Petrol Diesel Price Drop; ಪೆಟ್ರೋಲ್ 5, ಡೀಸೆಲ್ 10 ರು. ಅಬಕಾರಿ ಸುಂಕ ಕಡಿತ

Published : Nov 03, 2021, 08:41 PM ISTUpdated : Nov 03, 2021, 09:15 PM IST
Petrol Diesel Price Drop; ಪೆಟ್ರೋಲ್ 5, ಡೀಸೆಲ್ 10 ರು. ಅಬಕಾರಿ ಸುಂಕ ಕಡಿತ

ಸಾರಾಂಶ

* ದೇಶದ ಜನರಿಗೆ ಅತಿದೊಡ್ಡ ರಿಲೀಫ್ ಕೊಟ್ಟ ಕೇಂದ್ರ ಸರ್ಕಾರ * ಇಂಧನದ ಮೇಲಿನ ಅಬಕಾರಿ ಸುಂಕ ಕಡಿತ * ಕಾಂಗ್ರೆಸ್ ಪ್ರತಿಭಟನೆಯ ದಾರಿ ಹಿಡಿದಿತ್ತು * ನವೆಂಬರ್ 4  ರಿಂದಲೇ ಹೊಸ ದರ 

ನವದೆಹಲಿ(ನ. 03)  ಕೇಂದ್ರ ಸರ್ಕಾರ (Union Govt) ದೀಪಾವಳಿ (Deepavali) ವೇಳೆ ದೇಶದ ಜನರಿಗೆ ಅತಿದೊಡ್ಡ ರಿಲೀಫ್ ನೀಡಿದೆ.  ತೈಲದ ಮೇಲಿನ ಅಬಕಾರಿ ಸುಂಕ ಕಡಿತ (Excise Duty) ಮಾಡಿದ್ದು ಏರಿದ್ದ ಇಂಧನ ಕೊಂಚ ಇಳಿಕೆಯಾಗಲಿದೆ. ಪೆಟ್ರೋಲ್ (Petrol) ಮೇಲೆ 5 ರೂ. ಮತ್ತು ಡಿಸೇಲ್ (Diesel) ಮೇಲೆ 10 ರು. ಅಬಕಾರಿ ಸುಂಕ ಕಡಿತ ಮಾಡಲಾಗಿದೆ.  ಎಂದಿನಂತೆ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಯಾಗಲಿದೆ.

ಪೆಟ್ರೋಲ್ ಮತ್ತು ಡಿಸೇಲ್ ಲೀಟರ್ ಗೆ ನೂರು ರು. ಗಳ ಗಡಿ ದಾಟಿ ತಿಂಗಳುಗಳೇ ಕಳೆದಿದ್ದವು. ಇದರ ಜತೆಗೆ ಎಲ್‌ಪಿಜಿ ದುಬಾರಿ ಭಾರ ಸಹ ಜನರ ಮೇಲೆ ಇತ್ತು. ಈಗ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಿರುವುದರಿಂದ ಬೆಲೆ ಇಳಿಯಲಿದೆ. 

ಸತತ ಏಳು ದಿನಗಳ ಕಾಲ ಏರಿಕೆ ಕಂಡಿದ್ದ ಪೆಟ್ರೋಲ್ ದರದಲ್ಲಿ ನವೆಂಬರ್ 3ರಂದು ಯಾವುದೇ ಏರಿಳಿತ ಕಂಡು ಬಂದಿರಲಿಲ್ಲ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ದರ ಸ್ಥಿರವಾಗಿತ್ತು.  ಸರ್ಕಾರದ ಮೇಲೆ ಜನರತು ಹಿಡಿಶಾಪ ಹಾಕುತ್ತಲೇ ಇದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಕಮೆಂಟ್ ಗಳ ಸರಮಾಲೆ ಬಂದಿತ್ತು. ಕೇಂದ್ರ ಸರ್ಕಾರ ದರ ಏರಿಕೆ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕರು ಪ್ರತಿಭಟನೆ ಹಾದಿ ಹಿಡಿದಿದ್ದರು. ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿಯೂ ಇಂಧನ ದರ ಏರಿಕೆ ಪ್ರತಿಧ್ವನಿಸಿತ್ತು. 

