ಮೃಗಾಲಯದ ಬೋನ್‌ನಿಂದ ಎಸ್ಕೇಪ್‌ ಆದ ಹನುಮಾನ್‌ ಕೋತಿ: ಝೂ ಒಳಗಿಂದ್ಲೇ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಮಂಕಿ!

By BK Ashwin  |  First Published Jun 14, 2023, 1:58 PM IST

ಮೃಗಾಲಯದೊಳಗಿನ ಮರದ ಮೇಲೆ ಆ ಲಂಗೂರ್‌ ಕೋತಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಅಧಿಕಾರಿಗಳು ಪ್ರಾಣಿಯನ್ನು ಹಿಡಿದು ಬೋನಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ.


ತಿರುವನಂತಪುರಂ (ಜೂನ್ 14, 2023): ಕೇರಳದ ತಿರುವನಂತಪುರಂ ಮೃಗಾಲಯದಲ್ಲಿ ಇತ್ತೀಚೆಗಷ್ಟೇ ಗ್ರೇ ಲಂಗೂರ್ ಅಥವಾ ಹನುಮಾನ್ ಮಂಕಿ ಎಂದು ಕರೆಯಲಾಗುವ ಕೋತಿಯನ್ನು ತರಲಾಗಿತ್ತು. ಆದರೆ, ಮಂಗಳವಾರ ಸಂಜೆ ಇದು ಝೂ ನಿಂದ ಎಸ್ಕೇಪ್‌ ಆಗಿದೆ. ಇನ್ನು, ಇತರರಿಗೆ ತೊಂದರೆ ನೀಡಬಹುದು ಅನ್ನೋ ಕಾರಣದಿಂದ ನೆರೆಹೊರೆಯ ಪ್ರದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

ಇನ್ನೊಂದೆಡೆ, ಬುಧವಾರ (ಜೂನ್ 14) ಮೃಗಾಲಯದೊಳಗಿನ ಮರದ ಮೇಲೆ ಆ ಲಂಗೂರ್‌ ಕೋತಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಅಧಿಕಾರಿಗಳು ಪ್ರಾಣಿಯನ್ನು ಹಿಡಿದು ಬೋನಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಂದ ಪ್ರಾಣಿಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮೃಗಾಲಯದ ಬಾಗಿಲು ತೆರೆಯುವ ಮುನ್ನವೇ ಈ ಘಟನೆ ನಡೆದಿದೆ. ಲಂಗೂರ್ ಪಂಜರದಿಂದ ಹಾರಿ ಪ್ರಾಣಿ ಸಂಗ್ರಹಾಲಯದಿಂದ ಓಡಿಹೋಗಿದ್ದು, ಮೃಗಾಲಯದ ಅಧಿಕಾರಿಗಳು ಕೋತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ಸಫಾರಿಗೆ ಹೋದವರ ಮೇಲೆ ಅಟ್ಟಿಸಿಕೊಂಡು ಹೋದ ವ್ಯಾಘ್ರ: ಪ್ರವಾಸಿಗರು ಜಸ್ಟ್ ಮಿಸ್!

ಈ ಮಧ್ಯೆ, ಇತ್ತೀಚೆಗೆ ಬಂದ ಪ್ರಾಣಿಗಳನ್ನು ಮೃಗಾಲಯದ ಸಿಬ್ಬಂದಿ ದುರ್ಬಳಕೆ ಮಾಡಿಕೊಂಡಿದ್ದು, ಪ್ರಾಣಿಗಳ ಬಗ್ಗೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಹನುಮಾನ್ ಕೋತಿಗೆ 15 ದಿನಗಳ ಕ್ವಾರಂಟೈನ್ ಅವಧಿಯನ್ನು ಪಾಲಿಸಲಾಗಿಲ್ಲ ಎಂದೂ ವರದಿಗಳು ಹೇಳುತ್ತಿವೆ. 

ಇದೇ ರೀತಿ, ಕಂದು ಬಣ್ಣದ ಬೆಂಗಾಲಿ ಮಂಗವೊಂದು ಮೃಗಾಲಯದಿಂದ ಓಡಿಹೋಗಿತ್ತು. ಆ ವೇಳೆ, ಮೃಗಾಲಯಕ್ಕೆ ಜನ ಭೇಟಿ ನೀಡುತ್ತಿದ್ದರು ಎಂದೂ ತಿಳಿದುಬಂದಿದೆ. ಮೃಗಾಲಯದ ಸಿಬ್ಬಂದಿ ಪಂಜರವನ್ನು ಸ್ವಚ್ಛಗೊಳಿಸುತ್ತಿದ್ದಾಗ 10 ವರ್ಷದ ಗಂಡು ಮಂಗ ನುಗ್ಗಿತ್ತು. ಬಳಿಕ  ಮೃಗಾಲಯದ ವೈದ್ಯರು ಕೋತಿಯನ್ನು ಗನ್‌ನಿಂದ ಅರವಳಿಕೆ ಮದ್ದು ನೀಡಲು ಪ್ರಯತ್ನಿಸಿದ್ರೂ, ಆಯುಧವು ಅಸಮರ್ಪಕವಾಗಿ ಕಾರ್ಯನಿರ್ವಹಿಸಿತು ಮತ್ತು ಅದರ ಗುರಿಯನ್ನು ತಪ್ಪಿಸಿಕೊಂಡಿತ್ತು.

ಇದನ್ನೂ ಓದಿ: ಬೀದಿ ನಾಯಿಗಳ ದಾಳಿಗೆ 11 ವರ್ಷದ ವಿಶೇಷಚೇತನ ಬಾಲಕ ಬಲಿ: ಕೇರಳ ಸರ್ಕಾರದ ವಿರುದ್ದ ಟೀಕೆ

ಈ ಮಂಗ ಕೂಡ ಹಿಂಸಾತ್ಮಕ ಮನೋಭಾವ ಹೊಂದಿರುವ ವರ್ಗಕ್ಕೆ ಸೇರಿದ್ದರಿಂದ ಅಧಿಕಾರಿಗಳು ಕಂಗಾಲಾಗಿದ್ದರು. ಬಳಿಕ, ಹೆಚ್ಚಿನ ನೌಕರರು ಆಗಮಿಸಿ ಭಾರೀ ಸದ್ದು ಮಾಡಿ ಕಲ್ಲು ತೂರಾಟ ನಡೆಸಿ ಕೋತಿಯನ್ನು ಓಡಿಸಿದರು. ನಂತರ, ಆ ಕೋತಿ ಕೆಳಕ್ಕೆ ಇಳಿದ ತಕ್ಷಣ ಪಂಜರದಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: ಅಯ್ಯೋ ಪಾಪಿ: ನಮ್ಮ ರಾಷ್ಟ್ರಪಕ್ಷಿಯ ಗರಿಗಳನ್ನು ಕಿತ್ತು ಹಿಂಸೆ ನೀಡಿ ಕೊಂದೇ ಹಾಕ್ದ! ವಿಡಿಯೋ ವೈರಲ್‌

click me!