಾದಲ್ಲಿ ನಡೆದಿದೆ. ಕಾರು ಕಳ್ಳತನದ ವೇಳೆ ಯುವಕ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದ್ದು, ಈ ವೇಳೆ ಆತನನ್ನು ಹಿಡಿದು ಆತನ ಕೈಕಾಲುಗಳನ್ನು ಕಟ್ಟಿ ಆತನ ಪ್ಯಾಂಟ್ ಬಿಚ್ಚಿದ ಜನ ಬಳಿಕ ಆತನ ಹಿಂಭಾಗಕ್ಕೆ ಪೇಪರ್ ಮೂಲಕ ಕೆಂಪು ಮೆಣಸಿನ ಪುಡಿ ಹಾಕಿ ಬಳಿಕ ಸ್ಟಿಕ್ ಒಂದರಿಂದ ಅದು ಗುದದ್ವಾರದ ಒಳಗೆ ಹೋಗುವಂತೆ ಮಾಡಿದ್ದಾರೆ. 4 ರಿಂದ 5 ಜನ ಸೇರಿ ಸಿಕ್ಕಿಬಿದ್ದ ಕಳ್ಳನಿಗೆ ಈ ಶಿಕ್ಷೆ ನೀಡಿದ್ದು, ಜೊತೆಗೆ ಈ ಆಘಾತಕಾರಿ ದೃಶ್ಯದ ವೀಡಿಯೋವನ್ನು ಕೂಡ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕಳವಿಗೆ ಬಂದು ಸಿಕ್ಕಿಬಿದ್ದ ಯುವಕನಿಗೆ ಜನ ಸಾರ್ವಜನಿಕವಾಗಿ ಶಿಕ್ಷೆ ನೀಡಿದ್ದು, ವೀಡಿಯೋದಲ್ಲಿ ಕಾಣುವಂತೆ ಯುವಕನ ಕೈಗಳನ್ನು ಕಟ್ಟಲಾಗಿದೆ.ಆತನನ್ನು 4 ರಿಂದ 5 ಜನ ಹಿಡಿದುಕೊಂಡಿದ್ದು, ಅವರಲ್ಲೊಬ್ಬ ಆತನ ಪ್ಯಾಂಟನ್ನು ಬಿಚ್ಚಿದ್ದಾನೆ. ಈ ವೇಳೆ ಮತ್ತೊಬ್ಬ ಮೆಣಸಿನ ಹುಡಿ ಇರುವ ಪ್ಯಾಕೆಟ್ ಅನ್ನು ಕಟ್ ಮಾಡಿ ಅದರಲ್ಲಿದ್ದ ಮೆಣಸಿನ ಹುಡಿಯನ್ನು ಯುವಕನ ಹಿಂಭಾಗಕ್ಕೆ ಸುರಿಯುತ್ತಾನೆ. ಅಲ್ಲದೇ ಪೆನ್ಸಿಲ್‌ವೊಂದರಿಂದ ತಳ್ಳುವ ಮೂಲಕ ಮೆಣಸಿನ ಹುಡಿ ಯುವಕನ ಗುದದ್ವಾರ ಸೇರುವಂತೆ ಮಾಡುತ್ತಾರೆ.
ಸಿಕ್ಕಿಬಿದ್ದ ಕಳ್ಳನಿಂದ ನೃತ್ಯ ಮಾಡಿಸಿದ ಜನ: ವೀಡಿಯೋ ಸಖತ್ ವೈರಲ್
ಈ ವೇಳೆ ಯುವಕ ನೋವು ಹಾಗೂ ಉರಿ ತಡೆಯಲಾಗದೇ ಕಿರುಚಿಕೊಂಡಿದ್ದು, ಬಿಟ್ಟು ಬಿಡುವಂತೆ ಅವರಲ್ಲಿ ಬೇಡುವುದನ್ನು ವಿಡಿಯೋದಲ್ಲಿ ಕೇಳಬಹುದು. ಆದರೆ ಜನ ಆತನ ಮೇಲೆ ಕರುಣೆ ತೋರಿಲ್ಲ. ಅಲ್ಲದೇ ಆತನ ಬಿಚ್ಚಿದ ಪ್ಯಾಂಟ್‌ನ್ನು ವಾಪಸ್ ಮೇಲೆರಿಸಿ ಗುಬ್ಬಿ ಹಾಕಿ ಬಿಡುತ್ತಾರೆ. ಆದರೆ ಕಟ್ಟಿದ ಕೈಯನ್ನು ಮಾತ್ರ ಬಿಚ್ಚಿಲ್ಲ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಹೀಗೆ ಕ್ರೂರವಾಗಿ ಹಿಂಸೆ ನೀಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.
ಆತ ತಪ್ಪು ಮಾಡಿರಬಹುದು. ಆದರೆ ಈ ರೀತಿ ಶಿಕ್ಷೆ ನೀಡುವುದು ನ್ಯಾಯಯುತವಲ್ಲ. ಈ ರೀತಿ ಶಿಕ್ಷೆ ನೀಡಿದವರಿಗೂ ಅದೇ ರೀತಿ ಶಿಕ್ಷೆ ನೀಡಬೇಕು ಎಂದು ಇಂಟರ್‌ನೆಟ್‌ನಲ್ಲಿ ಬಳಕೆದಾರರು ಆಗ್ರಹಿಸಿದ್ದಾರೆ. ಇತ್ತ ವೀಡಿಯೋ ವೈರಲ್ ಆಗ್ತಿದ್ದಂತೆ ಅರಾರಿಯಾ ಪೊಲೀಸರು ಈ ವೀಡಿಯೋಗೆ ಟ್ಟಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ ಹಾಗೂ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಹಾಗೂ ಈ ಪ್ರಕರಣದಲ್ಲಿ ಭಾಗಿಯಾದ ಇತರರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟು ಜೈಲು ಸೇರಿದ ಜೋಡಿ ಹಕ್ಕಿ!
बिहार में चोरी के शक में एक व्यक्ति के साथ क्रूरता: उसके गुदा में दबंगों ने डाली लाल मिर्च जो निंदनीय है, अपराधियों पर सख्त कार्रवाई होनी चाहिए, सजा देना कानून का काम है, न कि कानून को हाथ में लेकर खुद सजा देना। pic.twitter.com/olVox8fmEa
— Satark Nagrik News (@satarknagriknew)