ರಾಜಸ್ಥಾನದ ಶ್ರೀಗಂಗಾನಗರದಲ್ಲಿ (Sri Ganganagar) ಪೆಟ್ರೋಲ್‌ ದರ 121.13 ರು. ಮತ್ತು ಡೀಸೆಲ್‌ (Diesel )ದರ 110.29 ರು. ತಲುಪಿ ದಾಖಲೆ ಬರೆದಿತ್ತು.

ಇಂಧನ ದರದಿಂದ ಕಂಗಾಲಾದ ಜನತೆಗೆ ಮತ್ತೊಂದು ಬರೆ, 14 ವರ್ಷದ ಬಳಿಕ ಬೆಂಕಿ ಪೊಟ್ಟಣ ಬೆಲೆ ಏರಿಕೆ!

ಅಕ್ಟೋಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು ಹೆಚ್ಚಿಸಿದ್ದವು. ವಾಣಿಜ್ಯ ಸಿಲಿಂಡರ್​ಗಳ(Commercial Cylinder) ಬೆಲೆಯನ್ನು 43.5 ರೂಪಾಯಿಗಳಷ್ಟು ಏರಿಕೆ ಮಾಡಿದ್ದವು.  ಮತ್ತೆ ಎಲ್​ಪಿಜಿ ಅಡುಗೆ ಸಿಲಿಂಡರ್( Domestic LPG Cylinders) ಬೆಲೆ ಮತ್ತೆ 15 ರೂ. ಹೆಚ್ಚಳ ಮಾಡಲಾಗಿತ್ತು.

 ಪೆಟ್ರೋಲ್ ಡೀಸೆಲ್(Petrol Diesel) ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದರೆ  ಬೆಂಕಿ ಪೊಟ್ಟಣದ(Matchbox) ಬೆಲೆ ಹದಿನಾಲ್ಕು ವರ್ಷದ ನಂತರ ಏರಿಕೆಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಡಿಸೆಂಬರ್ 1, 2021ರಿಂದ 1 ರೂಪಾಯಿ ಇದ್ದ ಬೆಂಕಿ ಪೊಣ್ಣದ ಬೆಲೆ 2 ರೂಪಾಯಿ ಆಗಲಿದೆ.

ಸದ್ಯ ಮಹಾನಗರಗಳಲ್ಲಿ ದರ ಎಷ್ಟಿದೆ?
* ಬೆಂಗಳೂರು: ಪೆಟ್ರೋಲ್ 113.93ರೂ- ಡೀಸೆಲ್ 104.50 ರೂ
* ತಿರುವನಂತಪುರಂ: ಪೆಟ್ರೋಲ್ 112.43ರೂ- ಡೀಸೆಲ್ 105.85ರೂ
* ನವದೆಹಲಿ: ಪೆಟ್ರೋಲ್ 110.04ರೂ- ಡೀಸೆಲ್ 98.42 ರೂ
* ಕೋಲ್ಕತಾ: ಪೆಟ್ರೋಲ್ 110.49 ರೂ- ಡೀಸೆಲ್ 101.56ರೂ
* ಮುಂಬೈ: ಪೆಟ್ರೋಲ್ 115.85 ರೂ- ಡೀಸೆಲ್ 106.62 ರೂ
* ಚೆನ್ನೈ: ಪೆಟ್ರೋಲ್ 106.66 ರೂ- ಡೀಸೆಲ್ 102.59 ರೂ
* ಪಾಟ್ನಾ: ಪೆಟ್ರೋಲ್ 113.79 ರೂ- ಡೀಸೆಲ್ 105.07ರೂ
* ಹೈದರಾಬಾದ್: ಪೆಟ್ರೋಲ್ 114.49ರೂ- ಡೀಸೆಲ್ 107.40 ರೂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